ಒಲಿಂಪಿಕ್ಸ್‌ನಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನ


Team Udayavani, Jun 26, 2021, 7:15 AM IST

ಒಲಿಂಪಿಕ್ಸ್‌ನಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನ

ಮುಂದಿನ ತಿಂಗಳು ಟೋಕಿಯೊದಲ್ಲಿ ಆರಂಭವಾಗಲಿರುವ ಒಲಿಂಪಿಕ್‌ ಕ್ರೀಡಾಕೂಟ ಕ್ಕಾಗಿ ಭಾರತದ ಕ್ರೀಡಾಪಟುಗಳು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುವುದು ಕಂಡುಬರುತ್ತಿದೆ. ಸಾಂಕ್ರಾಮಿಕ ಮತ್ತು ಅದು ಒಡ್ಡಿರುವ ಸವಾಲುಗಳ ಹೊರತಾಗಿಯೂ ಭಾರತದ ಕ್ರೀಡಾಪಟುಗಳ ಸಿದ್ಧತೆಯಿಂದಾಗಿ ಅವರಲ್ಲಿನ ಅಪಾರ ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ಎಲ್ಲರೂ ನೋಡಬಹು ದಾಗಿದೆ.

ಈ ಭರವಸೆಯ ಪ್ರಭೆಯು ಎಲ್ಲಿಂದ ಹೊರ ಹೊಮ್ಮುತ್ತದೆ ಎಂಬುದನ್ನು ನೋಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. 1 ವರ್ಷ ಮುಂದೂ ಡಲಾಗಿದ್ದ ಟೋಕಿಯೊ ಒಲಿಂಪಿಕ್ಸ್‌ 2020ರ ತಂಡದಲ್ಲಿರುವ 125ಕ್ಕೂ ಹೆಚ್ಚು ಕ್ರೀಡಾಪಟುಗಳಲ್ಲಿ ಪ್ರತಿಯೊಬ್ಬರೂ ವಿಶಿಷ್ಟ ಸನ್ನಿವೇಶಗಳಲ್ಲಿ ಬಂಧಿಗ ಳಾಗಿದ್ದರು, ಕ್ರೀಡಾಕೂಟಕ್ಕಿಂತ ಮುಂಚಿತವಾಗಿ ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಸ್ಪರ್ಧಾತ್ಮಕ ವಾಗಿ ಉತ್ತಮ ಸ್ಥಿತಿಯಲ್ಲಿರಲು ಅವರು ಸರ್ವ ಪ್ರಯತ್ನಗಳನ್ನೂ ಮಾಡಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶ ಪಡೆದಿರುವ ನಮ್ಮ ಬ್ಯಾಡ್ಮಿಂಟನ್‌ ಆಟಗಾರರಿಗೆ ಅವರು ಬಯಸಿದ ಬೆಂಬಲ ದೊರೆತಿದೆ ಎಂದು ಹೇಳುವುದು ನ್ಯಾಯೋಚಿತವಾಗಿದೆ. ಇಂದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪ್ರತಿಯೊಬ್ಬರೂ ಸಾಗರೋತ್ತರ ತರಬೇತುದಾರ, ಫಿಸಿಯೋಥೆರಪಿಸ್ಟ್‌ ಮತ್ತು ಶಕ್ತಿ ಮತ್ತು ಕಂಡೀಶನಿಂಗ್‌ ತರಬೇತುದಾರರ ಸಹಾಯ ಪಡೆಯುತ್ತಿದ್ದಾರೆ. ಇಂತಹ ವೈಯಕ್ತಿಕ ಗಮನಕ್ಕಾಗಿ ಬಹಳ ಕಾಲದಿಂದಲೂ ಕೂಗು ಕೇಳಿಬಂದಿತ್ತು. ಇದು ಉನ್ನತ ದೇಶಗಳ ಕ್ರೀಡಾ ಪಟುಗಳು ಬಯಸುವ ಪರಿಸ್ಥಿತಿಯಾಗಿದೆ.

ರಿಯೋದಲ್ಲಿ ನಡೆದ 2016 ರ ಒಲಿಂಪಿಕ್ಸ್‌ ಬಗ್ಗೆ ಹಿಂದಿರುಗಿ ನೋಡಿದಾಗ, ಭಾರತೀಯ ತಂಡವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೂ, ಪ್ರಧಾನಮಂತ್ರಿಯವರು ತಂಡವನ್ನು ಸಂಪೂರ್ಣ ವಾಗಿ ಬೆಂಬಲಿಸಿದರು. ರಿಯೋ ಹಿನ್ನೆಲೆಯಲ್ಲಿ ಅವರು ನೇಮಿಸಿದ ಒಲಿಂಪಿಕ್ಸ್‌ ಕಾರ್ಯಪಡೆಯಲ್ಲಿ ನಾನು ಭಾಗವಾಗಿದ್ದೆ. ಉನ್ನತ ಮಟ್ಟದಿಂದ ತಳಮಟ್ಟದವರೆಗೆ ತೀವ್ರ ಆಸಕ್ತಿಯಿಂದ ದೇಶದ ಕ್ರೀಡೆಯಲ್ಲಿ ಸಕಾರಾತ್ಮಕ ಮತ್ತು ಹೆಚ್ಚು ವೃತ್ತಿಪರ ವಾತಾವರಣವನ್ನು ಸೃಷ್ಟಿಸುವ ಮೂಲಕ ಭಾರತದ ಕ್ರೀಡಾರಂಗದಲ್ಲಿ ಬದಲಾವಣೆ ಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಈಗ ನಾನು ನೋಡುತ್ತಿದ್ದೇನೆ.

