OIML: ಭಾರತಕ್ಕೆ ಒಐಎಂಎಲ್ ಪ್ರಮಾಣ ಪತ್ರ ನೀಡುವ ಅಧಿಕಾರ
Team Udayavani, Sep 15, 2023, 1:33 AM IST
ಹೊಸದಿಲ್ಲಿ: ಇನ್ನು ಮುಂದೆ ಭಾರತವೂ ತೂಕ ಮತ್ತು ಅಳತೆಯ ಸಾಧನಗಳಿಗೆ ಕಡ್ಡಾಯ ವಾಗಿರುವ ಅಂತಾರಾಷ್ಟ್ರೀಯ ಕಾನೂನು ಮಾಪನ ಶಾಸ್ತ್ರ ಸಂಸ್ಥೆಯ “ಒಐಎಂಎಲ್ ಪ್ರಮಾಣ ಪತ್ರ’ವನ್ನು ನೀಡಬಹುದಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ಕಾನೂನು ಮಾಪನ ಶಾಸ್ತ್ರ ಸಂಸ್ಥೆಗಳು ಮತ್ತು ಉದ್ದಿಮೆಗಳಿಗೆ ನಿಯಮಗಳು, ಗುಣ ಮಟ್ಟಗಳು ಮತ್ತು ಇದಕ್ಕೆ ಸಂಬಂಧಿಸಿದ ಇತರ ದಾಖಲೆಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟ ದೃಢೀಕರಣ ಸಂಸ್ಥೆಯಾಗಿರುವ ಒಐಎಂಎಲ್ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಇದು 1955ರಲ್ಲಿ ಸ್ಥಾಪನೆಯಾದುದು. ವೈದ್ಯಕೀಯ ಉಷ್ಣತಾಮಾಪಕಗಳು, ವ್ಯಕ್ತಿ ಮದ್ಯಪಾನ ಮಾಡಿ ದ್ದಾನೆಯೇ ಇಲ್ಲವೇ ಎಂದು ತಿಳಿಸುವ ಉಸಿ ರಾಟ ವಿಶ್ಲೇಷಕ ಉಪಕರಣ, ರಾಡಾರ್ ವೇಗ ಅಳೆಯುವ ಉಪಕರಣಗಳು, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮಾಪಕಗಳು ಇತ್ಯಾದಿ ಎಲ್ಲ ತೂಕ ಮತ್ತು ಅಳತೆ ಉಪಕರಣಗಳ ಅಂತಾರಾಷ್ಟ್ರೀಯ ನಿಯಮ ಸಮನ್ವಯಕಾರ ಸಂಸ್ಥೆ ಇದು. ಇದು ನೀಡುವ ಪ್ರಮಾಣಪತ್ರ ಜಾಗತಿಕ ಮಾನ್ಯತೆಯುಳ್ಳದ್ದು. ಇದರಡಿ ಜಗತ್ತಿನ 13ನೇ ದೇಶವಾಗಿ ಭಾರತಕ್ಕೆ ತೂಕ ಮತ್ತು ಅಳತೆಯ ಪ್ರಮಾಣಪತ್ರ ನೀಡುವ ಅಧಿಕಾರ ಪ್ರಾಪ್ತವಾಗಿದೆ.
ಇದರಿಂದಾಗಿ ದೇಶದಲ್ಲಿ ಉತ್ಪಾದನೆಯಾಗುವ ತೂಕ ಮತ್ತು ಅಳತೆಯ ಸಾಧನಗಳು ಕ್ಷಿಪ್ರವಾಗಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಲಿದೆ ಮಾತ್ರ ವಲ್ಲದೆ, ವಿದೇಶ ವಿನಿಮಯ ಹರಿದು ಬರಲು ಅವಕಾಶ ಒದಗಲಿದೆ ಎಂದು ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.