ಸೋಮವಾರದಿಂದ ಕಚೇರಿಗೆ ಹಾಜರಾಗಿ: ಸರಕಾರಿ ಉದ್ಯೋಗಿಗಳಿಗೆ ಸೂಚನೆ
Team Udayavani, Apr 19, 2020, 5:50 AM IST
ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ರಜೆ ನೀಡಲಾಗಿದ್ದ ಸರಕಾರದ ಎಲ್ಲ ಇಲಾಖೆಗಳ ಎ ಮತ್ತು ಬಿ ದರ್ಜೆಯ ಅಧಿಕಾರಿಗಳು ಹಾಗೂ ಸಿ. ಮತ್ತು ಡಿ. ದರ್ಜೆಯ ಶೇ.33 ರಷ್ಟು ಸಿಬಂದಿ ಕಚೇರಿಗೆ ಹಾಜರಾಗುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆ ಒದಗಿಸುವ ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಪೊಲೀಸ್ ಸೇರಿದಂತೆ ಹತ್ತು ಇಲಾಖೆಗಳನ್ನು ಹೊರತು ಪಡಿಸಿ ಉಳಿದ ಇಲಾಖೆಗಳ ಸಿಬಂದಿಗೆ ಸಾಂದರ್ಭಿಕ ರಜೆ ನೀಡಲಾಗಿತ್ತು. ಎ.20ರ ನಂತರ ಸರಕಾರ ಲಾಕ್ಡೌನ್ ಸಡಿಲಗೊಳಿಸಲು ಮುಂದಾಗಿರುವುದರಿಂದ ಸಿಬಂದಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿದೆ. ಈ ಆದೇಶ ಮೇ 3 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.