![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 11, 2020, 6:38 AM IST
ಅಮ್ಮಾನ್ (ಜೋರ್ಡಾನ್): ಭಾರತದ ವಿಕಾಸ್ ಕೃಷ್ಣನ್ ಅವರು ಯಶಸ್ವಿ ತಂತ್ರಗಾರಿಕೆಯ ಆಟದ ಮೂಲಕ ಏಶ್ಯನ್ ಒಲಿಂಪಿಕ್ ಕ್ವಾಲಿಫೈಯರ್ನಲ್ಲಿ ಫೈನಲ್ ಹಂತಕ್ಕೇರಿದ್ದಾರೆ. ಇದೇ ವೇಳೆ ಲೆಜೆಂಡರಿ ಬಾಕ್ಸರ್ ಎಂ.ಸಿ. ಮೇರಿಕೋಮ್ ಮತ್ತು ವಿಶ್ವದ ನಂಬರ್ ವನ್ ಅಮಿತ್ ಪಂಘಲ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾರತದ ಇನ್ನೋರ್ವ ಬಾಕ್ಸರ್ ಲೊವಿÉನಾ ಬೊರ್ಗೊಹೈನ್ (69 ಕೆ.ಜಿ.) ಕೂಡ ಕಂಚು ಪಡೆದಿದ್ದಾರೆ. ಈ ನಾಲ್ವರು ಸೆಮಿಫೈನಲಿಗೇರುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಗೊಂಡಿದ್ದರು. ಫೈನಲ್ ಹಂತಕ್ಕೇರಿರುವ ವಿಕಾಸ್‌ಕೃಷ್ಣನ್ ಅವರಿಂದ ಕಡಿಮೆಪಕ್ಷ ಬೆಳ್ಳಿಯ ಪದಕ ನಿರೀಕ್ಷಿಸಬಹುದು.
ಕಣ್ಣಿನ ಕೆಳಭಾಗದಲ್ಲಿ ಸ್ವಲ್ಪ ಗಾಯವಾಗಿದ್ದರೂ ತಂತ್ರಗಾರಿಕೆಯ ಆಟವಾಡಿದ ವಿಕಾಸ್‌ಕೃಷ್ಣನ್ ಅವರು 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಕಝಾಕ್‌ಸ್ಥಾನದ ಅಬಲೈಕಾನ್ ಝುಸುಪೋವ್ ಅವರನ್ನು ಸದೆಬಡಿಯಲು ಯಶಸ್ವಿಯಾದರು. 28ರ ಹರೆಯದ ಕೃಷ್ಣನ್ ಫೈನಲ್‌ನಲ್ಲಿ ಆತಿಥೇಯ ನಾಡಿನ ಇಶೈಹ ಹುಸೈನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಅವರು ಇನ್ನೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಮತ್ತು ಏಶ್ಯನ್ ಚಿನ್ನವಿಜೇತ ಬೊಬೊ ಉಸ್ಮೋನ್ ಬಾಟುರೋವ್ ಅವರನ್ನು ಮಣಿಸಿದ್ದರು.
ಈ ನಾಲ್ವರಲ್ಲದೇ ಆಶಿಷ್ ಕುಮಾರ್, ಸತೀಶ್ ಕುಮಾರ್, ಪೂಜಾರಾಣಿ ಮತ್ತು ಸಿಮ್ರಾನ್‌ಜಿತ್ ಕೌರ್ ಅವರು ಕೂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.
ಮೇರಿಕೋಮ್ ನಿರಾಸೆ
ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಸೆಮಿಫೈನಲ್‌ನಲ್ಲಿ ಚೀನದ ಚಾಂಗ್ ಯುಯಾನ್ ಕೈಯಲ್ಲಿ 1-4 ಅಂತರದಿಂದ ಸೋತಿರುವುದು ನಿರಾಸೆ ತಂದಿದೆ. ಯುಯಾನ್ ಈ ಹಿಂದೆ ಯೂತ್ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವ ಬೆಳ್ಳಿ ವಿಜೇತ ಮತ್ತು ಅಗ್ರ ಶ್ರೇಯಾಂಕದ ಅಮಿತ್ ಪಂಘಲ್ ಅವರು ಚೀನದ ಜಿಯಾನ್‌ಗುವಾನ್ ಹು ಕೈಯಲ್ಲಿ 2-3 ಅಂತರದಿಂದ ಸೋತು ಕಂಚಿಗೆ ತೃಪ್ತಿಪಟ್ಟರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

You seem to have an Ad Blocker on.
To continue reading, please turn it off or whitelist Udayavani.