Ayodhya: ರಜತ ಕಲಶ ಸೇವೆ- ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ
Team Udayavani, Feb 2, 2024, 12:53 AM IST
ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಅನಂತರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಿತ್ಯವೂ ಮಂಡಲೋತ್ಸವ ನಡೆಯುತ್ತಿದೆ. ಕಲಶಾಭಿಷೇಕ, ಹೋಮ, ಹವನ, ನಿತ್ಯಪೂಜೆ, ಉತ್ಸವ ಇತ್ಯಾದಿ ಪ್ರಮುಖವಾಗಿವೆ.
ಈವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅಲ್ಲಿನ ಪ್ರಮುಖರಿಂದ ರಜತಕಲಶಾಭಿಷೇಕ ನಡೆದಿದ್ದು. ಇದೀಗ ಭಕ್ತರಿಂದ ರಜತಕಲಶಾಭಿಷೇಕ ಆರಂಭಗೊಂಡಿದೆ. ಮಾರ್ಚ್ 10ರ ವರೆಗೆ ಈ ಸೇವೆಗೆ ಅವಕಾಶ ಇರುತ್ತದೆ. ಒಂದು ಕಲಶದ ಸೇವಾದಾರರ ಪರವಾಗಿ ಎರಡರಿಂದ ಮೂರು ಮಂದಿ ಭಾಗವಹಿಸ ಬಹುದಾಗಿದೆ. 48 ದಿನಗಳ ಕಾಲ ನಡೆಯುವ ಈ ಮಂಡಲೋತ್ಸವದಲ್ಲಿ 1,100 ಬೆಳ್ಳಿ ಕಲಶಗಳ ಮೂಲಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.
2023ನೇ ಸಾಲಿನಲ್ಲಿ ಬಡವರ ಕಲ್ಯಾಣಕ್ಕಾಗಿ ಮನೆ ನಿರ್ಮಾಣ, ಶಿಕ್ಷಣ, ಆರೋಗ್ಯ ಅಥವಾ ನೋಂದಾಯಿತ ಗೋಶಾಲೆಗಳು, ಅನಾಥಾಶ್ರಮ, ವೃದ್ಧಾಶ್ರಮ ಮೊದಲಾದ ಯಾವುದಾದರೂ ಸಮಾಜ ಸೇವಾ ಸಂಸ್ಥೆಗಳಿಗೆ ಕನಿಷ್ಠ 5 ಲಕ್ಷ ರೂ. ದೇಣಿಗೆ ಅಥವಾ ಆರ್ಥಿಕ ಸಹಾಯ ನೀಡಿರಬೇಕು. ವೈಯಕ್ತಿಕ ಅಥವಾ ಸಂಸ್ಥೆಯ ನೆಲೆಯಲ್ಲಿ ಮಾಡಿರುವ ಸಮಾಜ ಸೇವೆಯನ್ನು ಪರಿಗಣಿಸಲಾಗುವುದು. ರಾಮರಾಜ್ಯದ ಪರಿಕಲ್ಪನೆಯಡಿ ಸಮಾಜ ಸೇವೆ ಹೆಚ್ಚಬೇಕು ಎಂಬ ನೆಲೆಯಲ್ಲಿ ಇದು ನಡೆಯುತ್ತಿದೆ. ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ಸೇವಾಕರ್ತರೇ ರಜತಕಲಶವನ್ನು ಒಂದು ದಿನ ಮುಂಚಿತವಾಗಿಯೇ ಮುಟ್ಟಿಸಬೇಕು. ಪೂಜೆಯ ಅನಂತರದಲ್ಲಿ ರಜತಕಲಶ ಸಹಿತ ಪ್ರಸಾದವನ್ನು ಸೇವಾಕರ್ತರಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Trasi: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Udupi: ಗ್ಯಾರಂಟಿ ಯೋಜನೆಗಳ ಯಾವುದೇ ಕಾರಣಕ್ಕೂ ರದ್ದುಗೊಳಿಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Kambala: ಹಲವು ವರ್ಷಗಳ ಬಳಿಕ ಪುನರಾರಂಭ; ಮಿಯ್ಯಾರಿನಲ್ಲಿ ಕಂಬಳ ಕೋಣಗಳಿಗೆ ತರಬೇತಿ
Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು
MUST WATCH
ಹೊಸ ಸೇರ್ಪಡೆ
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ
TTD: ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಆಗಿರಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.