Ayodhya: ರಾಮ ಮಂದಿರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿರುವ ಸಾವಿರಾರು ಕೊರಿಯನ್ನರು!
ಅಯೋಧ್ಯೆಯನ್ನು ಅಜ್ಜಿಯ ಮನೆ ಎಂದು ಪರಿಗಣಿಸಿರುವ ದಕ್ಷಿಣ ಕೊರಿಯನ್ನರು
Team Udayavani, Jan 30, 2024, 9:24 PM IST
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಿರುವ ಭವ್ಯ ರಾಮ ಮಂದಿರವನ್ನು ವೀಕ್ಷಿಸಲು ದಕ್ಷಿಣ ಕೊರಿಯಾದ ಸಾವಿರಾರು ಮಂದಿ ಭಾರತಕ್ಕೆ ಆಗಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಕೊರಿಯನ್ನರ ಐತಿಹಾಸಿಕ ನಂಬಿಕೆ ಪ್ರಕಾರ, 2000 ವರ್ಷಗಳ ಹಿಂದೆ ಅಯೋಧ್ಯೆಯಿಂದ ಯುವ ರಾಣಿ ಸೂರಿರತ್ನ ಹಡಗಿನಲ್ಲಿ 4,500 ಕಿ.ಮೀ. ದೂರ ಪಯಣಿಸಿ, ಕೊರಿಯಾದ ಗಯಾ ಸಾಮ್ರಾಜ್ಯಕ್ಕೆ ಆಗಮಿಸಿ, ರಾಜ ಕಿಮ್ ಸುರೊ ಅವರನ್ನು ವರಿಸಿದರು. ರಾಜಕುಮಾರಿ ಸೂರಿರತ್ನ ನಂತರ ರಾಣಿ ಹಿಯೋ ಹ್ವಾಂಗ್-ಓಕೆ ಆದಳು. ಈಗಲು ದಕ್ಷಿಣ ಕೊರಿಯಾದ ಸುಮಾರು 60 ಲಕ್ಷ ಮಂದಿ ತಾವು ರಾಣಿ ಸೂರಿರತ್ನ ಅವರ ವಂಶಸ್ಥರಾಗಿದ್ದು, ಅಯೋಧ್ಯೆಯನ್ನು ತಮ್ಮ ಅಜ್ಜಿಯ ಮನೆ ಎಂದೇ ಪರಿಗಣಿಸುತ್ತಾರೆ.
ಜ.22ರಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾಂಭದ ಲೈವ್ ಪ್ರಸಾರವನ್ನು ದಕ್ಷಿಣ ಕೊರಿಯಾದಲ್ಲಿ ಸಾವಿರಾರು ಮಂದಿ ವೀಕ್ಷಿಸಿದರು.
ಸ್ಮಾರಕ ನಿರ್ಮಾಣ:
ಇನ್ನೊಂದೆಡೆ, ಉ.ಪ್ರ.ಸರ್ಕಾರ ಮತ್ತು ದಕ್ಷಿಣ ಕೊರಿಯಾ ಸರ್ಕಾರಗಳು ಜಂಟಿಯಾಗಿ ಸರಯೂ ನದಿ ತೀರದಲ್ಲಿ ರಾಣಿ ಹಿಯೋ ಹ್ವಾಂಗ್-ಓಕೆ ಸ್ಮಾರಕ ನಿರ್ಮಿಸಿವೆ. ಅದಕ್ಕೆ ಗೌರವ ಸಲ್ಲಿಸಲು ಪ್ರತಿ ವರ್ಷ ದಕ್ಷಿಣ ಕೊರಿಯಾದ ನೂರಾರು ಪ್ರವಾಸಿಗರು ಅಯೋಧ್ಯೆಗೆ ಆಗಮಿಸುತ್ತಾರೆ.
6 ದಿನಗಳಲ್ಲಿ 19 ಲಕ್ಷ ಭಕ್ತರಿಂದ ದರ್ಶನ
ಇದೇ ವೇಳೆ ರಾಮ ಮಂದಿರ ವೀಕ್ಷಿಸಲು ಜ.23ರಿಂದ ಇದುವರೆಗೆ 18.75 ಲಕ್ಷ ಮಂದಿ ಆಗಮಿಸಿದ್ದಾರೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂದಿರವನ್ನು ಲೋಕಾರ್ಪಣೆ ಮಾಡಿದ್ದರು. 6ನೇ ದಿನವಾಗಿದ್ದ ಭಾನುವಾರ 2.25 ಲಕ್ಷ ಮಂದಿ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.