ಸುರತ್ಕಲ್‌ನಿಂದ ಕಟೀಲು ಕ್ಷೇತ್ರಕ್ಕೆ ಧರ್ಮ ಜಾಗೃತಿ ನಡೆ
Team Udayavani, Mar 7, 2021, 11:51 PM IST
ಸುರತ್ಕಲ್: ಹಿಂದೂ ಯುವಸೇನೆ ಓಂಕಾರ ಘಟಕ, ಓಂಕಾರ ಮಹಿಳಾ ಘಟಕ ಸುರತ್ಕಲ್, ಶ್ರೀಕೃಷ್ಣ ಶಾಖೆ, ಕುಡುಂಬೂರು ಶಾಖೆ, ಪೇಜಾವರ ಶಾಖೆ ಪೊರ್ಕೋಡಿ, ಶ್ರೀ ದುರ್ಗಾ ಶಾಖೆ ಎಕ್ಕಾರು ಇವುಗಳ ಆಶ್ರಯದಲ್ಲಿ ಸುರತ್ಕಲ್‌ನಿಂದ ಕಟೀಲು ಕ್ಷೇತ್ರಕ್ಕೆ 3ನೇ ವರ್ಷದ ಧರ್ಮ ಜಾಗೃತಿ ನಡೆ ಪಾದಯಾತ್ರೆ ರವಿವಾರ ಜರಗಿತು.
ಬೆಳಗ್ಗೆ 5ಗಂಟೆಗೆ ಕಾಂತೇರಿ ಧೂಮಾವತಿ ದೇವಸ್ಥಾನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಭ್ರಮರಾಂಬಿಕೆಯ ಭಾವಚಿತ್ರವುಳ್ಳ ಟ್ಯಾಬ್ಲೋದೊಂದಿಗೆ ಸುರತ್ಕಲ್‌ನಿಂದ ಕೃಷಾಪುರ ಕಾಟಿಪಳ್ಳ, ಸೂರಿಂಜೆ, ಶಿಬರೂರು ಎಕ್ಕಾರು ಮಾರ್ಗವಾಗಿ ಪಾದಯಾತ್ರೆ ಜರಗಿ ಕ್ಷೇತ್ರ ತಲುಪಿತು. ಸುರತ್ಕಲ್‌ನಲ್ಲಿ ನಡೆದ ಉದ್ಘಾಟನ ಕಾರ್ಯಕ್ರಮದಲ್ಲಿ ಇಡ್ಯ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್, ಕಾಂತೇರಿ ಶ್ರೀ ಧೂಮಾವತಿ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಪಣಂಬೂರು ಕಾವರಮನೆ ಮಂಜುಕಾವ, ಎಚ್‌ಎಂಎಸ್ ರಾಜ್ಯ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ, ಹೊಸಬೆಟ್ಟು ರಾಘವೇಂದ್ರ ಮಠದ ಎಚ್.ವಿ. ರಾಘವೇಂದ್ರ ರಾವ್, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಯಶೋಧರ ಚೌಟ, ಕೊಡೆತ್ತೂರು ಗುತ್ತು ದೇವೀ ಪ್ರಸಾದ್ ಶೆಟ್ಟಿ,ಜಯರಾಮ ಶೆಟ್ಟಿ, ಮನಪಾ ಸದಸ್ಯರಾದ ಸರಿತಾ ಶಶಿಧರ್, ಶ್ವೇತಾ, ನಯನಾ ಆರ್. ಕೋಟ್ಯಾನ್, ಹಿಂದೂ ಯುವಸೇನೆ ಓಂಕಾರ ಘಟಕ ಸುರತ್ಕಲ್ ಇದರ ಸಂಚಾಲಕ ವಸಂತ ಆಚಾರ್ಯ ಕೃಷ್ಣಾಪುರ, ಪ್ರಮುಖರಾದ ಸುಕುಮಾರ್ ತಡಂಬೈಲ್, ಸುಧಾಕರ್ ಕರ್ಕೇರ, ಪುರುಷೋತ್ತಮ್ ಬಂಗೇರ, ಕೈಲಾಸ್ ತಡಂಬೈಲ್, ನಾಗೇಶ್ ಶೆಟ್ಟಿ, ಉದಯ್ ಆಳ್ವ ಇಡ್ಯಾ, ನಾಗೇಶ್ ಶೆಟ್ಟಿ ಹನುಮನಗರ, ಪೃಥ್ವಿರಾಜ್ ಶೆಟ್ಟಿ ಕಡಂಬೋಡಿ, ಪ್ರವೀಣ್ ಆರ್. ಕುಮಾರ್, ಸು ಧೀರ್ ಶ್ರೀಯಾನ್, ಭರತ್‌ರಾಜ್ ಕೃಷ್ಣಾಪುರ, ತಿಲಕ್ ಅಮೀನ್, ನವೀನ್ ಕುಡುಂಬೂರು, ಭಾಸ್ಕರ ಕೋಟ್ಯಾನ್, ಜಯಂತಿ ಟಿ. ರೈ, ಸುಲತಾ, ಸುಜಾತಾ, ಹಿಂದೂ ಯುವಸೇನೆಯ ವಿವಿಧ ಶಾಖೆಯ ಪದಾ ಧಿಕಾರಿಗಳು, ಕಾರ್ಯಕರ್ತರು, ದುರ್ಗಾ ಶಾಖೆಯ ಪದಾ ಧಿಕಾರಿಗಳು, ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.