“ಆಯುಷ್‌ ಕ್ವಾಥ್‌’ ಮಾರುಕಟ್ಟೆಗೆ ಬಿಡುಗಡೆ

Team Udayavani, May 24, 2020, 11:04 AM IST

“ಆಯುಷ್‌ ಕ್ವಾಥ್‌’ ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ಕೇಂದ್ರ ಸರಕಾರದ ಆಯುಷ್‌ ಇಲಾಖೆಯಿಂದ ಪ್ರಮಾಣೀಕೃತ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ಆಯುಷ್‌ “ಕ್ವಾಥ್‌’ ಅನ್ನು ಶನಿವಾರ ಮಂಗಳೂರಿನಲ್ಲಿ ಬಿಡುಗಡೆ ಗೊಳಿಸಲಾಗಿದೆ.
ಕೊಡಿಯಾಲ್‌ಬೈಲ್‌ ಸಮೀಪದ ಅಟಲ್‌ ಸೇವಾ ಕೇಂದ್ರದಲ್ಲಿ ಆಯುಷ್‌ ಕ್ವಾಥ್‌ ಬಿಡುಗಡೆಗೊಳಿಸಿ ಮಾತನಾಡಿದ ನಳಿನ್‌ ಅವರು, ಆಯುಷ್‌ ಕ್ವಾಥ್‌ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೋವಿಡ್‌ 19 ವಿರುದ್ಧ ದೇಹವನ್ನು ಅಣಿಗೊಳಿಸುತ್ತದೆ.

ಭಾರತ ಮಾತ್ರವಲ್ಲ ಜಗತ್ತಿನ ವಿವಿಧ ರಾಷ್ಟ್ರಗಳು ಆಯುರ್ವೇದ ಔಷಧಗಳ ಮಹತ್ವವನ್ನು ಅರಿತಿವೆ. ಎಸ್‌ಡಿಪಿ ಮತ್ತು ಆಯುರ್‌ ವಿವೇಕ್‌ ಸಂಸ್ಥೆ ಹೊರ ತಂದಿರುವ ಈ ಔಷಧದ ಬಳಕೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೋವಿಡ್ ನಿಂದ ದೂರ ಇರುವಂತಾಗಲಿ ಎಂದು ಹಾರೈಸಿದರು.

ಔಷಧ ತಯಾರಿಸಿದ ಎಸ್‌ಡಿಪಿ ರೆಮೆಡಿಸ್‌ ಮತ್ತು ರಿಸರ್ಚ್‌ ಸೆಂಟರ್‌ನ ಪ್ರವರ್ತಕ ಡಾ| ಹರಿಕೃಷ್ಣ ಪಾಣಾಜೆ ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತುಳಸಿ, ