Asian Games: ಹಿರಿಯ ಅನುಭವಿಗಳಿಗೆ ಮಿಂಚಲು ಕೊನೆಯ ಅವಕಾಶ
Team Udayavani, Oct 1, 2023, 1:39 AM IST
ಚೀನದ ಹ್ಯಾಂಗ್‌ಝೂನಲ್ಲಿ ಏಷ್ಯನ್ ಗೇಮ್ಸ್‌ನ ವಿವಿಧ ಸ್ಪರ್ಧೆಗಳು ಸದ್ಯ ನಡೆಯುತ್ತಿವೆ. ಕಿರಿಯರು, ಅನುಭವಿಗಳ ಜತೆ ನಿವೃತ್ತಿಯ ಅಂಚಿನಲ್ಲಿರುವ ಹಿರಿಯರೂ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಭಾರತ ಈ ಬಾರಿ ದಾಖಲೆ ಸಂಖ್ಯೆಯ ಕ್ರೀಡಾಪಟು ಗಳನ್ನು ಕಳುಹಿಸಿದೆ.
ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳ ಪೈಕಿ ಕೆಲವರು ಈ ಗೇಮ್ಸ್‌ನಲ್ಲಿ ಕೊನೆಯ ಬಾರಿ ಮಿಂಚಲು ಹಾತೊರೆಯುತ್ತಿದ್ದಾರೆ. ಅವರಲ್ಲಿ ಟೆನಿಸ್ ತಾರೆ ರೋಹನ್ ಬೋಪಣ್ಣ, ಹಾಕಿ ಗ್ರೇಟ್ ಪಿ.ಆರ್. ಶ್ರೀಜೇಶ್, ಟಿಟಿ ಲೆಜೆಂಡ್ ಶರತ್ ಕಮಾಲ್ ಮುಂತಾದವರಿದ್ದಾರೆ. 40ರ ಹರೆಯದಲ್ಲೂ ಶರತ್ ಮತ್ತು ಬೋಪಣ್ಣ ಈಗಲೂ ವಿಶ್ವ ದರ್ಜೆಯ ನಿರ್ವಹಣೆ ನೀಡುತ್ತಿದ್ದರೆ ಶ್ರೀಜೇಶ್ ಗೋಡೆಯಾಗಿ ನಿಂತು ಭಾರತೀಯ ಹಾಕಿಯನ್ನು ಕಾಯುತ್ತಿದ್ದಾರೆ. ಇವರ ಜತೆ ಬಜರಂಗ್ ಪೂನಿಯ, ದೀಪಿಕಾ ಪಳ್ಳಿಕಲ್, ಅಂಕಿತಾ ರೈನಾ, ಸೀಮಾ ಪೂನಿಯ ಅವರೆಲ್ಲ ಈ ಗೇಮ್ಸ್ ಬಳಿಕ ಗುಡ್‌ಬೈ ಹೇಳುವ ಸಾಧ್ಯತೆಯಿದೆ. ಅವರೆಲ್ಲ ತಮ್ಮ ಕ್ರೀಡಾ ಬಾಳ್ವೆ ವೇಳೆ ಅಮೋಘ ಸಾಧನೆ ಮಾಡಿದವರು. ಇಲ್ಲಿಯೂ ಪದಕ ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ. ಅವರೆಲ್ಲರ ಸಾಧನೆಯ ಹಿನ್ನೋಟ ಇಲ್ಲಿದೆ.
ರೋಹನ್ ಬೋಪಣ್ಣ
43ರ ಹರೆಯದ ರೋಹನ್ ಬೋಪಣ್ಣ ಟೆನಿಸ್ ಸ್ಪರ್ಧೆಯ ಡಬಲ್ಸ್ ವಿಭಾಗದ ಮಹಾನ್ ಸಾಧಕರಲ್ಲಿ ಒಬ್ಬರಾಗಿದ್ದಾರೆ. ಈ ಋತುವಿನಲ್ಲಿ ವಿಂಬಲ್ಡನ್‌ನ ಸೆಮಿಫೈನಲ್ ಮತ್ತು ಯುಎಸ್ ಓಪನ್‌ನ ಫೈನಲಿಗೇರಿ ಅಮೋಘ ನಿರ್ವಹಣೆ ನೀಡಿದ್ದಾರೆ. ಇತ್ತೀಚೆಗೆ ಡೇವಿಸ್ ಕಪ್‌ಗೆ ವಿದಾಯ ಹೇಳಿ ಟೆನಿಸ್ ಪ್ರಿಯರನ್ನು ಅಚ್ಚರಿಗೊಳಿಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲೂ ಅವರು ಮಹೋನ್ನತ ಸಾಧನೆ ದಾಖಲಿಸಿದ್ದಾರೆ. 2002ರ ಗೇಮ್ಸ್ ಮೂಲಕ ಪದಾರ್ಪಣೆಗೈದ ಅವರು ಕಳೆದ ಜಕಾರ್ತಾ ಗೇಮ್ಸ್‌ನ ಡಬಲ್ಸ್‌ನಲ್ಲಿ ದಿವಿಜ್ ಶರಣ್ ಜತೆಗೂಡಿ ಚಿನ್ನ ಗೆದ್ದು ಸಂಭ್ರಮಿಸಿದ್ದರು. ಆದರೆ ಈ ಬಾರಿ ಈ ಡಬಲ್ಸ್ ಚಿನ್ನ ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಆರಂಭಿಕ ಸುತ್ತಿನಲ್ಲಿಯೇ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ಆದರೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಋತುಜಾ ಭೋಸ್ಲೆ ಜತೆಗೂಡಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.
ಶರತ್ ಕಮಲ್
41ರ ಹರೆಯದ ಶರತ್ ಕಮಲ್ ಐದನೇ ಬಾರಿ ಗೇಮ್ಸ್‌ನಲ್ಲಿ ಆಡುತ್ತಿ ದ್ದಾರೆ. ಎರಡು ಪದಕ ಗೆದ್ದಿರುವ ಅವರು ಪ್ರಮುಖ ಕೂಟದಲ್ಲಿ ಅಸಾಧಾರಣ ನಿರ್ವಹಣೆ ನೀಡಿದ ಸಾಧಕರಾಗಿ ದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನ ಗೆದ್ದು ಸಂಭ್ರ ಮಿಸಿದ್ದಾರೆ. ಕಳೆದ ಗೇಮ್ಸ್‌ನ ಮಿಕ್ಸೆಡ್ ವಿಭಾಗದಲ್ಲಿ ಕಂಚು ಜಯಿಸಿದ್ದ ಅವರು ಈ ಬಾರಿ ಪದಕ ಗೆಲ್ಲಲು ವಿಫಲರಾಗಿ ನಿರಾಶೆ ಅನುಭವಿಸಿದ್ದಾರೆ. ಇದೇ ನಿರಾಶೆಯಿಂದ ಗೇಮ್ಸ್ ನಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ.
ಅಂಕಿತಾ ರೈನಾ
ಪದಕ ಗೆಲ್ಲುವ ಭರವಸೆಯಾಗಿ ಕಣಕ್ಕೆ ಇಳಿದಿದ್ದ 30ರ ಹರೆಯದ ಅಂಕಿತಾ ರೈನಾ ಈ ಗೇಮ್ಸ್‌ನ ಡಬಲ್ಸ್‌ನಲ್ಲಿ ನಿರಾಶೆ ಮೂಡಿಸಿದ್ದಾರೆ. ಮಿಕ್ಸೆಡ್ ಡಬಲ್ಸ್‌ನ ಸ್ಪರ್ಧೆ ನಡೆಯುತ್ತಿದೆ. 2018ರ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅಂಕಿತಾ ಈ ಸಾಧನೆಗೈದ ಭಾರತದ ಎರಡನೇ ವನಿತಾ ಟೆನಿಸ್ ಸಾಧಕಿಯಾಗಿ ದ್ದಾರೆ. ಸಾನಿಯಾ ಮಿರ್ಜಾ ಪದಕ ಗೆದ್ದವರಲ್ಲಿ ಮೊದಲಿಗರಾಗಿದ್ದರು.
ಪಿ.ಆರ್. ಶ್ರೀಜೇಶ್
ಭಾರತೀಯ ಹಾಕಿಯ ಯಶಸ್ವಿ ಗೋಲ್‌ಕೀಪರ್‌ಗಳಲ್ಲಿ ಪಿಆರ್ ಶ್ರೀಜೇಶ್ ಒಬ್ಬರಾಗಿದ್ದಾರೆ. 301 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವಿ. ಅವರ ಉತ್ಕೃಷ್ಟ ನಿರ್ವಹಣೆ ಯಿಂದ ಭಾರತ 4 ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮರಳಿ ಪಡೆಯಲು ಅವರ ಫಾರ್ಮ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಕಳೆದ ಬಾರಿ ತಂಡ ಕಂಚಿನ ಪದಕ ಗೆದ್ದಿತ್ತು.
ದೀಪಿಕಾ ಪಳ್ಳಿಕಲ್
ಇಬ್ಬರು ಮಕ್ಕಳ ತಾಯಿ ದೀಪಿಕಾ ಪಳ್ಳಿಕಲ್ ಅವರಿಗಿದು ಕೊನೆಯ ಗೇಮ್ಸ್ ಆಗಿರಬಹುದು. 32ರ ಹರೆಯದ ಅವರು ಈ ಹಿಂದೆ ಸಿಂಗಲ್ಸ್ ಮತ್ತು ತಂಡ ವಿಭಾಗದಲ್ಲಿ ಹಲವು ಪದಕ ಗೆದ್ದ ಸಾಹಸಿ. ಈ ಬಾರಿ ಆಕೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಹರೀಂದರ್ ಪಾಲ್ ಸಂಧು ಜತೆ ಸ್ಪರ್ಧಿಸುತ್ತಿದ್ದಾರೆ. ಈ ಸ್ಪರ್ಧೆ ಇನ್ನಷ್ಟೇ ನಡೆಯಬೇಕಾಗಿದ್ದು ಪದಕದ ನಿರೀಕ್ಷೆಯಲ್ಲಿದ್ದಾರೆ.
ಕುಸ್ತಿಯಲ್ಲಿ ಚಾಂಪಿಯನ್ ಬಜರಂಗ್ ಪೂನಿಯ, ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯ ಅವರಿಗೆಲ್ಲ ಇದು ಕೊನೆಯ ಗೇಮ್ಸ್ ಆಗಿರುವ ಸಾಧ್ಯತೆ ಇದೆ. ಬಜರಂಗ್ ಕಳೆದ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಹಸಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಅವರು ಮತ್ತೂಮ್ಮೆ ಚಿನ್ನಕ್ಕೆ ಪ್ರಯತ್ನಿಸುವ ಸಾಧ್ಯತೆಯಿದೆ.
ಪಿ. ಶಂಕರ ನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.