Israel V/s Hamas: ಕದನ ವಿರಾಮ ಘೋಷಿಸಲು ಇಸ್ರೇಲ್ ಮನವೊಲಿಕೆಗೆ ಯತ್ನ
Team Udayavani, Nov 2, 2023, 9:17 PM IST
ಜೆರುಸಲೇಂ: ಗಾಜಾಪಟ್ಟಿ ಮೇಲಿನ ಇಸ್ರೇಲ್ ಭೂ ಕಾರ್ಯಾಚರಣೆ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು ಈಗಾಗಲೇ ಯುದ್ಧದಲ್ಲಿ ಮೃತಪಟ್ಟ ಪ್ಯಾಲೆಸ್ತೀನಿಯರ ಸಂಖ್ಯೆ 3,700 ಮಕ್ಕಳು ಸೇರಿ, 9,000ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಅಮೆರಿಕ ಮತ್ತು ಅರಬ್ ರಾಷ್ಟ್ರಗಳ ಸಮನ್ವಯಕಾರರು ಜನರಿಗೆ ಮಾನವೀಯ ನೆರವು ನೀಡುವುದಕ್ಕಾದರೂ ಅನುಕೂಲವಾಗುವಂತೆ ಕದನವಿರಾಮ ಘೋಷಿಸಲು ಇಸ್ರೇಲ್ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಅಮೆರಿಕ, ಈಜಿಪ್ಟ್, ಇಸ್ರೇಲ್ ಹಾಗೂ ಕತಾರ್ ನಡುವಿನ ಮಾತುಕತೆಯ ಪ್ರಕಾರ ಈಗಾಗಲೇ ಪಾಸ್‌ಪೋರ್ಟ್ ಹೊಂದಿರುವ ಪ್ಯಾಲೆಸ್ತೀನಿಯರಿಗೆ ದೇಶತೊರೆಯಲು ಇಸ್ರೇಲ್ ಅನುವು ಮಾಡಿಕೊಟ್ಟಿದೆ. ಈ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕದನವಿರಾಮ ಘೋಷಿಸುವಂತೆ ಸಲಹೆ ನೀಡಿದ್ದಾರೆ. ಅರಬ್ ರಾಷ್ಟ್ರಗಳೂ ಕೂಡ ಈ ನಿಟ್ಟಿನಲ್ಲಿ ಇಸ್ರೇಲ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಮತ್ತೂಂದೆಡೆ ಇತ್ತೀಚೆಗಷ್ಟೇ ಇಸ್ರೇಲ್ ಜತೆಗೆ ಸ್ನೇಹ ಬೆಸೆದುಕೊಂಡಿದ್ದ ಬಹ್ರೈನ್ ಕೂಡ ತನ್ನ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅತ್ತ ಹಮಾಸ್ ಉಗ್ರರು ಕೂಡ ರಾತ್ರೋರಾತ್ರಿ ಇಸ್ರೇಲ್ ಪಡೆಗಳ ಮೇಲೆ ಡ್ರೋನ್‌ದಾಳಿ ನಡೆಸಿರುವುದು ವರದಿಯಾಗಿದೆ.
ಹಡುಗು ಕಳಿಸಲು ಕರೆ
ಗಾಯಗೊಂಡ ಪ್ಯಾಲೆಸ್ತೀನಿಯರ ಚಿಕಿತ್ಸೆಗಾಗಿ ಹಾಸ್ಪಿಟಲ್ ಶಿಪ್‌ಗ್ಳನ್ನು ಈಜಿಪ್ಟ್ಗೆ ಕಳುಹಿಸಿಕೊಡುವಂತೆ ಜರ್ಮನ್‌ನಲ್ಲಿರುವ ಇಸ್ರೇಲಿ ರಾಯಭಾರಿಗಳು ವಿಶ್ವರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಗಾಜಾದಲ್ಲಿನ ಜನರಿಗೆ ಸಹಾಯ ಮಾಡಲು ಯುರೋಪ್ ರಾಷ್ಟ್ರಗಳು ಅವಕಾಶ ಕೋರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನಿಯರು ಈಜಿಪ್ಟ್ಗೆ ತೆರಳಲು ಇಸ್ರೇಲ್ ಅವಕಾಶವನ್ನೂ ನೀಡಿದೆ. ಜನರಿಗೆ ನೆರವು ನೀಡಬಯಸುವವರು ನೇರ ಈಜಿಪ್ಟ್ಗೆ ಹಾಸ್ಪಿಟಲ್ ಶಿಪ್‌ಗ್ಳನ್ನು ಕಳುಹಿಸಿಕೊಡಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.