![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 28, 2023, 12:50 AM IST
ಧರ್ಮಶಾಲಾ: ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಂದಾಗಿರುವ ಬಲಿಷ್ಠ ಆಸ್ಟ್ರೇಲಿಯ ತಂಡವು ವಿಶ್ವಕಪ್ ಕೂಟದ ಶನಿವಾರದ ಪಂದ್ಯದಲ್ಲಿ ತನ್ನ ಪ್ರತಿಸ್ಪರ್ಧಿ ನ್ಯೂಜಿಲ್ಯಾಂಡ್ ಸವಾಲನ್ನು ಎದುರಿಸಲು ಸಜ್ಜಾಗಿದೆ. ಬಹಳಷ್ಟು ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯ ತಂಡವು ತಮ್ಮ ಗೆಲುವಿನ ಓಟವನ್ನು ಕಾಪಾಡಿಕೊಳ್ಳಲು ಮತ್ತು ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತಮ್ಮ ದಾಖಲೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯೊಂದಿಗೆ ಈ ಹೋರಾಟಕ್ಕೆ ಸಿದ್ಧವಾಗಿದೆ.
ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಕಳಪೆ ಯಾಗಿ ಆಟ ಆರಂಭಿಸಿದ್ದರೂ ಇದೀಗ ಸತತ ಮೂರು ಗೆಲುವಿನೊಂದಿಗೆ ಜಯದ ಹಾದಿಗೆ ಮರಳಿದ್ದು ಎದು ರಾಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಆಸ್ಟ್ರೇಲಿಯ ತಂಡವು ಸತತ ಮೂರು ಗೆಲುವಿನೊಂದಿಗೆ ತನ್ನ ಉತ್ಸಾಹವನ್ನು ಹೆಚ್ಚಿಸಿಕೊಂಡಿದೆ. ಅದರಲ್ಲಿಯೂ ನೆದರ್ಲೆಂಡ್ಸ್ ವಿರುದ್ಧ ದಾಖಲೆ 309 ರನ್ನುಗಳ ಅಮೋಘ ಗೆಲುವು ಕೂಡ ಸೇರಿಕೊಂಡಿದೆ.
ಐದು ಬಾರಿಯ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ತಂಡವು ಕೂಟದ ನಿರ್ಣಾಯಕ ಹಂತದ ವೇಳೆಗೆ ನಾಲ್ಕನೇ ಸ್ಥಾನದಲ್ಲಿದ್ದರೆ ನ್ಯೂಜಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. ಶನಿವಾರದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿ ಸುವ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವುದರ ಜತೆ ಅಗ್ರ ನಾಲ್ಕರೊಳಗಿನ ಸ್ಥಾನ ಉಳಿಸಿಕೊಳ್ಳಲು ಆಸ್ಟ್ರೇಲಿಯ ಪ್ರಯತ್ನಿಸಲಿದೆ.
ಆಸ್ಟ್ರೇಲಿಯ ಫೇವರಿಟ್
ಸದ್ಯದ ಸ್ಥಿತಿಯನ್ನು ನೋಡಿದರೆ ನ್ಯೂಜಿಲ್ಯಾಂಡ್ ಕೂಡ ಈ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಆಡಿದ ಐದು ಪಂದ್ಯಗಳಲ್ಲಿ ಅದು ನಾಲ್ಕರಲ್ಲಿ ಜಯ ಸಾಧಿಸಿದ್ದರೆ ಭಾರತ ವಿರುದ್ಧ ಸೋಲನ್ನು ಕಂಡಿತ್ತು. ಆದರೆ ಆಸ್ಟ್ರೇಲಿಯ ವಿರುದ್ಧದ ದ್ವಿಪಕ್ಷೀಯ ಹೋರಾಟದಲ್ಲಿ ನ್ಯೂಜಿಲ್ಯಾಂಡಿನ ಸಾಧನೆ ಉತ್ತಮವಾಗಿಲ್ಲ. ಹೀಗಾಗಿ ಕಮಿನ್ಸ್ ಪಡೆ ಗೆಲ್ಲುವ ಫೇವರಿಟ್ ತಂಡವೆನಿಸಿದೆ.
ವಿಶ್ವಕಪ್ ಕೂಟಗಳಲ್ಲಿ ಉಭಯ ತಂಡಗಳು 11 ಬಾರಿ ಮುಖಾಮುಖೀ ಆಗಿದ್ದು ಎಂಟು ಬಾರಿ ಆಸ್ಟ್ರೇಲಿಯ ಜಯ ಸಾಧಿಸಿದ್ದರೆ ಮೂರು ಬಾರಿ ನ್ಯೂಜಿಲ್ಯಾಂಡ್ ಗೆಲುವಿನ ನಗು ಚೆಲ್ಲಿದೆ. ಇಷ್ಟರವರೆಗಿನ 141 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯ 95 ಬಾರಿ ಜಯ ಸಾಧಿಸಿದ್ದರೆ ನ್ಯೂಜಿಲ್ಯಾಂಡ್ 39 ಬಾರಿ ಗೆಲುವು ಒಲಿಸಿಕೊಂಡಿದೆ. ಉಭಯ ತಂಡಗಳ ಬಲಾಬಲವನ್ನು ನೋಡಿದರೆ ಆಸ್ಟ್ರೇಲಿಯವೇ ಉತ್ತಮ ತಂಡವೆಂದು ಹೇಳಬಹುದು.
