Ayodhya’s Shri Ram Mandir: ಅಯೋಧ್ಯೆ ರಾಮಮಂದಿರ ಯೋಜನೆಗೆ ಸ್ವೋ ರ್ಡ್ ಆಫ್ ಆನರ್ ಕಿರೀಟ
Team Udayavani, Dec 16, 2024, 11:37 AM IST
ಲಕ್ನೋ: ಅಯೋಧ್ಯೆ ರಾಮಮಂದಿರ ನಿರ್ಮಾಣ ಯೋಜನೆಗೆ ಪ್ರತಿಷ್ಠಿತ ” ಸ್ವೋರ್ಡ್ ಆಫ್ ಆನರ್’ ಪ್ರಶಸ್ತಿ ಲಭಿಸಿದೆ. ಲಂಡನ್ ಮೂಲದ ಸಂಸ್ಥೆ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಅತ್ಯುತ್ತಮ ಸುರಕ್ಷ ನಿರ್ವಹಣೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಿದೆ.
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಿರ್ಮಾಣ ಪ್ರಕ್ರಿಯೆ, ಕಾರ್ಯ ಚಟುವಟಿಕೆ ಹಾಗೂ ಸ್ಥಳ ಪರಿಶೀಲನೆ ಸೇರಿ ವಿವಿಧ ಹಂತಗಳ ಪರಿಶೀಲನೆಯನ್ನು ಕೌನ್ಸಿಲ್ ನಡೆಸಿದ್ದು, 5 ಹಂತಗಳಲ್ಲಿ ಯೋಜನೆ ಉತ್ತೀರ್ಣವಾಗಿದೆ.
ಲಾರ್ಸೆನ್ ಆಂಡ್ ಟರ್ಬೊ ಕಂಪನಿ ದೇವಾಲಯ ನಿರ್ಮಾಣ ಹೊಣೆ ಹೊತ್ತಿತ್ತು. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಗೊಂಡ ಸುರಕ್ಷಾ ಕ್ರಮದ ಹಿನ್ನೆಲೆಯಲ್ಲಿ ಎಲ್ & ಟಿ ಸಂಸ್ಥೆಗೂ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಗೋಲ್ಡನ್ ಟ್ರೋಫಿ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೇಲ್ವಿಚಾರಣೆಯಲ್ಲಿ ನಡೆದ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ತಂಡ ಮತ್ತು ಎಲ್ & ಟಿ ನಿಕಟ ಸಹಕಾರದ ಮೂಲಕ ರಾಮ ಮಂದಿರ ನಿರ್ಮಾಣಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ ಯಾನ
Maharashtra: ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದ ಸ್ಥಾನಕ್ಕೆ ಶಿವಸೇನೆ ಶಾಸಕ ರಾಜೀನಾಮೆ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Shimoga; ನಮ್ಮ ನಾಯಕರು ಗಮನ ಹರಿಸಲಿ: ಕುಮಾರ್ ಬಂಗಾರಪ್ಪ ಹೇಳಿಕೆಗೆ ರಾಘವೇಂದ್ರ ತಿರುಗೇಟು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Mangaluru: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು… ಮಹಿಳೆ ಪಾರು
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.