Asian Games: ಏಷ್ಯನ್ ಗೇಮ್ಸ್ ಭಾರತದ ಬಂಗಾರದ ಪುಟಗಳು
Team Udayavani, Sep 24, 2023, 12:23 AM IST
ಏಷ್ಯಾ ಖಂಡದ ಕ್ರೀಡಾಪಟುಗಳ ಮೆರೆದಾಟಕ್ಕೆ, ಪದಕ ಬೇಟೆಗೆ ವೇದಿಕೆ ಒದಗಿಸುವ ಬೃಹತ್ ಕ್ರೀಡಾಕೂಟವೇ ಈ ಏಷ್ಯಾಡ್ ಅಥವಾ ಏಷ್ಯನ್ ಗೇಮ್ಸ್. ಚೀನದ ಹ್ಯಾಂಗ್‌ಝೂನಲ್ಲಿ 2023ರ ಏಷ್ಯನ್ ಗೇಮ್ಸ್ ಅದ್ದೂರಿ ಆರಂಭ ಪಡೆದಿದೆ. ಭಾರತದ “ಟಾರ್ಗೆಟ್ ಪೋಡಿಯಂ-100′ ಎಷ್ಟರ ಮಟ್ಟಿಗೆ ಯಶಸ್ಸು ಕಂಡೀತು ಎಂಬುದು ಇಲ್ಲಿನ ಬಹು ದೊಡ್ಡ ನಿರೀಕ್ಷೆ.
ಏಷ್ಯಾಡ್ ಇತಿಹಾಸದಲ್ಲಿ ಭಾರತದ ಪದಕ ಬೇಟೆ ಶತಕದ ಗಡಿಗಿಂತ ಎಷ್ಟೋ ಹಿಂದಿದೆ. 2018ರ ಜಕಾರ್ತಾ ಕೂಟದಲ್ಲಿ 70 ಪದಕ ಜಯಿಸಿದ್ದೇ ಈವರೆಗಿನ ದಾಖಲೆ. ಏಷ್ಯಾಡ್‌ನಲ್ಲಿ ಭಾರತ ಈವರೆಗೆ ಗೆದ್ದ ಒಟ್ಟು ಪದಕಗಳ ಸಂಖ್ಯೆ 672. ಇದ ರಲ್ಲಿ 155 ಚಿನ್ನ, 201 ಬೆಳ್ಳಿ ಹಾಗೂ 316 ಕಂಚಿನ ಪದಕಗಳಾಗಿವೆ.
ಚೀನ, ಜಪಾನ್, ಕೊರಿಯಾ ಮೊದಲಾದ ನ್ಪೋರ್ಟ್ಸ್ ಪವರ್‌ಹೌಸ್‌ಗಳಿಗೆ ಹೋಲಿಸಿದರೆ ಭಾರತ ಏಷ್ಯಾಡ್ ಸಾಧನೆಯಲ್ಲಿ ಬಹಳ ಹಿಂದುಳಿದಿದೆ. ಆದರೆ ಈ ಕ್ರೀಡಾಮೇಳದಲ್ಲಿ ಭಾರತದಿಂದ ಕೆಲವು ಅವಿಸ್ಮರಣೀಯ ಸಾಧನೆಗಳು ದಾಖಲಾದುದನ್ನು ಮರೆಯುವಂತಿಲ್ಲ. ಇಂಥ ಕೆಲವು ಆಯ್ದ ಸಾಧನೆಗಳತ್ತ ಒಂದು ಹಿನ್ನೋಟ.
1951, 1962ರ ಫುಟ್‌ಬಾಲ್ ಚಿನ್ನ
ಹೊಸದಿಲ್ಲಿಯಲ್ಲಿ ನಡೆದ 1951ರ ಉದ್ಘಾಟನ ಏಷ್ಯಾಡ್‌ನಲ್ಲೇ ಭಾರತೀಯ ಫುಟ್‌ಬಾಲ್ ಕಮಾಲ್ ಮಾಡಿತು. ಬಲಿಷ್ಠ ಇರಾನ್ ತಂಡವನ್ನು 1-0 ಅಂತರದಿಂದ ಕೆಡವಿ ಬಂಗಾರ ಜಯಿಸಿತು. ಪ್ರಧಾನಿ ಜವಾಹರಲಾಲ್ ನೆಹರೂ ಸಮ್ಮುಖದಲ್ಲಿ ನಮ್ಮ ಫುಟ್ಬಾಲಿಗರು ಅಮೋಘ ಸಾಧನೆಗೈದಿದ್ದರು. ಭಾರತದ ಮತ್ತೂಂದು ಏಷ್ಯಾಡ್ ಫುಟ್‌ಬಾಲ್ ಚಿನ್ನ 1962ರ ಜಕಾರ್ತಾ ಕೂಟದಲ್ಲಿ ಒಲಿಯಿತು. ಅಂದು ಕೊರಿಯಾವನ್ನು 2-1 ಗೋಲುಗಳಿಂದ ಕೆಡವಿತ್ತು.
