ಕೋವಿಡ್ ತಪ್ಪು ಚಿಕಿತ್ಸೆ ಸೂಚಿಸಿದ್ದಕ್ಕೆ 1.5 ಲಕ್ಷ ಡಾಲರ್ ದಂಡ
Team Udayavani, May 14, 2020, 1:44 PM IST
ಮಣಿಪಾಲ : ಅಮೆರಿಕ ಸೇರಿ ಹಲವು ದೇಶಗಳು ಕೋವಿಡ್ ವೈರಸ್‌ನ ತವರು ದೇಶವಾಗಿರುವ ಚೀನ ವಿರುದ್ಧ ಮುಗಿಬಿದ್ದು ಕೋಟಿಗಟ್ಟಲೆ ಡಾಲರ್ ನಷ್ಟ ಪರಿಹಾರ ಕೋರಿ ದಾವೆಗಳನ್ನು ಹೂಡಿರುವುದು ಸುದ್ದಿಯಾಗಿತ್ತು. ಆದರೆ ಇದೀಗ ಇಂಥ ದಾವೆಗಳ ಮುಂಚೂಣಿಯಲ್ಲಿರುವ ಅಮೆರಿಕವೇ ತೀರಾ ಮುಜುಗರಕ್ಕೊಳಗಾಗುವ ಪ್ರಸಂಗ ಎದುರಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ನಂಬಿ ಆಸ್ಟ್ರೇಲಿಯದ ಹೀಲಿಂಗ್ ಚರ್ಚ್ (ರೋಗಗಳನ್ನು ಮತ್ತು ಸಮಸ್ಯೆಗಳನ್ನು ಗುಣಪಡಿಸುತ್ತೇವೆ ಎಂದು ಹೇಳಿಕೊಳ್ಳುವ ಸಂಸ್ಥೆ) ಸೋಡಿಯಂ ಕ್ಲೋರೈಟ್ ದ್ರಾವಣ ಕೋವಿಡ್ ಗೆ ರಾಮಬಾಣ ಎಂದು ಹೇಳಿಕೊಂಡಿತ್ತು.
ಚರ್ಚ್‌ನ ವೆಬ್‌ಸೈಟ್‌ಗಳಲ್ಲೂ ಈ ಕುರಿತು ವ್ಯಾಪಕ ಪ್ರಚಾರ ನೀಡಲಾಗಿತ್ತು.
ಕೆಲ ದಿನಗಳ ಹಿಂದೆ ಅಧ್ಯಕ್ಷ ಟ್ರಂಪ್ ಕೋವಿಡ್-19 ಸೋಂಕು ನಿವಾರಣೆಯಲ್ಲಿ ಕೈಗಾರಿಕಾ ಕೊಳಚೆ ನಿವಾರಿಸಲು ಬ್ಲೀಚಿಂಗ್ ಪೌಡರ್ ಆಗಿ ಉಪಯೋಗುತ್ತಿರುವ ಸೋಡಿಯಂ ಕ್ಲೋರೈಟ್ ಕೋವಿಡ್ ಸೋಂಕು ನಿವಾರಿಕವಾಗಬಹುದು ಎಂದು ಹೇಳಿದ್ದರು.
ಚರ್ಚ್ ಈ ಹೇಳಿಕೆಯನ್ನು ನಂಬಿ ಇದನ್ನು ಪ್ರಚಾರ ಮಾಡಿತ್ತು.
ಆಸ್ಟ್ರೇಲಿಯಾದ ಡ್ರಗ್ಸ್ ರೆಗ್ಯುಲೇಟರ್ ಆ್ಯಂಡ್ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಕೋವಿಡ್ -19, ಎಚ್‌ಐವಿ ಮತ್ತು ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳ ಚಿಕಿತ್ಸೆಗೆ ಈ ಕೊಳಚೆ ನಿವಾರಕ ಔಷಧವಾಗದು, ಮುಖ್ಯವಾಗಿ ಕೋವಿಡ್ ಸೋಂಕನ್ನು ತಡೆಗಟ್ಟುವುದರೊಂದಿಗೆ ಗುಣಮುಖರಾಗುವಂತೆ ಮಾಡಲಿದೆ ಎಂದು ಎಂಎಂಎಸ್ ಸುದ್ದಿತಾಣ ತಪ್ಪು ಮಾಹಿತಿಯನ್ನು ರವಾನಿಸುತ್ತಿದೆ ಎಂದು ಹೇಳಿ ಚರ್ಚ್‌ಗೆ 1,50,000 ಡಾಲರ್ ದಂಡ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.