Ayodhya: ರಾಜ್ಯದಲ್ಲಿ ನಿಲ್ಲದ ರಾಮಮಂದಿರ ರಾಜಕೀಯ
Team Udayavani, Jan 14, 2024, 12:10 AM IST
ಕುಮಟಾ: ಹಿಂದೂ ಸಮಾಜಕ್ಕೆ ಸಾವಿರಾರು ವರ್ಷಗಳ ಋಣ ಇದೆ. ಹಿಂದೂಗಳಿಗೆ ಋಣ ಇಟ್ಟುಕೊಂಡು ಗೊತ್ತಿಲ್ಲ. ಅದನ್ನು ತೀರಿಸದಿದ್ದರೆ ಹಿಂದೂ ರಕ್ತವೇ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತ್ ಕುಮಾರ್ ಹೆಗಡೆ ಗುಡುಗಿದ್ದಾರೆ.
ಕುಮಟಾದಲ್ಲಿ ಶನಿವಾರ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವ ರು, ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ನಿರ್ನಾಮ ಮಾಡಿ ರಾಮ ಮಂದಿರ ನಿರ್ಮಾಣ ಮಾಡಿದ್ದು ಆರಂಭ. ದೇಶದ ಹಲವೆಡೆ ಹಿಂದೂ ಧರ್ಮಕ್ಕೆ ಅನ್ಯಾಯ ಆದ ಸಂಗತಿಗಳಿವೆ. ಹಿಂದೂ ಧರ್ಮ ತಿಂದಷ್ಟು ಪೆಟ್ಟನ್ನು ಮತ್ಯಾವ ಧರ್ಮವೂ ತಿಂದಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂ ಗಳನ್ನು ಬೆದ ರಿಸುವ, ತುಳಿಯುವ, ಒಡೆಯುವ ಕಾರ್ಯ ನಡೆಯುತ್ತಲೇ ಬಂದಿದೆ. ಜಾತಿ, ಭಾಷೆ, ಪ್ರಾದೇಶಿಕತೆ ಹೆಸರಲ್ಲಿ ಹಿಂದೂ ಗಳನ್ನು ಒಡೆಯಲಾಗುತ್ತಿದೆ. ಮೂರ್ಖ ರಾಮ ಯ್ಯ ನಂಥವರು ಇಂದಿಗೂ ಅದನ್ನೇ ಮಾಡುತ್ತಿ ದ್ದಾರೆ. ಆದರೆ ಇದರ ನಿರ್ನಾಮ ಮಾಡಲು ಆಗಿಲ್ಲ. ಆಗುವುದೂ ಇಲ್ಲ. ಈಗ ಎಲ್ಲರೂ ಎದ್ದೇಳಬೇಕಿದೆ. ವಿರೋಧಿಗಳಿಗೆ ಸರಿಯಾಗಿ ತಿರುಗೇಟು ನೀಡುವ ಕಾಲ ಬಂದಿದೆ ಎಂದರು.
ಭಟ್ಕಳದ ಚಿನ್ನದ ಪಳ್ಳಿಯೂ ಅಯೋಧ್ಯೆಯ ಸಾಲಿಗೆ ಸೇರಲಿದೆ. ಹಿಂದೂಗಳು ಅದನ್ನೂ ಪಡೆದೇ ತೀರುತ್ತೇವೆ. ಶಿರಸಿಯ ಸಿಪಿ ಬಜಾರ್‌ನ ಮಸೀದಿ ಮೊದಲು ವಿಜಯ ವಿಠಲ ದೇವಸ್ಥಾನ ಹಾಗೂ ಶ್ರೀರಂಗ ಪಟ್ಟಣದ ದೊಡ್ಡ ಮಸೀದಿ ಕೂಡ ಮಾರುತಿ ದೇವಸ್ಥಾನವಾಗಿತ್ತು. ಇಂತಹ ಅಪಮಾನ ಗೊಂಡಿರುವ ಅನೇಕ ಸಂಕೇತಗಳನ್ನು ಕಿತ್ತುಹಾಕೋ ತನಕ ಈ ಹಿಂದೂ ಸಮಾಜ ಮತ್ತೆ ಕೈಕಟ್ಟಿ ಕೂರುವುದಿಲ್ಲ ಎಂದರು.
ಮಂದಿರಕ್ಕೆ ವಿರೋಧವಿಲ್ಲ: ಸಿಎಂ
ರಾಯಚೂರ: ಅಯೋಧ್ಯೆಗೆ ಹೋಗುವು ದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಿಂಥಿಣಿಯ ಕಾಗಿನೆಲೆ ಕನಕ ಗುರು ಪೀಠ ದಲ್ಲಿ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಅಯೋಧ್ಯೆಗೆ ನಮ್ಮ ವಿರೋಧವಿಲ್ಲ. ಆದರೆ ಬಿಜೆಪಿಯವರು ರಾಮಮಂ ದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿ ರುವುದಕ್ಕೆ ನಮ್ಮ ವಿರೋಧ ಇದೆ. ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರ ಮೂರ್ತಿ ಸ್ಥಾಪನೆ ಗಾಗಲಿ, ಮಂದಿರ ಉದ್ಘಾಟನೆಗಾಗಲಿ ನಮ್ಮ ವಿರೋಧ ಇಲ್ಲ ಎಂದರು.