ಮಿಲ್ಖಾ ಸಿಂಗ್ ಅವಳಿ ಚಿನ್ನ
“ಹಾರುವ ಸಿಕ್ಖ್’ ಮಿಲ್ಖಾ ಸಿಂಗ್ ಒಲಿಂಪಿಕ್ಸ್‌ನಲ್ಲಿ ಕೂದ ಲೆಳೆಯ ಅಂತರದಿಂದ ಪದಕ ವಂಚಿತರಾಗಿರಬಹುದು. ಆದರೆ 1958ರ ಏಷ್ಯಾಡ್‌ನಲ್ಲಿ ಅವಳಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದನ್ನು ಮರೆಯುವಂತಿಲ್ಲ. ಟೋಕಿಯೊ ಗೇಮ್ಸ್‌ನ 200 ಮೀ. ಹಾಗೂ 400 ಮೀ. ಓಟದಲ್ಲಿ ಮಿಲ್ಖಾ ಸಿಂಗ್ ಈ ಸಾಧನೆಗೈದಿದ್ದರು.
ಚಿನ್ನದ ರಾಣಿ ಪಿ.ಟಿ. ಉಷಾ
ಮಿಲ್ಖಾ ಸಿಂಗ್ ದಾಖಲೆಯನ್ನು ಮೀರಿಸಿದವರು “ಪಯ್ಯೋಳಿ ಎಕ್ಸ್‌ಪ್ರೆಸ್’ ಖ್ಯಾತಿಯ ಓಟಗಾರ್ತಿ ಪಿ.ಟಿ. ಉಷಾ. 1986ರ ಸಿಯೋಲ್ ಏಷ್ಯಾಡ್‌ನಲ್ಲಿ ಅವರು 4 ಚಿನ್ನ, ಒಂದು ಬೆಳ್ಳಿ ಪದಕ ಜಯಿಸಿದ್ದಷ್ಟೇ ಅಲ್ಲ, ಎಲ್ಲ ರಾಷ್ಟ್ರೀಯ ದಾಖಲೆಗಳನ್ನೂ ಪುಡಿಗಟ್ಟಿದರು. 200 ಮೀ., 400 ಮೀ., 400 ಮೀ. ಹರ್ಡಲ್ಸ್ ಮತ್ತು 4×400 ಮೀ. ರಿಲೇಯಲ್ಲಿ ಉಷಾ ಬಂಗಾರ ಬಾಚಿದರು.
17ರ ರಾಣಾಗೆ ಶೂಟಿಂಗ್ ಚಿನ್ನ
17 ವರ್ಷದ ಜಸ್ಪಾಲ್ ರಾಣಾ ಶೂಟಿಂಗ್‌ನಲ್ಲಿ ಚಿನ್ನ ಜಯಿಸಿದ್ದಕ್ಕೆ ಸಾಕ್ಷಿಯಾದದ್ದು 1994ರ ಹಿರೋಶಿಮಾ ಏಷ್ಯಾಡ್. ಅವರು 25 ಮೀ. ಸೆಂಟರ್ ಫೈರ್ ಸ್ಪರ್ಧೆಯಲ್ಲಿ ಬಂಗಾರಕ್ಕೆ ಗುರಿ ಇರಿಸಿದರು. ಇದು ಏಷ್ಯಾಡ್ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಬಂಗಾರವಾಗಿತ್ತು.
