Assam: ದೀರ್ಘ ಕಾಲ ದೇಶ ಆಳಿದವರು ಸಂಸ್ಕೃತಿ ಮರೆತರು: ಪ್ರಧಾನಿ ನರೇಂದ್ರ ಮೋದಿ
ಗುವಾಹಟಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ಲೇವಡಿ- ಅಸ್ಸಾಂನಲ್ಲಿ 11600 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಚಾಲನೆ
Team Udayavani, Feb 4, 2024, 9:33 PM IST
ಗುವಾಹಟಿ: ದೇಶವನ್ನು ದೀರ್ಘಕಾಲ ಆಳಿದ ಪಕ್ಷಗಳು, ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮದೇ ಸಂಸ್ಕೃತಿ-ಇತಿಹಾಸದ ಬಗ್ಗೆ ನಾಚಿಕೆಪಟ್ಟುಕೊಂಡವು. ಯಾವುದೇ ರಾಷ್ಟ್ರವೂ ತನ್ನ ಇತಿಹಾಸವನ್ನು ನಾಶ ಮಾಡಿ, ಬೇರುಗಳನ್ನು ಕಡಿದುಕೊಂಡು ಬಾಳಲು ಸಾಧ್ಯವಿಲ್ಲ… ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಗುವಾಹಟಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು. ಈ ವೇಳೆ ಅವರು ಕಾಮಾಖ್ಯ ಶಕ್ತಿಪೀಠವೂ ಸೇರಿದಂತೆ ಇಡೀ ಅಸ್ಸಾಮ್‌ನ ಅಭಿವೃದ್ಧಿಗೆ ಪೂರಕವಾಗುವ; 11,600 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಾಮಾಖ್ಯ ದೇವಸ್ಥಾನವನ್ನು ಕೇಂದ್ರ ಸರ್ಕಾರ, “ಕಾಮಾಖ್ಯ ದಿವ್ಯಲೋಕ ಪರಿಯೋಜನಾ” ಮೂಲಕ, 498 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಿದೆ. ಈ ಕ್ಷೇತ್ರ ಅಭಿವೃದ್ಧಿಯಾದರೆ ಶಕ್ತಿಪೀಠಕ್ಕೆ ಭಾರೀ ಪ್ರಮಾಣದಲ್ಲಿ ಭಕ್ತರು ಹರಿದುಬರಲಿದ್ದಾರೆ. ಸಂಪೂರ್ಣ ಈಶಾನ್ಯಭಾರತದ ಪ್ರವಾಸೋದ್ಯಮಕ್ಕೂ ಇದರಿಂದ ಉತ್ತೇಜನ ಸಿಗಲಿದೆ. ಈ ಪೀಠ ಈಶಾನ್ಯಭಾಗದ ದ್ವಾರವಾಗಲಿದೆ. ಸಾವಿರಾರು ವರ್ಷಗಳ ಕಾಲ ಸವಾಲುಗಳನ್ನು ಎದುರಿಸಿದರೂ, ಇವೆಲ್ಲ ನಮ್ಮ ಸಂಸ್ಕೃತಿಯ ಸಂಕೇತಗಳಾಗಿ ಉಳಿದುಕೊಂಡಿವೆ. ನಮ್ಮ ಶ್ರೇಷ್ಠ ಸಂಸ್ಕೃತಿಯ ಇಂತಹ ಹಲವು ಶಕ್ತಿಕೇಂದ್ರಗಳು ಈಗ ಅಳಿವಿನಂಚಿನಲ್ಲಿವೆ ಎಂದು ಮೋದಿ ಹೇಳಿದ್ದಾರೆ.
ಏನೇನು ಯೋಜನೆಗಳು?
– ಕಾಮಾಖ್ಯ ಶಕ್ತಿ ಪೀಠದ ಅಭಿವೃದ್ಧಿ ಯೋಜನೆ
– ನೆಹರೂ ಫುಟ್ಬಾಲ್ ಸ್ಟೇಡಿಯಂ ಅಭಿವೃದ್ಧಿ
– ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.