Tennis: ಆಸ್ಟ್ರೇಲಿಯನ್ ಓಪನ್ ಬೋಪಣ್ಣ-ಎಬ್ಡೆನ್ ಚಾಂಪಿಯನ್
ಅತೀ ಹಿರಿಯ ಗ್ರ್ಯಾನ್ಸ್ಲಾಮ್ ವಿಜೇತ ಟೆನಿಸಿಗ- ದ್ವಿತೀಯ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಕನ್ನಡಿಗ
Team Udayavani, Jan 27, 2024, 11:31 PM IST
ಮೆಲ್ಬರ್ನ್: ಭಾರತದ ರೋಹನ್ ಬೋಪಣ್ಣ ತಮ್ಮ ನಂ.1 ವಿಶ್ವ ರ್ಯಾಂಕಿಂಗ್ಗೆ ತಕ್ಕ ಸಾಧನೆ ಯೊಂದಿಗೆ “ಮೆಲ್ಬರ್ನ್ ಪಾರ್ಕ್’ನಲ್ಲಿ ಮೆರೆದಿದ್ದಾರೆ. ಆತಿಥೇಯ ನಾಡಿನ ಜತೆಗಾರ ಮ್ಯಾಥ್ಯೂ ಎಬ್ಡೆನ್ ಅವ ರೊಡಗೂಡಿ “ಆಸ್ಟ್ರೇಲಿಯನ್ ಓಪನ್” ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಾರೆ.
ಶನಿವಾರ ನಡೆದ “ಹೈ ಕ್ವಾಲಿಟಿ ಫೈನಲ್’ ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಸೇರಿಕೊಂಡು ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯ ವವಸೋರಿ ಜೋಡಿಯನ್ನು 7-6 (7-0), 7-5 ಅಂತರದಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ, 39 ನಿಮಿಷಗಳ ಕಾಲ ಇವರ ರ್ಯಾಕೆಟ್ ಸಮರ ಸಾರಿತು.
ಮೊದಲ ಮೆಲ್ಬರ್ನ್ ಪ್ರಶಸ್ತಿ
ಕರ್ನಾಟಕದ ಹೆಮ್ಮೆಯ ಟೆನಿಸಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ನಿದರ್ಶನ ಇದಾಗಿದೆ. ಈ ಕಿರೀಟ ಧರಿಸಿದ ಭಾರತದ ಕೇವಲ 3ನೇ ಟೆನಿಸಿಗ. ಉಳಿದಿಬ್ಬರೆಂದರೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ. ವನಿತಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಹಿರಿಮೆ ಸಾನಿಯಾ ಮಿರ್ಜಾ ಅವರದು.
ಇದು ರೋಹನ್ ಬೋಪಣ್ಣ ಗೆದ್ದ ಕೇವಲ 2ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ. ಇದಕ್ಕೂ ಮುನ್ನ 2017ರಲ್ಲಿ ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್ಸ್ಕಿ ಜತೆಗೂಡಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಚಾಂಪಿಯನ್ ಆಗಿದ್ದರು.
ಮ್ಯಾಥ್ಯೂ ಎಬ್ಡೆನ್ಗೆ ಒಲಿದ 2ನೇ ತವರಿನ ಪ್ರಶಸ್ತಿ ಇದಾಗಿದೆ. 2015ರಲ್ಲಿ ಅವರು ಫ್ಯಾಬಿಯೊ ಫೊಗಿನಿ ಜತೆಗೂಡಿ ಪುರುಷರ ಡಬಲ್ಸ್ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಸೋಮವಾರ ನಂ.1
ಈ ಕೂಟದ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ರೋಹನ್ ಬೋಪಣ್ಣ ವಿಶ್ವದ ನಂ.1 ಡಬಲ್ಸ್ ಆಟಗಾರನೆಂಬ ಹಿರಿಮೆಗೆ ಪಾತ್ರ ರಾಗಿದ್ದರು. ಬಳಿಕ ಪದ್ಮಶ್ರೀ ಪ್ರಶಸ್ತಿ ಯಿಂದಲೂ ಪುರಸ್ಕೃತರಾಗಿದ್ದರು. ಸೋಮವಾರ ಬಿಡುಗಡೆಯಾಗ ಲಿರುವ ರ್ಯಾಂಕಿಂಗ್ ಯಾದಿಯಲ್ಲಿ ಬೋಪಣ್ಣ ನೂತನ ಎತ್ತರ ತಲುಪಲಿದ್ದಾರೆ.
ಹಿರಿಯ ಚಾಂಪಿಯನ್
ಈ ಜಯದೊಂದಿಗೆ 43 ವರ್ಷದ ರೋಹನ್ ಬೋಪಣ್ಣ ಪುರುಷರ ವಿಭಾಗದ ಅತೀ ಹಿರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಎಂಬ ದಾಖಲೆಯನ್ನೂ ಬರೆದರು. ನೆದರ್ಲೆಂಡ್ಸ್ನ ಜೀನ್ ಜೂಲಿಯನ್ ರೋಜರ್ 40ನೇ ವರ್ಷದಲ್ಲಿ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ ದಾಖಲೆ ಪತನಗೊಂಡಿತು. 2022ರಲ್ಲಿ ಅವರು ಮಾರ್ಸೆಲೊ ಅರೆವೋಲ ಜತೆಗೂಡಿ ಈ ಸಾಧನೆಗೈದಿದ್ದರು.
ನೂತನ ಚಾಂಪಿಯನ್
ರವಿವಾರ ಪುರುಷರ ಸಿಂಗಲ್ಸ್ನಲ್ಲಿ ನೂತನ ಚಾಂಪಿಯನ್ ಒಬ್ಬರ ಉದಯವಾಗಲಿದೆ. ಡ್ಯಾನಿಲ್ ಮೆಡ್ವೆಡೇವ್-ಜಾನಿಕ್ ಸಿನ್ನರ್, ಇವರಲ್ಲಿ ಯಾರೇ ಗೆದ್ದರೂ ಮೊದಲ ಸಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿದಂತಾಗುತ್ತದೆ.
ಬಾಲಕ, ಬಾಲಕಿಯರ ವಿಭಾಗ
ಆಸ್ಟ್ರೇಲಿಯನ್ ಓಪನ್ ಬಾಲಕರ ವಿಭಾಗದಲ್ಲಿ ಜಪಾನ್ನ 17 ವರ್ಷದ ರೀ ಸಕಮೋಟೊ ಪ್ರಶಸ್ತಿಯೆತ್ತಿದ್ದಾರೆ. ಅವರು ಜೆಕ್ ಗಣರಾಜ್ಯದ ಜಾನ್ ಕುಮ್ಸ್ಟಾಟ್ ವಿರುದ್ಧ 3-6, 7-6 (2), 7-5 ಅಂತರದ ಗೆಲುವು ಸಾಧಿಸಿದರು. ಬಾಲಕಿಯರ ವಿಭಾದ ಪ್ರಶಸ್ತಿ ಅಗ್ರ ಶ್ರೇಯಾಂಕದ ಸ್ಲೊವಾ ಕಿಯಾದ ಆಟಗಾರ್ತಿ ರೆನಾಟಾ ಜಮ್ರಿಕೋವಾ ಪಾಲಾಯಿತು. ಅವರು ಆಸ್ಟ್ರೇಲಿಯದ 15ರ ಹರೆಯದ ಆಟಗಾರ್ತಿ ಎಮರ್ಸನ್ ಜೋನ್ಸ್ ವಿರುದ್ಧ 6-4, 6-1 ಅಂತರದಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.