KSRTC, BMTC ಗೆ ಪ್ರಶಸ್ತಿ
Team Udayavani, Sep 23, 2023, 11:23 PM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಕಾರ್ಪೊರೇಟ್ ಕೊಲ್ಯಾಟರಲ್ ಪ್ರಶಸ್ತಿಗಳು ಲಭಿಸಿವೆ.
ದಿಲ್ಲಿಯ ಪಿಎಚ್‌ಡಿ ಚೇಂಬರ್ಸ್‌ನಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಆಯೋಜಿಸಿದ್ದ 17ನೇ ವಿಶ್ವ ಸಂವಹನ ಸಮ್ಮೇಳನದಲ್ಲಿ ಎರಡೂ ಸಂಸ್ಥೆಗಳಿಗೆ ಪ್ರಶಸ್ತಿ ಮಾಡಲಾಯಿತು.
ಕೆಎಸ್‌ಆರ್‌ಟಿಸಿಗೆ ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ (ಡೈಮಂಡ್ ಪ್ರಶಸ್ತಿ), ಅತ್ಯುತ್ತಮ ವರ್ಷದ ಸೇವಾ ಉಪಕ್ರಮ (ಡೈಮಂಡ್ ಪ್ರಶಸ್ತಿ), ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ (ಡೈಮಂಡ್ ಪ್ರಶಸ್ತಿ), ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ (ಬೆಳ್ಳಿ ಪ್ರಶಸ್ತಿ), ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ (ಬೆಳ್ಳಿ ಪ್ರಶಸ್ತಿ), ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ (ಬೆಳ್ಳಿ ಪ್ರಶಸ್ತಿ), ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ (ಕಂಚಿನ ಪ್ರಶಸ್ತಿ), ಸಾರ್ವಜನಿಕ ಸಂಪರ್ಕ ಅಧ್ಯಯನ (ಕಂಚಿನ ಪ್ರಶಸ್ತಿ) ಹಾಗೂ ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ ವಿಭಾಗದಲ್ಲಿ ಸಮಾಧಾನಕರ ಪ್ರಶಸ್ತಿ ಲಭಿಸಿದೆ.
ಬಿಎಂಟಿಸಿಗೆ ಸಾಂಸ್ಥಿಕ ಕೈಪಿಡಿ (ಡೈಮಂಡ್ ಪ್ರಶಸ್ತಿ), ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ (ಚಿನ್ನದ ಪ್ರಶಸ್ತಿ), ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ (ಬೆಳ್ಳಿ ಪ್ರಶಸ್ತಿ) ಮತ್ತು ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು ವಿಭಾಗದಲ್ಲಿ ಕಂಚಿನ ಪ್ರಶಸ್ತಿ ದಕ್ಕಿದೆ.
ಬಾಂಗ್ಲಾದೇಶದ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿಆರ್‌ಸಿಐ ಗೌರವ ಮುಖ್ಯಸ್ಥ ಎಂ.ಬಿ. ಜಯರಾಂ, ಎನ್‌ಎಫ್ಎಲ್ ನಿರ್ದೇಶಕ ಬಿ.ವಿ. ವಿಟಲ್, ಮಾಧ್ಯಮ ಮತ್ತು ಪತ್ರಿಕೋದ್ಯಮ ಸಂಸ್ಥೆ ನಿರ್ದೇಶಕ ಪ್ರೊ| ಮ್ಯಾಥ್ಯೂ ಹಿಬರ್ಡ್ ಅವರಿಂದ ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲೂರಿ, ಕೋಲಾರ ವಿಭಾಗದ ವಿ. ಬಸವರಾಜು, ಬೆಂಗಳೂರು ಕೇಂದ್ರೀಯ ವಿಭಾಗದ ಎಸ್. ಲಕ್ಷ್ಮಣ್, ಮಂಡ್ಯ ವಿಭಾಗದ ಎಸ್.ಪಿ. ನಾಗರಾಜ ಹಾಗೂ ಬಿಎಂಟಿಸಿಯ ಪಶ್ಚಿಮ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಶ್ರೀನಾಥ್ ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.