ಚೇತರಿಕೆ ಹಾದಿಯಲ್ಲಿ ಆಟೋಮೊಬೈಲ್ ಕ್ಷೇತ್ರ! ಹಳೇ ವಾಹನಕ್ಕೆ ಬೇಡಿಕೆ – ಹೊಸತು ಖರೀದಿ ಏರಿಕೆ
Team Udayavani, Oct 10, 2020, 3:07 PM IST
ಹುಬ್ಬಳ್ಳಿ: ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದ ಆಟೋಮೊಬೈಲ್ ಕ್ಷೇತ್ರ ಕೊರೊನಾದಿಂದ ದೊಡ್ಡ ಆಘಾತಕ್ಕೊಳಗಾಗಿತ್ತಾದರೂ, ಇದೀಗ ನಿಧಾನಕ್ಕೆ ಚೇತರಿಕೆ ಕಾಣುವತ್ತ ಹೆಜ್ಜೆ ಹಾಕಿದೆ. ಜಿಲ್ಲೆಯಲ್ಲಿ ದೊಡ್ಡಮಟ್ಟದ
ಆಟೋಮೊಬೈಲ್ ಉತ್ಪಾದನಾ ಘಟಕಗಳು ಇರದಿದ್ದರೂ, ಮಾರಾಟ ಹಾಗೂ ಸೇವಾ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಿದೆ.
ಜಿಲ್ಲೆಯಲ್ಲಿ ಆಗಿರುವ ನಷ್ಟ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಿಂದ ಜಿಲ್ಲೆಯಲ್ಲಿ ಸುಮಾರು 550-570 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಲಾರಿ, ಟ್ರ್ಯಾಕ್ಟರ್ ಸೇರಿ 500 ಕೋಟಿ ರೂ. ವಹಿವಾಟು ನಡೆಯುತ್ತಿದ್ದರೆ, 50 ಕೋಟಿ ರೂ. ಬಿಡಿಭಾಗಗಳ ವಹಿವಾಟು ಹಾಗೂ ಸುಮಾರು 20 ಕೋಟಿ ರೂ. ಸೇವಾ ಕ್ಷೇತ್ರಕ್ಕೆ ಆಗಿರುವ ನಷ್ಟ. ಅಧಿಕೃತ ಮಾರಾಟ ಹಾಗೂ ಸೇವಾ ವಲಯದಲ್ಲಿ ಇಷ್ಟು ನಷ್ಟವಾದರೆ, ಇನ್ನೂ ಅಸಂಘಟಿತ ವಲಯಕ್ಕೂ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತಾಗೆ ಕಿಂಗ್ಸ್ ಸವಾಲು: ಟಾಸ್ ಗೆದ್ದ ಕೋಲ್ಕತ್ತಾ ಬ್ಯಾಟಿಂಗ್ ಆಯ್ಕೆ
ಚೇತರಿಕೆ ಹಾದಿಯಲ್ಲಿ: ಕೋವಿಡ್-19 ನಂತರದಲ್ಲಿ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಹಾದಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ವಾಹನ ಉತ್ಪಾದನೆಯ ಕಂಪನಿಗಳು ಹೊಸ ಮಾದರಿಯ ವಾಹನಗಳು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದಕ್ಕೆ ಪೂರಕವಾಗಿ ವಾಹನಗಳ ಖರೀದಿಯಲ್ಲೂ ಕೂಡ ಏರಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ ದ್ವಿಚಕ್ರ ವಾಹನ, ಕಾರು, ಟ್ರ್ಯಾಕ್ಟರ್ ಮಾರಾಟ ಉತ್ತಮವಾಗುತ್ತಿವೆ. ಇನ್ನೂ ಅಧಿಕೃತ ಡೀಲರ್‌ಗಳು ಸೇರಿದಂತೆ ಹೊರಗಡೆ ಬಿಡಿ ಭಾಗಗಳ ಮಾರಾಟ ಸಹಜ
ಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಡೀಲರ್‌ಗಳ ವರ್ಕ್‌ಶಾಪ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೊರಗಡೆ ಇನ್ನೂ ಅಂತಹ
ಲಕ್ಷಣಗಳು ಇಲ್ಲ.
ಬೇಡಿಕೆ ಈಡೇರಿಸದ ಸ್ಥಿತಿ: ಕೋವಿಡ್-19 ಪೂರ್ವದಲ್ಲಿದ್ದ ಮಾರುಕಟ್ಟೆ ವ್ಯವಸ್ಥೆಗೆ ಬೇಕಾದ ಬೇಡಿಕೆಗೆ ತಕ್ಕಂತೆ ವಾಹನಗಳ
ಉತ್ಪಾದನೆ ಹಾಗೂ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ಅಗತ್ಯ ಬೇಡಿಕೆ ಈಡೇರಿಸದ ಸ್ಥಿತಿ
ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿರದಿದ್ದರೂ ವಾಹನಗಳು ಹಾಗೂ ಬಿಡಿ ಭಾಗಗಳ ಉತ್ಪನ್ನ ಘಟಕಗಳಲ್ಲಿ
ಕಾರ್ಮಿಕರ ಕೊರತೆಯಿದೆ.
ಇದನ್ನೂ ಓದಿ:ಗುಡ್ ನ್ಯೂಸ್:ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ ಮಾಡಬಹುದು: ಏನಿದು ಹೊಸ ನೀತಿ
ಬಿಡಿಭಾಗ ಪೂರೈಕೆ ಆತಂಕ
ಚೀನಾ ಹಾಗೂ ಭಾರತ ನಡುವಿನ ಬಾಂಧವ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಮದು ಹಾಗೂ ರಫ್ತು ಮೇಲೆ ಕಡಿವಾಣ ಹೇರಲಾಗಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಅದರಲ್ಲೂ ಬಿಡಿ ಭಾಗಗಳ ಪೂರೈಕೆ ಮೇಲೆ ದೊಡ್ಡ ಪರಿಣಾಮ
ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದೀಗ ದಾಸ್ತಾನು ಇರುವ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಚೀನಾದಿಂದ ಆಮದಾಗುತ್ತಿದ್ದ ಬಿಡಿ ಭಾಗಗಳ ಬೆಲೆ ಹಾಗೂ ಉತ್ಪಾದನಾ ಸಾಮರ್ಥ್ಯ ದೇಶದಲ್ಲಿಲ್ಲ ಎನ್ನುವ ಆತಂಕವಿದೆ.
– ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.