“ಒತ್ತಡ ನಿಭಾಯಿಸುವುದು ಅಗತ್ಯ’: ಆವೇಶ್ ಖಾನ್
Team Udayavani, Apr 6, 2022, 4:00 AM IST
ಮುಂಬಯಿ: ಐಪಿಎಲ್‌ನಂತಹ ಕೂಟಗಳಲ್ಲಿ ಬೌಲರ್‌ಗಳಿಗೆ ಬಿಡುವು ಸಿಗುವುದು ಅಪರೂಪ. ಒತ್ತಡವನ್ನು ನಿಭಾಯಿಸಿದರೆ ನಾವಿಲ್ಲಿ ಯಶಸ್ಸು ಸಾಧಿಸಬಹುದು ಎಂದು ಯುವ ವೇಗಿ ಆವೇಶ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆವೇಶ್ ಖಾನ್ ಸೋಮವಾರದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ವಿರುದ್ಧ ತಂಡದ ಗೆಲುವಿನ ರೂವಾರಿಯಾಗಿದ್ದರು. ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 24 ರನ್ ಬಿಟ್ಟುಕೊಟ್ಟಿದ್ದ ಅವರು ನಾಲ್ಕು ಅಮೂಲ್ಯ ವಿಕೆಟ್ ಹಾರಿಸಿದ್ದರು. ಇಷ್ಟು ಮಾತ್ರವಲ್ಲದೇ 18ನೇ ಓವರನ್ನು ಅಮೋಘವಾಗಿ ಎಸೆದು ತನ್ನ ತಂಡ 12 ರನ್ನುಗಳಿಂದ ಗೆಲ್ಲಲು ಸಹಕರಿಸಿದ್ದರು.
ಟೆಸ್ಟ್ ಆಡದ ಅತ್ಯಂತ ದುಬಾರಿ ಭಾರತೀಯ ಆಟಗಾರರಾದ ಆವೇಶ್ ಅವರನ್ನು ತನ್ನ ಮೂಲ ಬೆಲೆ (20 ಲಕ್ಷ ರೂ.)ಗಿಂತ 25 ಪಟ್ಟು ಹೆಚ್ಚಿಗೆ ನೀಡಿ ಲಕ್ನೋ ಫ್ರಾಂಚೈಸಿ ಖರೀದಿಸಿತ್ತು.
ಐಪಿಎಲ್‌ನಂತಹ ಕೂಟಗಳಲ್ಲಿ ಪ್ರತಿಯೊಂದು ಪಂದ್ಯದಲ್ಲೂ ಬೌಲರ್‌ಗಳಿಗೆ ಬಹಳಷ್ಟು ಒತ್ತಡಗಳಿರುತ್ತದೆ. ಈ ಒತ್ತಡವನ್ನು ನಿಭಾಯಿಸುವುದು ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ನಾನು ತಂಡದ ಪ್ರಮುಖ ಬೌಲರ್ ಎಂದು ಭಾವಿಸಿಲ್ಲ. ಆದರೆ ತಂಡಕ್ಕಾಗಿ ಪ್ರತಿ ಬಾರಿಯೂ ವಿಕೆಟ್ ಪಡೆಯಲು ಪ್ರಯತ್ನಿಸುವೆ ಎಂದು ಪಂದ್ಯದ ಬಳಿಕ ಆವೇಶ್ ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ
ಒಂದು ವೇಳೆ ನಾನು ಪ್ರಮುಖ ಬೌಲರೆಂದು ಆಲೋಚಿಸಿದರೆ ಸಹಜವಾಗಿ ಒತ್ತಡ ಬೀಳುತ್ತದೆ. ಇದು ಅನಗತ್ಯ. ಇದರ ಬದಲು ವಿಕೆಟ್ ಪಡೆಯುವ ಉದ್ದೇಶದೊಂದಿಗೆ ಬೌಲಿಂಗ್ ನಡೆಸಿದರೆ ಯಶಸ್ಸು ಸಾಧಿಸಬಹುದು ಎಂದವರು ತಿಳಿಸಿದರು.
ಗೆಲುವಿನ ಕಾರಣಕ್ಕಾಗಿ ನನ್ನ ಕೊಡುಗೆ ತಂಡಕ್ಕೆ ಸಿಕ್ಕಿರುವುದು ಖುಷಿ ತಂದುಕೊಟ್ಟಿದೆ. ಮೊದಲ ಪಂದ್ಯದಲ್ಲಿ 11 ರನ್ ಕಾಪಾಡುವ ಅವಕಾಶ ಲಭಿಸಿದ್ದರೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ವಿಕೆಟ್ ಪಡೆಯುವುದರತ್ತ ಗಮನ ಹರಿಸಿರುವುದು ಒಳ್ಳೆಯ ಫಲ ನೀಡಿದೆ ಎಂದು ಆವೇಶ್ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.