Ayodhya: ಅಯೋಧ್ಯೆಗೆ ಹರಿದುಬರಲಿದೆ 4,500 ಕೋ.ರೂ. ಖಾಸಗಿ ಬಂಡವಾಳ
23 ದೊಡ್ಡ ಯೋಜನೆಗಳು ಚಾಲ್ತಿಯಲ್ಲಿ-ಇನ್ನೆರಡು ವರ್ಷಗಳಲ್ಲಿ ಕೆಲವು ಯೋಜನೆಗಳು ಮುಕ್ತಾಯ
Team Udayavani, Dec 9, 2023, 10:38 PM IST
ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪಟ್ಟಾಭಿಷೇಕಕ್ಕೆ ಮುಹೂರ್ತ ಸಿದ್ಧವಾಗಿದೆ. ಈ ನಡುವೆ ಇಡೀ ಅಯೋಧ್ಯೆಯ ಚಿತ್ರಣವೇ ಬದಲಾಗುವಂತಹ ಹಲವು ಆರ್ಥಿಕ ಯೋಜನೆಗಳ ವಿವರಗಳೂ ಲಭ್ಯವಾಗುತ್ತಿವೆ.
ಈಗಾಗಲೇ ಅಯೋಧ್ಯೆಯಲ್ಲಿ 23 ದೊಡ್ಡ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 8 ನಗರನಿರ್ಮಾಣ ಯೋಜನೆಗಳು, 15 ಖಾಸಗಿ ಹೋಟೆಲ್‌ಗಳೂ ಸೇರಿವೆ. ಒಟ್ಟಾರೆ 4,500 ಕೋಟಿ ರೂ. ಬಂಡವಾಳ ಹರಿದುಬರಲಿದೆ. ಕೆಲವು ಯೋಜನೆಗಳು ಇನ್ನೆರಡು ವರ್ಷಗಳಲ್ಲಿ ಮುಗಿಯಲಿದ್ದರೆ, ಇನ್ನು ಕೆಲವು ಹಂತಹಂತವಾಗಿ ಮುಗಿಯಲಿವೆ ಎಂದು ಉತ್ತರಪ್ರದೇಶ ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.
ಪಾಟ್ನಾ-ಅಯೋಧ್ಯಾ-ಲಕ್ನೋಗೆ ವಂದೇ ಭಾರತ್
ದೇಶಾದ್ಯಂತ ಜನ ಅಯೋಧ್ಯೆಗೆ ಹೋಗುವುದಂತೂ ಖಚಿತ. ಅದನ್ನು ಅರಿತಿರುವ ರೈಲ್ವೆ ಸಚಿವಾಲಯ ಗರಿಷ್ಠ ಜನ ಪ್ರಯಾಣಿಸುವ ಸ್ಥಳಗಳಿಂದ ವಂದೇ ಭಾರತ್ ಟ್ರೈನು ಹೊರಡಿಸಲು ತೀರ್ಮಾನಿಸಲಿದೆ. ಇದಕ್ಕೆ ಪೂರಕವಾಗಿ ಬಿಹಾರದ ಪಾಟ್ನಾದಿಂದ ಉತ್ತರಪ್ರದೇಶದ ಅಯೋಧ್ಯೆ, ನಂತರ ಲಕ್ನೋಗೆ ತಲುಪುವಂತೆ ವಂದೇ ಭಾರತ್ ಟ್ರೈನು ಸಂಚಾರ ಆರಂಭವಾಗಲಿದೆ. ಇದಕ್ಕೆ ಸ್ವತಃ ಪ್ರಧಾನಿ ಮೋದಿ ಮುಂದಿನ ತಿಂಗಳು ಚಾಲನೆ ನೀಡುವ ನಿರೀಕ್ಷೆಯಿದೆ.
ಇಂದಿನಿಂದ 41 ದಿನಗಳ ಇಸ್ಕಾನ್ ಎತ್ತಿನಗಾಡಿ ಯಾತ್ರೆ
ಜ.22ಕ್ಕೆ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆಯಾಗುವ ಹೊತ್ತಿನಲ್ಲೇ ಇಸ್ಕಾನ್ ಇಂಡಿಯಾ ವಿಶೇಷ ಉಪಕ್ರಮವೊಂದನ್ನು ಇಟ್ಟುಕೊಂಡಿದೆ. ಅದು ಭಾನುವಾರದಿಂದ ದೆಹಲಿಯ ಕೈಲಾಶ್ ನಗರದ ಇಸ್ಕಾನ್ ಕೇಂದ್ರದಿಂದ ಅಯೋಧ್ಯೆಗೆ ಯಾತ್ರೆ ಆರಂಭಿಸಲಿದೆ. ಸರಿಯಾಗಿ ಜ.22ಕ್ಕೆ ಸ್ಥಳಕ್ಕೆ ತಲುಪಲಿದೆ. ಅರ್ಥಾತ್ ಹಿಂದೆ ಪಾಂಡವರ ರಾಜಧಾನಿಯಾಗಿ ಇಂದ್ರಪ್ರಸ್ಥವೆಂದು ಕರೆಸಿಕೊಂಡಿದ್ದ ದೆಹಲಿಯಿಂದ ಅಯೋಧ್ಯೆಗೆ 635 ಕಿ.ಮೀ. ದೂರವನ್ನು ಎತ್ತಿನಗಾಡಿಯಲ್ಲಿ ಕ್ರಮಿಸಲಿದೆ! ಈ ಯಾತ್ರೆಯ ಮೂಲಕ ಮಾರ್ಗಪೂರ ಹಳ್ಳಿಗರನ್ನು, ನಗರಪ್ರದೇಶಗಳ ಜನರನ್ನು ಸಂಪರ್ಕಿಸಿ ಶ್ರೀರಾಮನ ಬಗ್ಗೆ ಅರಿವು ಮೂಡಿಸುವುದು ಇಸ್ಕಾನ್ ಉದ್ದೇಶ. ಈ ಯಾತ್ರೆಯಲ್ಲಿ ಭಾರತೀಯರು ಮಾತ್ರವಲ್ಲ ವಿದೇಶೀಯರೂ ಪಾಲ್ಗೊಳ್ಳಲಿದ್ದಾರೆ. ರಷ್ಯಾ, ಮಾರಿಷಸ್‌ನ ಭಕ್ತರೂ ಶ್ರೀರಾಮಪ್ರಜ್ಞೆಯನ್ನು ಪಸರಿಸುವುದಕ್ಕೆ ನೆರವಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.