ಬ್ಯಾಟಿಂಗ್ ಬಲಿಷ್ಠ
ಆಸ್ಟ್ರೇಲಿಯದ ಬ್ಯಾಟಿಂಗ್ ಬಲಿಷ್ಠವಾಗಿದೆ. ಆರಂಭಿಕ ಡೇವಿಡ್ ವಾರ್ನರ್ ಎರಡು ಶತಕ ಸಹಿತ 332 ರನ್ ಪೇರಿಸಿದ್ದು ಅಗ್ರ ಆಟಗಾರರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅತೀವೇಗದ ಶತಕವೂ ಗಮನಿಸಬೇಕಾದ ವಿಷಯವಾಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್ ಅವರು ಸ್ಥಿರ ನಿರ್ವಹಣೆ ನೀಡಬೇಕಾದ ಅಗತ್ಯವಿದ್ದರೆ ಕ್ಯಾಮರೂನ್ ಗ್ರೀನ್ ಇನ್ನಷ್ಟೇ ಸಿಡಿಯಬೇಕಾಗಿದೆ.
ಆಸ್ಟ್ರೇಲಿಯದ ಬೌಲಿಂಗ್ ಪಡೆಯೂ ಉತ್ತಮವಾಗಿದೆ. ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮತ್ತು ನಾಯಕ ಕಮಿನ್ಸ್ ಉತ್ತಮ ನಿರ್ವಹಣೆ ನೀಡುತ್ತಿದ್ದರೂ ಸ್ಪಿನ್ ದಾಳಿಯಲ್ಲಿ ಆ್ಯಡಂ ಝಂಪ ಅವರ ನಿರ್ವಹಣೆಯಿಂದ ಆಸ್ಟ್ರೇಲಿಯ ಮೇಲುಗೈ ಸಾಧಿಸಲು ಯಶ ಸ್ವಿಯಾಗಿದೆ. ಇದರ ಜತೆ ಟ್ರ್ಯಾವಿಸ್ ಹೆಡ್ ತಂಡಕ್ಕೆ ಮರಳಿರುವುದು ಬೌಲಿಂಗ್ ಪಡೆಯನ್ನು ಇನ್ನಷ್ಟು ಬಲಪಡಿಸಿದೆ.
ನ್ಯೂಜಿಲ್ಯಾಂಡ್ ತಿರುಗೇಟು ಸಾಧ್ಯತೆ
ಗಾಯಗೊಂಡಿರುವ ಕೇನ್ ವಿಲಿ ಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಟಾಮ್ ಲಾಥಂ ತಂಡವನ್ನು ಮುನ್ನ ಡೆಸಲಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ರಯತ್ನಿಸಲಿದೆ. ಭಾರತ ವಿರುದ್ಧ ಸೋತು ಆಘಾತಗೊಂಡಿರುವ ನ್ಯೂಜಿಲ್ಯಾಂಡ್ ಈ ಪಂದ್ಯದಲ್ಲಿ ಗೆದ್ದು ಮುನ್ನಡೆಯಲು ಯೋಚಿಸುತ್ತಿದೆ. ಡೇವನ್ ಕಾನ್ವೇ, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಅವರಿಂದ ಉತ್ತಮ ಬ್ಯಾಟಿಂಗ್ ನಿರ್ವಹಣೆ ನಿರೀಕ್ಷಿಸಲಾಗಿದೆ. ನ್ಯೂಜಿಲ್ಯಾಂಡಿನ ಬೌಲಿಂಗ್ ಬಲಿಷ್ಠವಾಗಿದೆ. ಸ್ಯಾಂಟ್ನರ್ ಸಹಿತ ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಲೂಕಿ ಫೆರ್ಗ್ಯುಸನ್ ಮತ್ತು ಟ್ರೆಂಟ್ ಬೌಲ್ಟ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೊಂದು ಗರಿಷ್ಠ ವಿಕೆಟ್ ಪಡೆದಿರುವ ಆ್ಯಡಂ ಝಂಪ ಮತ್ತು ಸ್ಯಾಂಟ್ನರ್ ಅವರ ನಡುವಣ ಹೋರಾಟವೆಂದು ಬಣ್ಣಿಸಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.