ಮರಳಿದ ಹಾಕಿ ವೈಭವ
1998ರ ಬ್ಯಾಂಕಾಕ್ ಏಷ್ಯಾಡ್‌ಗೆ ಕಾಲಿಡುವಾಗ ಭಾರತೀಯ ಹಾಕಿ ವೈಭವವೆಲ್ಲ ಇತಿಹಾಸ ಸೇರಿತ್ತು. ವಿಶ್ವಕಪ್‌ನಲ್ಲಿ ಭಾರತ 9ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಧನರಾಜ್ ಪಿಳ್ಳೆ ಸಾರಥ್ಯದ ಭಾರತ ಏಷ್ಯಾಡ್‌ನಲ್ಲಿ ಐತಿಹಾಸಿಕ ಸಾಧನೆಗೈದಿತು. ಶೂಟೌಟ್‌ನಲ್ಲಿ ದಕ್ಷಿಣ ಕೊರಿಯಾವನ್ನು 5-3 ಗೋಲುಗಳಿಂದ ಮಣಿಸಿ ಮತ್ತೆ ಬಂಗಾರದ ದಿನಕ್ಕೆ ಮರಳಿತು.
ಬಿಲಿಯರ್ಡ್ಸ್ ಬಂಗಾರ
1998ರ ಬ್ಯಾಂಕಾಕ್ ಏಷ್ಯಾಡ್‌ನಲ್ಲಿ ಭಾರತದಿಂದ ದಾಖ ಲಾದ ಮತ್ತೂಂದು ಅವಿಸ್ಮರಣೀಯ ಸಾಧನೆಯೆಂದರೆ ಬಿಲಿಯರ್ಡ್ಸ್ ಬಂಗಾರ. ಇದನ್ನು ತಂದಿತ್ತವರು ಗೀತ್ ಸೇಠಿ-ಅಶೋಕ್ ಶಾಂಡಿಲ್ಯ ಜೋಡಿ.
ಮೇರಿ ಸ್ವರ್ಣ ಸವಾರಿ
ಏಷ್ಯಾಡ್ ಬಾಕ್ಸಿಂಗ್‌ನಲ್ಲಿ ಭಾರತದ ವನಿತಾ ಸ್ಪರ್ಧಿ ಯೊ ಬ್ಬರು ಮೊದಲ ಚಿನ್ನದ ಪದಕಕ್ಕೆ ಮುತ್ತಿಟ್ಟ ಅವಿ ಸ್ಮರ ಣೀಯ ಸಾಧನೆಗೆ ಸಾಕ್ಷಿಯಾದವರು ಎಂ.ಸಿ. ಮೇರಿ ಕೋಮ್. ಇದು ದಾಖಲಾದದ್ದು 2014ರ ಇಂಚಿಯಾನ್ ಗೇಮ್ಸ್‌ನಲ್ಲಿ. 51 ಕೆ.ಜಿ. ವಿಭಾಗದಲ್ಲಿ ಮೇರಿ ಈ ಸಾಧನೆಗೈದರು.
ನೀರಜ್ ಸ್ವರ್ಣ ಮುಹೂರ್ತ
ನೀರಜ್ ಚೋಪ್ರಾ ಅವರ ಇಂದಿನ ಬಂಗಾರದ ದಿನಗಳಿಗೆ ಮುಹೂರ್ತವಿರಿಸಿದ್ದೇ 2018ರ ಜಕಾರ್ತಾ ಏಷ್ಯಾಡ್. ಇಲ್ಲಿ 88.06 ಮೀ. ದೂರದ ಸಾಧನೆಯೊಂದಿಗೆ ನೀರಜ್ ಚಿನ್ನ ಜಯಿಸಿದರು. ತಮ್ಮದೇ 87.43 ಮೀಟರ್‌ಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.
ಮೊದಲ ಟಿಟಿ ಪದಕ
2018ರ ಜಕಾರ್ತಾ ಏಷ್ಯಾಡ್‌ನಲ್ಲಿ ಭಾರತ ಇನ್ನೊಂದು ಮೈಲುಗಲ್ಲು ನೆಟ್ಟಿತು. ಟೇಬಲ್ ಟೆನಿಸ್‌ನಲ್ಲಿ ಮೊದಲ ಪ ದಕ ಒಲಿದು ಬಂತು. ಪುರುಷರ ತಂಡ ಸ್ಪರ್ಧೆಯಲ್ಲಿ ಹಾಗೂ ಮಿಶ್ರ ವಿಭಾಗದಲ್ಲಿ ಭಾರತ ಕಂಚಿಗೆ ಕೊರಳೊಡ್ಡಿತು. ಅಚಂತ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಇಲ್ಲಿನ ಸಾಧಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.