ಗಮನಾರ್ಹ ಬದಲಾವಣೆಯಲ್ಲಿ, ಭಾರತವು “ಕ್ರೀಡಾಪಟುಗಳು ಮೊದಲು’ -ಆ್ಯತ್ಲೀಟ್ಸ್‌ ಫಸ್ಟ್‌’- ಎಂಬುದನ್ನು ಅಳವಡಿಸಿಕೊಂಡಿದೆ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಮೂಲಕ ಅವರ ಅಗತ್ಯಗಳ ಪೂರೈಕೆಯನ್ನು ಖಚಿತಪಡಿಸಿದೆ. ಕ್ರೀಡಾ ಜಗತ್ತಿನ ಅತೀ ದೊಡ್ಡ ಹಬ್ಬಕ್ಕೆ ಕ್ರೀಡಾ ಪಟುಗಳು ಸಿದ್ಧವಾಗಲು ನೆರವಾಗುವ ತುರ್ತು ಸ್ಥಿತಿಯನ್ನು ಸೃಷ್ಟಿಸುವ ಮೂಲಕ ಅವರ ಅಗತ್ಯ ವನ್ನು ಈಡೇರಿಸಲು ತೆಗೆದುಕೊಳ್ಳುವ ಪ್ರಕ್ರಿಯೆಯ ಸಮಯವನ್ನು ತಗ್ಗಿಸಲಾಯಿತು. ಈ ಉದ್ದೇಶಕ್ಕೆ ಪ್ರತಿಯೊಬ್ಬರೂ ಒಮ್ಮನಸ್ಸಿನಿಂದ ಸ್ಪಂದಿಸುವಂತೆ ಮಾಡಲಾಯಿತು.

ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಮತ್ತು ಭಾರತೀಯ ಒಲಿಂಪಿಕ್ಸ್‌ ಸಂಘಟನೆ, ಯುವ ವ್ಯವ ಹಾರ ಮತ್ತು ಕ್ರೀಡಾ ಸಚಿವಾಲಯಗಳ ನಿಕಟ ಸಮನ್ವಯದಿಂದಾಗಿ ತರ ಬೇತುದಾರರ ಒಪ್ಪಂದ ಗಳನ್ನು ವಿಸ್ತರಿಸಲಾಯಿತು. ದೇಶಾದ್ಯಂತದ ಶ್ರೇಷ್ಠತಾ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಬಿರಗಳು ಸುರಕ್ಷಿತ ರೀತಿಯಲ್ಲಿ ಪುನರಾರಂಭಗೊಂಡವು.

ಟೋಕಿಯೊ 2021ರಲ್ಲಿ ಈ ಪ್ರಯತ್ನಗಳು ಫಲ ನೀಡಲಿ ಎಂಬುದು ನನ್ನ ಆಶಯ ಮತ್ತು ಬಯಕೆಯಾಗಿದೆ. ನಮ್ಮ ಕ್ರೀಡಾಪಟುಗಳ ಮೇಲೆ ನಾವು ಗಮನಾರ್ಹವಾಗಿ ಗಮನ ಕೇಂದ್ರೀಕರಿ ಸಿರುವುದರಿಂದ ಇದು ನಮಗೆ ಒಂದು ಮಹತ್ವದ ತಿರುವು ಆಗಿದೆ. ಇದರಲ್ಲಿ ಧನಾತ್ಮಕ ಪ್ರಯೋಜನವೂ ಇದೆ. ಏಕೆಂದರೆ ಕ್ರೀಡೆಗಳತ್ತ ಹೆಚ್ಚು ಮಂದಿ ಆಕರ್ಷಿತರಾಗಲು ಇದು ಪ್ರೇರೇಪಿಸುತ್ತದೆ ಮತ್ತು ಭಾರತವು ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡುತ್ತದೆ. ನಿಜಕ್ಕೂ, ಕೋವಿಡ್‌ -19 ಸಾಂಕ್ರಾಮಿಕ ಕಾಲದಲ್ಲಿ ಜನರಲ್ಲಿ ಸಂತಸ ಮೂಡಿ ಸಲು ಇದೊಂದು ಅವಕಾಶವಾಗಿದೆ.

– ಪುಲ್ಲೇಲ ಗೋಪಿಚಂದ್‌, ಭಾರತೀಯ ಬ್ಯಾಡ್ಮಿಂಟನ್‌ ತಂಡದ ಮುಖ್ಯ ತರಬೇತುದಾರ

ಟಾಪ್ ನ್ಯೂಸ್

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.