Asteroid: ಭೂಮಿಗೆ ಬಂತು ಕ್ಷುದ್ರಗ್ರಹ ಸ್ಯಾಂಪಲ್‌

ಧೂಳನ್ನು ಹೊತ್ತು ತಂದ ನಾಸಾದ ಕ್ಯಾಪ್ಸೂಲ್‌

Team Udayavani, Sep 25, 2023, 12:32 AM IST

ASTEROID
ವಾಷಿಂಗ್ಟನ್‌: ಬರೋಬ್ಬರಿ 7 ವರ್ಷಗಳ ಬಾಹ್ಯಾಕಾಶ ಪಯಣದ ಬಳಿಕ ನಾಸಾದ ಕ್ಯಾಪ್ಸೂéಲ್‌ರವಿವಾರಕ್ಷುದ್ರಗ್ರಹದ ಅತಿದೊಡ್ಡ ಮಾದರಿಯನ್ನು ಹೊತ್ತು ಯಶಸ್ವಿಯಾಗಿ ಭೂಮಿಗೆ ಮರಳಿದೆ!
ಹೌದು, ಈವರೆಗೆ ಮನುಷ್ಯರ್ಯಾರೂ ಸಂಗ್ರಹಿಸದೇ ಇರುವಂಥ ಅತಿದೊಡ್ಡ ಸ್ಯಾಂಪಲ್‌ ಅನ್ನು ಈ ಕ್ಯಾಪ್ಸೂಲ್‌ ಹೊತ್ತುತಂದಿದ್ದು,ರವಿವಾರಅಮೆರಿಕದ ಉಟಾಹ್‌ನಲ್ಲಿನ ಮರಳುಗಾಡಿನಲ್ಲಿ ಇಳಿದಿದೆ. ಬಾಹ್ಯಾಕಾಶಕ್ಕೆ ತೆರಳಿದ್ದ ಒಸಿರಿಸ್‌-ರೆಕ್ಸ್‌ ನೌಕೆಯು ಭೂಮಿಗೆ ಇಳಿಯುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಈ ಪ್ರಕ್ರಿಯೆಯು ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು.
ಮೊದಲಿಗೆ ಬಾಹ್ಯಾಕಾಶ ನೌಕೆಯು ಭೂಮಿಯಿಂದ 1 ಲಕ್ಷ ಕಿಲೋ ಮೀಟರ್‌ ದೂರದಿಂದ (63 ಸಾವಿರ ಮೈಲು) ಕ್ಷುದ್ರಗ್ರಹದ ಸ್ಯಾಂಪಲ್‌ ಅನ್ನು ಬಿಡುಗಡೆ ಮಾಡಿತು. ಇದಾದ 4 ಗಂಟೆಗಳ ನಂತರ ಈ ಕ್ಯಾಪ್ಸೂéಲ್‌ ಭೂಮಿಯತ್ತ ಆಗಮಿಸಿ, ಲ್ಯಾಂಡ್‌ ಆಗಿದೆ.
ಯಾವ ಕ್ಷುದ್ರಗ್ರಹ?: ಹೇರಳವಾಗಿ ಇಂಗಾಲವನ್ನು ಹೊಂದಿರುವಂಥ “ಬೆನ್ನು’ ಎಂಬ ಕ್ಷುದ್ರಗ್ರಹದ ಮಾದರಿಯನ್ನು ಕ್ಯಾಪ್ಸೂಲ್‌ ಹೊತ್ತುತಂದಿದೆ ಎಂದು ನಾಸಾ ವಿಜ್ಞಾನಿಗಳು ಊಹಿಸಿದ್ದಾರೆ. ಆದರೆ, ಸ್ಯಾಂಪಲ್‌ ಬಂದಿರುವ ಕಂಟೈನರ್‌ ಅನ್ನು ತೆರೆದ ಬಳಿಕವೇ ಒಳಗೇನಿದೆ ಎಂಬುದು ತಿಳಿದುಬರಲಿದೆ. ಬಳಿಕ, ಆ ಸ್ಯಾಂಪಲ್‌ಗ‌ಳ ಅಧ್ಯಯನ ಆರಂಭವಾಗಲಿದೆ.
ಈ ಹಿಂದೆ, ಇಂಥದ್ದೊಂದು ಪ್ರಯೋಗ ಮಾಡಿದ ಏಕೈಕ ದೇಶವೆಂದರೆ ಜಪಾನ್‌. ಅದು ಕೆಲವೊಂದು ಕ್ಷುದ್ರಗ್ರಹ ಯೋಜನೆಗಳನ್ನು ಹಮ್ಮಿಕೊಂಡು, ಒಂದು ಚಮಚದಷ್ಟು ಮಾದರಿಗಳನ್ನು ಭೂಮಿಗೆ ತರುವಲ್ಲಿ ಯಶಸ್ವಿಯಾಗಿತ್ತು.
250 ಗ್ರಾಂ ಧೂಳು ಸಂಗ್ರಹ
ಸುಮಾರು 500 ಮೀ. ವ್ಯಾಸವುಳ್ಳ ಬೆನ್ನು ಕ್ಷುದ್ರಗ್ರಹವು ಭಾರೀ ಪ್ರಮಾಣದಲ್ಲಿ ಇಂಗಾಲವನ್ನು ಹೊಂದಿದೆ. ಅದರ ಖನಿಜಗಳಲ್ಲಿ ನೀರಿನ ಕಣಗಳು ಇರಬಹುದು ಎನ್ನುವುದು ವಿಜ್ಞಾನಿಗಳ ಊಹೆ. 2016ರಲ್ಲಿ ನಾಸಾವು ಬೆನ್ನುವಿನತ್ತ ತನ್ನ ಕ್ಯಾಪ್ಸೂಲ್‌ ಅನ್ನು ಕಳುಹಿಸಿತ್ತು. 2020ರಲ್ಲಿ ಅದು ಕ್ಷುದ್ರಗ್ರಹವನ್ನು ತಲುಪಿತ್ತು. ಕ್ಷುದ್ರಗ್ರಹದ ಕಲ್ಲುಮಣ್ಣುಗಳಿರುವ ಮೇಲ್ಮೆ„ನಿಂದ 250 ಗ್ರಾಂ ಧೂಳನ್ನು ಸಂಗ್ರಹಿಸುವಲ್ಲಿ ಕ್ಯಾಪ್ಸೂéಲ್‌ ಯಶಸ್ವಿಯಾಗಿತ್ತು.
ಅನುಕೂಲವೇನು?
ನಮ್ಮ ಸೌರವ್ಯೂಹದ ರಚನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬಹುದು
ಭೂಮಿಯು ಮಾನವ ವಾಸಯೋಗ್ಯ ಆಗಿದ್ದು ಹೇಗೆ ಎಂಬ ಬಗ್ಗೆ ಗೊತ್ತಾಗಬಹುದು
ಭೂಮಿ ಗೆ ಅಪಾಯವನ್ನು ಉಂಟುಮಾಡುವಂಥ ಕ್ಷುದ್ರಗ್ರಹಗಳ ಪತ್ತೆಗೆ ನೆರವಾಗಬಹುದು

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.