ಶಾಸಕ ಯತೀಂದ್ರರನ್ನು ಕೊಡಗು- ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸು ವುದಾಗಿ ನಾನಾಗಲಿ, ಬೇರೆ ಯಾರಾ ದರೂ ಹೇಳಿದ್ದೇವಾ? ಸಂಸದ ಪ್ರತಾಪ ಸಿಂಹಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರಿಗೆ ಚಡಪಡಿಕೆ ಆರಂಭವಾಗಿದೆ. ಏನೇನೋ ಮಾತನಾ ಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಹೋಗದಿದ್ದರೆ ಉದ್ಘಾಟನೆ ನಿಲ್ಲದು
ಕುಮಟಾ: ರಾಮಮಂದಿರ ಉದ್ಘಾಟನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ಹಾಗಾಗಿ ಅದಕ್ಕೆ ತೆರಳುತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಬರಲಿ ಬಿಡಲಿ, ರಾಮಜನ್ಮ ಭೂಮಿ ಕಾರ್ಯವೇನೂ ನಿಲ್ಲುವುದಿಲ್ಲ ಎಂದು ಆಕ್ರೋಶಭರಿತರಾಗಿ ಮಾತನಾಡಿ ದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾ ಡಿದ ಅವರು, ಸಿದ್ದರಾಮಯ್ಯ ಅವರನ್ನು ಮೂರ್ಖರಾಮಯ್ಯ ಎಂದು ಜರೆದರು. ಜಾತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಮ್ಮ ವಿರೋಧಿಯಲ್ಲ. ಕಾಂಗ್ರೆಸ್‌ಗೆ ಬಿಜೆಪಿಯನ್ನು, ಹಿಂದೂಗಳನ್ನು ವಿರೋಧಿಸುವ ಶಕ್ತಿಯೇ ಇಲ್ಲ. ಆದರೆ ಹಿಂದೂಗಳನ್ನು ಒಡೆಯಲು ನಮ್ಮ ತಲೆಯಲ್ಲಿ ಹುಚ್ಚು ಹುಳ ಬಿಡುವವರು, ಸನಾತನ ಸಂಸ್ಕೃತಿ ವಿರುದ್ಧ ಮಾತನಾಡುವವರು ನಮ್ಮ ವಿರೋಧಿಗಳು ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.
ರಾಮನ ಹೆಸರಲ್ಲಿ ರಾಜಕೀಯ ಬಿಜೆಪಿಗೆ ಅಗತ್ಯವಿಲ್ಲ: ಬಿವೈವಿ
ಶಿವಮೊಗ್ಗ: ರಾಮನ ಹೆಸರಲ್ಲಿ ರಾಜಕೀಯ ಮಾಡುವಂತಹ ಅಗತ್ಯ ಬಿಜೆಪಿಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ ಬೇಕು ಎಂದು ಬಿಜೆಪಿ ಹೋರಾಟ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವ ದಲ್ಲಿ ರಾಮಮಂದಿರ ನಿರ್ಮಾಣ ಆಗಿರು ವುದು ಖುಷಿ ತಂದಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ರಾಮನ ಬಗ್ಗೆ ನಂಬಿಕೆ ಬಂದಿರುವುದು ಖುಷಿಯ ವಿಚಾರ. ಅವರು ರಾಮಮಂದಿರಕ್ಕೆ 22ಕ್ಕೆ ಆದರೂ ಹೋಗಲಿ, ಆಮೇಲೆ ಬೇಕಾದರೆ ಹೋಗಲಿ. ರಾಮನ ಬಗ್ಗೆ ನಂಬಿಕೆ ಇಡಲು ಕಾಂಗ್ರೆಸ್ ಮುಂದಾಗಿರುವುದು ಸಂತೋಷದ ವಿಚಾರ ಎಂದರು.
ಅನಂತ್ ಸಂಸ್ಕೃತಿಗೆ ಭಾಷೆ ಪ್ರತಿಬಿಂಬ: ಮುಖ್ಯಮಂತ್ರಿ
ಬಾಗಲಕೋಟೆ: ಸಂಸದ ಅನಂತಕುಮಾರ್ ಹೆಗಡೆ ಭಾಷೆಯೇ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಂಸ್ಕೃತಿ ಇಲ್ಲದವರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜಕೀಯ ಉದ್ದೇಶದಿಂದ ರಾಜ್ಯದ ಸಿಎಂ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಕೇಂದ್ರದ ಮಂತ್ರಿಯಾಗಿದ್ದಾಗ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಅಂಥ ಅನಂತ ಕುಮಾರ್ ಹೆಗಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.