e-pants: ಆಡಿಯೋ, ವಿಡಿಯೋ ರೆಕಾರ್ಡ್ ಮಾಡುವ ಅಂಡರ್‌ವೇರ್!
ಸ್ಮಾರ್ಟ್ ಇ-ಪ್ಯಾಂಟ್ಸ್‌ಗಳ ಅಭಿವೃದ್ಧಿಗಾಗಿ ಅಮೆರಿಕ ಸರ್ಕಾರ ಹೂಡಿಕೆ
Team Udayavani, Sep 5, 2023, 9:47 PM IST
ವಾಷಿಂಗ್ಟನ್: ಆಡಿಯೋ ಮತ್ತು ವಿಡಿಯೋ ರೆಕಾರ್ಡ್ ಹಾಗೂ ಸ್ಥಳವನ್ನು ಗುರುತಿಸುವ ಜಿಯೋಲೇಕೇಶನ್ ಮಾಹಿತಿ ಸಂಗ್ರಹಿಸುವ ಬಟ್ಟೆಗಳನ್ನು ತಯಾರಿಸಲು ಅಮೆರಿಕ ಸರ್ಕಾರ 182.60 ಕೋಟಿ ರೂ.(2.2 ಕೋಟಿ ಡಾಲರ್) ಹೂಡಿಕೆ ಮಾಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಶರ್ಟ್, ಪ್ಯಾಂಟ್, ಸಾಕ್ಸ್ ಮತ್ತು ಅಂಡರ್‌ವೆàರ್‌ಗಳು ಆಡಿಯೋ ಮತ್ತು ವಿಡಿಯೋ ರೆಕಾರ್ಡ್ ಮಾಡಲಿದೆ. ಇದು ಗೂಢಚರ್ಯ ಚಟುವಟಿಕೆಗಳಲ್ಲಿ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಟ್ಟೆಗಳನ್ನು ಒಗೆಯಬಹುದಾಗಿದ್ದು, ಇದನ್ನು ಧರಿಸಿರುವ ವ್ಯಕ್ತಿ ಎಲ್ಲಿದ್ದಾನೆ ಎಂದು ಸ್ಥಳವನ್ನು ಸಹ ಗುರುತಿಸಬಹುದಾಗಿದೆ. ಇದಕ್ಕೆ ದಿ ಸ್ಮಾರ್ಟ್ ಎಲೆಕ್ಟ್ರಿಕಲಿ ಪವರ್ಡ್ ಆ್ಯಂಡ್ ನೆಟ್ವರ್ಕ್ಡ್ ಟೆಕ್ಸ್‌ಟೈಲ್ ಸಿಸ್ಟಮ್ಸ್ ಪ್ರೋಗ್ರಾಂ ಅಥವಾ ಸ್ಮಾರ್ಟ್ ಇ-ಪ್ಯಾಂಟ್ಸ್ ಎಂದು ಕರೆಯಲಾಗಿದೆ.
“ಆ್ಯಕ್ಟಿವ್ ಸ್ಮಾರ್ಟ್ ಟೆಕ್ಸ್‌ಟೈಲ್ಸ್(ಎಎಸ್‌ಟಿ) ಅಭಿವೃದ್ಧಿ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಹೂಡಿಕೆ ಮಾಡಿದೆ. ಗುಪ್ತಚರ ಸುಧಾರಿತ ಸಂಶೋಧನಾ ಯೋಜನೆಗಳ ಚಟುವಟಿಕೆ ಅಡಿಯಲ್ಲಿ ಸ್ಮಾರ್ಟ್ ಇ-ಪ್ಯಾಂಟ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸ್ಮಾರ್ಟ್ ಇ-ಪ್ಯಾಂಟ್ಸ್‌ಗಳು ಯಶಸ್ವಿಯಾದರೆ ಇವುಗಳನ್ನು ಅಮೆರಿಕದ ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಅಧಿಕಾರಿಗಳು ಹಾಗೂ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ದಳದ ಅಧಿಕಾರಿಗಳಿಗೆ ಒದಗಿಸಲಾಗುತ್ತದೆ’ ಎಂದು ಸ್ಮಾರ್ಟ್ ಇ-ಪ್ಯಾಂಟ್ಸ್ ಯೋಜನಾ ವ್ಯವಸ್ಥಾಪಕ ಡಾ. ಡಾಸನ್ ಕಾಗಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.