![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jun 25, 2024, 11:55 PM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಬಿಸಿಲೆ ಘಾಟ್ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ಯುವಕರ ತಂಡದ ಮೇಲೆ ಅಲ್ಲಿನ ವ್ಯಕ್ತಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಸಲೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಕೊಟ್ಟಾರದ ಯುವಕ ತನ್ನ ಗೆಳೆಯರೊಂದಿಗೆ ಜೂ. 23ರಂದು ಪಟ್ಲಬೆಟ್ಟಕ್ಕೆ ಪ್ರವಾಸ ತೆರಳಿ ಪ್ರವಾಸಿ ತಾಣ ವೀಕ್ಷಿಸಿ ಹಿಂತಿರುಗುವ ವೇಳೆ ಪಟ್ಲಬೆಟ್ಟದ ಪ್ರವೇಶ ದಾರಿಯಲ್ಲಿದ್ದ ಬಾಡಿಗೆ ಚಾಲಕರು ಪ್ರವಾಸಕ್ಕೆ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿ ಮೊದಲು ಕೆಟ್ಟ ಪದಗಳನ್ನು ಬಳಸಿ ಶೋಷಣೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಗೂಂಡಗಿರಿ ನಡೆಸಿದ ಆರೋಪಿಗಳಾದ ಗಗನ್, ಕಿರಣ್, ನಿಶಾಂತ್ ಹಾಗೂ ಮದನ್ ಅವರ ಮೇಲೆ ಕಠಿನ ಕ್ರಮಕ್ಕೆ ಈಮೇಲ್ ಮೂಲಕ ಮಂಗಳೂರಿನ ಭವಿತ್ ಅವರು ಯಸಲೂರು ಠಾಣೆಗೆ ದೂರು ಸಲ್ಲಿಸಿದ್ದರು. ಯಸಲೂರು ಪೊಲೀಸರು ತನಿಖೆ ನಡೆಸಿ ಕೃತ್ಯ ಎಸಗಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಯುವಕರ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಪಟ್ಲಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ನಿಯಮಬಾಹಿರ ಸುಲಿಗೆ ಕೃತ್ಯ ನಡೆಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯದ ಯುವಕರ ತಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಂಗಳವಾರ ಸುಬ್ರಹ್ಮಣ್ಯದಲ್ಲಿ ಮನವಿ ಮಾಡಿದ್ದರು.
You seem to have an Ad Blocker on.
To continue reading, please turn it off or whitelist Udayavani.