![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 11, 2020, 5:49 AM IST
ಕೋವಿಡ್-19 ಬಗ್ಗೆ ತುಳು ಲಿಪಿಯಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್.
ಉಡುಪಿ: ಸಾವಿರಾರು ವರ್ಷಗಳ ಇತಿಹಾಸ ಇರುವ ತುಳು ಲಿಪಿ ಬಳಕೆಯಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ತುಳು ಲಿಪಿಯಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ಸದ್ಯ ಉಭಯ ಜಿಲ್ಲೆಯಾದ್ಯಂತ ಪ್ರಚಾರದಲ್ಲಿದೆ.
ಜನರಿಗೆ ಕೋವಿಡ್-19 ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಜಾಗಗಳಾದ ಅಂಗಡಿ, ಆಸ್ಪತ್ರೆ ಮೊದಲಾದ ಕಡೆಯಲ್ಲಿ ತುಳು ಲಿಪಿಯಲ್ಲಿ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಆ ಮೂಲಕ ಲಿಪಿಯ ಪ್ರಚಾರ, ಕೋವಿಡ್-19 ಬಗ್ಗೆ ಜಾಗ್ರತೆ ಮೂಡಿಸುವ ಎರಡೆರಡು ಕೆಲಸ ಆಗುತ್ತಿದೆ. ಉಡುಪಿಯ ಕಡಿಯಾಳಿ, ಕೃಷ್ಣಮಠ ಸೇರಿದಂತೆ ಕಾರ್ಕಳ, ಬಜಗೋಳಿ, ಹೊಸ್ಮಾರ್, ಪುತ್ತೂರು ಮಂಗಳೂರು ಭಾಗದಲ್ಲಿ ಈಗಾಗಲೇ ಪೋಸ್ಟರ್ ಹಾಕಲಾಗಿದ್ದು ಉಳಿದೆಡೆ ಪೋಸ್ಟರ್ ಹಚ್ಚುವ ಕೆಲಸ ನಡೆಯುತ್ತಿದೆ.
ಅಣ್ಣಾಮಲೈ ಬೆಂಬಲ
ಕಳೆದ ವಾರ ತುಳು ಲಿಪಿಯ ಜನಜಾಗ್ರತಿ ಮತ್ತು ತುಳು ಲಿಪಿಯ ಅಪಪ್ರಚಾರದ ವಿರುದ್ಧ ಟ್ವಿಟ್ಟರ್‌ನಲ್ಲಿ “ಟ್ವಿಟ್ ತುಳುನಾಡು’ ಹ್ಯಾಶ್ ಟ್ಯಾಗ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ತುಳು ಸಂಸ್ಕೃತಿ ಆಚಾರ ವಿಚಾರಗಳನ್ನು ಪ್ರಶಂಸಿಸಿ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ತುಳುಭಾಷೆಗೆ ಪ್ರೋತ್ಸಾಹಿಸಿದ್ದಾರೆ.
ಪದ-ತುಳು ಆ್ಯಪ್
ತುಳು ಲಿಪಿ ಟೈಪ್ ಮಾಡಲು “ಪದ-ತುಳು’ ಎಂಬ ಹೊಸ ಆ್ಯಪ್ ಅನ್ನು ತಯಾರಿಸಲಾಗಿದೆ. ಗೂಗಲ್ ಆ್ಯಂಡ್ರೈಡ್ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ.
ಕೆ.ಪಿ ರಾವ್ ಪ್ರೇರಣೆ
ತುಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಕೆ.ಪಿ. ರಾವ್ ಅವರು ಭೇಟಿಯಾದಾಗ ಈ ಬಗ್ಗೆ ಅಭಿಪ್ರಾಯ ಮೂಡಿತ್ತು. ಇದರಿಂದ ತುಳು ಬರೆಯಲು ಸಹಕಾರವಾಗಬಹುದೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಹಿಂದೆಯೂ ಕನ್ನಡ, ತಮಿಳು ಭಾಷೆಗೆ ಆ್ಯಪ್ ಮಾಡಿದ್ದೇವೆ. ತುಳುಸಿರಿ ಫಾಂಟ್ ಬಳಕೆ ಮಾಡಿಕೊಂಡು ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದೀಗ ಪದ-ತುಳು ಆ್ಯಪ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.
-ಲೋಹಿತ್ ಶಿವಮೂರ್ತಿ. , ಪದ-ತುಳು ಆ್ಯಪ್ ಅಭಿವೃದ್ಧಿಪಡಿಸಿದವರು.
ತುಳು ಪೋಸ್ಟರ್
ಕೋವಿಡ್-19 ತಡೆಗೆ ಕರಾವಳಿ ಭಾಗದ ಜನರು ಉತ್ತಮ ಸ್ಪಂದಿಸುತ್ತಿದ್ದಾರೆ. ಇನ್ನು ಕೂಡ ಜಾಗರೂಕರಾಗಿರ ಬೇಕೆಂದು ಜೈ ತುಳುನಾಡು ಸಂಘಟನೆ ಮೂಲಕ ಈ ತುಳು ಲಿಪಿಯ ಪೋಸ್ಟ್‌ರ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.
– ರವಿಚಂದ್ರ ಆಚಾರ್ಯ ದುರ್ಗಾನಗರ ,
ಪ್ರಧಾನ ಸಂಚಾಲಕರು, ಜೈ ತುಳುನಾಡು ಕಾರ್ಕಳ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.