ಕಾರ್ಕಳ: ಅತ್ತೂರು ಜಾತ್ರೆಗೆ ಚಾಲನೆ : ಮರಳಿದ ಜಾತ್ರೆ ವೈಭವ, 400 ಸಂತೆ ಮಾರುಕಟ್ಟೆ ಮಳಿಗೆ
Team Udayavani, Feb 21, 2022, 2:51 PM IST
ಕಾರ್ಕಳ : ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂದೇ ಪ್ರತೀತಿ. ವಾರ್ಷಿಕೋತ್ಸವ ದಿನಗಳಲ್ಲಿ ಹಗಲು ರಾತ್ರಿ ಎನ್ನದೆ ಜನ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಗಳಿಂದ ವಾರ್ಷಿಕೋತ್ಸವ ಸರಳವಾಗಿ ನಡೆದಿತ್ತು. ಈ ಬಾರಿ ಒಂದಷ್ಟು ವಿಜೃಂಭಣೆಗೆ ತೆರೆದುಕೊಳ್ಳುತ್ತಿದ್ದು, ಭಕ್ತರ ಆಗಮನ ಜತೆಗೆ ಸಂತೆಯೂ ಈ ಬಾರಿ ಸಂತೆಯೂ ಅಧಿಕ ಪ್ರಮಾಣದಲ್ಲಿದೆ.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಜಾತ್ರೆ ರವಿವಾರದಿಂದ ವಿಜೃಂಭಣೆಯಿಂದ ಆರಂಭಗೊಂಡಿದೆ. ಅತ್ತೂರು ಜಾತ್ರೆ ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವ ಯೋಚನೆ ಈ ವರ್ಷ ಎಷ್ಟು ಸಂತೆ ಬಂದಿರಬಹುದು ಎಂಬುದೇ ಆಗಿದೆ. ತೊಟ್ಟಿಲಿನಿಂದ ಹಿಡಿದು ಆಟದ ಜೋಕಾಲಿ, ಮನೋರಂಜನೆ. ಜಾಯಿಂಟ್‌ವೀಲ್, ಮಕ್ಕಳು ಕುಳಿತು ತಿರುಗಾಡುವ ವಿವಿಧ ಆಟಿಕೆಗಳು, ಡ್ರೆಸ್ ಮೆಟೀರಿಯಲ್, ಮಣಿಸರಕಿನ ಸ್ಟಾಲ್‌ಗಳು, ಐಸ್‌ಕ್ರಿಂ, ಪಾನಿಪುರಿ, ಗೋಬಿ ಮಂಚೂರಿ ಸಹಿತ ವಿವಿಧ ತಿನಿಸುಗಳ ಸ್ಟಾಲ್‌ಗಳು ಈ ಬಾರಿ ಇವೆ. ವ್ಯಾಪಾರ ಮಾಡುವುದಕ್ಕೆ ಸಂತೆ ಮಾರುಕಟ್ಟೆಯಲ್ಲಿ 400 ಮಳಿಗೆಗಳು ತೆರೆದುಕೊಂಡಿವೆ. ಆರಂಭದ ದಿನದಿಂದಲೆ ಜನರು ಚರ್ಚ್ ಕಡೆ ಆಗಮಿಸುತ್ತಿದ್ದು, ಮಳಿಗೆಗಳ ಮುಂದೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಇನ್ನು ಹೆಚ್ಚುವ ಸಾಧ್ಯತೆಗಳಿವೆ. ಮರಳಿ ಹಿಂದಿನ ಸ್ಥಿತಿಗೆ ಅತ್ತೂರು ಜಾತ್ರೆ ಮರಳುವ ಲಕ್ಷಣ ಗೋಚರಿಸುತ್ತಿದೆ.
ಇದನ್ನೂ ಓದಿ : ಕೆ.ಎಸ್.ಈಶ್ವರಪ್ಪರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕೊರೊನಾದಿಂದ ಈ ಹಿಂದಿನ ಎರಡು ವರ್ಷ ಜಾತ್ರೆ ಸರಳವಾಗಿ ನಡೆದ ಕಾರಣ ಜಾತ್ರೆಯ ಸಂತೆ ವ್ಯಾಪಾರ ವಹಿವಾಟು ಮಳಿಗೆ ಇರಲಿಲ್ಲ. ಈ ಬಾರಿ ತಕ್ಕಮಟ್ಟಿಗೆ ಎಲ್ಲ ಬಗೆಯ ಸ್ಟಾಲ್‌ಗಳು ಜಾತ್ರೆ ಸಂತೆಯಲ್ಲಿದೆ. ಚರ್ಚ್ ಮುಂಭಾಗದ ರಸ್ತೆ ಬದಿ, ಎಡಬದಿಗೆ ವಿಶಾಲವಾದ ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ದಕ್ಷಿಣ ಭಾರತದಲ್ಲೆ ಭಾವೈಕ್ಯದ ಅಗ್ರ ಧಾರ್ಮಿಕ ಕ್ಷೇತ್ರವಾದ ಸಂತ ಲಾರೆನ್ಸ್ ಚರ್ಚ್ ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.