National Space Day: ಆ.23 “ರಾಷ್ಟ್ರೀಯ ಬಾಹ್ಯಾಕಾಶ ದಿನ”: ಈಗ ಅಧಿಕೃತ
Team Udayavani, Aug 29, 2023, 8:49 PM IST
ನವದೆಹಲಿ: ಚಂದ್ರನ ದಕ್ಷಿಣ ಭಾಗದಲ್ಲಿ ಆ.23ರಂದು ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಇಳಿದ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಆ.23ರಂದು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆ.26ರಂದು ಬೆಂಗಳೂರಿನ ಪೀಣ್ಯದಲ್ಲಿ ಇರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ವೇಳೆ ಈ ಅಂಶ ಘೋಷಣೆ ಮಾಡಿದ್ದರು. ಆ ಬಗ್ಗೆ ನವದೆಹಲಿಯಲ್ಲಿ ಮಂಗಳವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚಂದ್ರಯಾನ-3 ಯಶಸ್ವಿಯಾದ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಚಂದ್ರನಲ್ಲಿ ವಾರ ಪೂರೈಸಿದ ಪ್ರಜ್ಞಾನ್ ರೋವರ್
ಇಸ್ರೋ ನಿರೀಕ್ಷಿತ ಚಂದ್ರಯಾನ-3 ಯಶಸ್ವಿಯಾಗಿ ಮಂಗಳವಾರಕ್ಕೆ ಒಂದು ವಾರ ಪೂರ್ತಿಯಾಗಿದೆ. ಇದುವರೆಗೆ ಅದರ ಕಾರ್ಯ ನಿರ್ವಹಣೆಯಿಂದ ತೃಪ್ತಿಯಾಗಿದೆ ಮತ್ತು ಶಶಾಂಕನ ಮೇಲೆ ತಾಪಮಾನ ಯಾವ ರೀತಿ ಏರಿಳಿತವಾಗುತ್ತದೆ ಎಂಬ ಐತಿಹಾಸಿಕ ಹಾಗೂ ಮೊದಲ ಮಾಹಿತಿಯನ್ನು ಪ್ರಜ್ಞಾನ್ ರೋವರ್ ರವಾನೆ ಮಾಡಿದೆ. ಇದಲ್ಲದೆ, ಆ ಪ್ರದೇಶದಲ್ಲಿ ಉಂಟಾಗುವ ಕಂಪನಗಳು, ಇರಬಹುದಾದ ಖನಿಜ ಲವಣಗಳು, ನೀರಿನ ಅಂಶದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕಳುಹಿಸುವ ನಿರೀಕ್ಷೆಯನ್ನು ಇಸ್ರೋ ಹೊಂದಿದೆ. ಸೋಮವಾರ ರೋವರ್ ಎರಡು ಕುಳಿಗಳನ್ನು ತಪ್ಪಿಸಿ ಮುಂದುವರಿದಿರುವ ಬಗ್ಗೆ ಫೋಟೋ ಸಹಿತ ಮಾಹಿತಿಯನ್ನು ಕಳುಹಿಸಿಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.