Ayodhya: ಮಂದಿರ ಮಾದರಿ ಅಯೋಧ್ಯೆ ಮಸೀದಿಗೂ ದೇಣಿಗೆ ಸಂಗ್ರಹ
Team Udayavani, Jan 17, 2024, 12:29 AM IST
ಲಕ್ನೋ: ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಿಸಲು ಇಂಡೊ-ಇಸ್ಲಾಮಿಕ್ ಕಲ್ಚರಲ್ ಫೌಂಡೇ ಶನ್ (ಐಐಸಿಎಫ್) ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕ ರಿಂದ ದೇಣಿಗೆ ಸಂಗ್ರಹಿಸಿದ ರೀತಿ ಯಲ್ಲೇ ಮಸೀದಿ ನಿರ್ಮಿಸಲು ದೇಣಿಗೆ ಸಂಗ್ರಹ ಅಭಿ ಯಾನ ಆರಂಭಿಸಲು ಐಐಸಿಎಫ್ ನಿರ್ಧರಿಸಿದೆ. ಅದ ಕ್ಕಾಗಿ ಮುಂದಿನ ತಿಂಗಳು ಅಥವಾ ಮಾರ್ಚ್ ನಲ್ಲಿ ವೆಬ್‌ಸೈಟ್ ಆರಂಭಿಸಲಾಗುತ್ತದೆ. ಕ್ಯುಆರ್ ಕೋಡ್ ಮೂಲಕ ಹಣ ಸಂಗ್ರಹ ನಡೆಸುವುದಕ್ಕೂ ಫೌಂಡೇಷನ್ ತೀರ್ಮಾನಿಸಿದೆ.
ಮಸೀದಿ ನಿರ್ಮಾಣಕ್ಕೆ 5 ಎಕರೆ ಸ್ಥಳ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ 2020ರ ಫೆಬ್ರವರಿಯಲ್ಲಿ ಅಯೋಧ್ಯೆಯ ಧನ್ನಿಪುರದಲ್ಲಿ ಐದು ಎಕರೆ ಸ್ಥಳವನ್ನು ಮಸೀದಿ ನಿರ್ಮಾಣಕ್ಕೆ ನೀಡಲಾಯಿತು.
“ಮಸೀದಿ, ಆಸ್ಪತ್ರೆ, ಸಮುದಾಯ ಅಡುಗೆ ಮನೆ, ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರ ನಿರ್ಮಿಸಲಾಗುವುದು. ಅಜಾನ್ ಸಂದರ್ಭ ದಲ್ಲಿ ಬೆಳಕು ಮತ್ತು ನೀರಿನ ಪ್ರದರ್ಶನ ಏರ್ಪಡಿಸ ಲಾಗುವುದು. ಇದಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಲಾಗುವುದು. ಐಐಸಿಎಫ್ ವತಿಯಿಂದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವೆಬ್‌ಸೈಟ್ ಆರಂಭಿಸಲಾಗುವುದು’ ಎಂದು ಐಐಸಿಎಫ್ ಅಧ್ಯಕ್ಷ ಜಾಫರ್ ಅಹ್ಮದ್ ಫಾರೂಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.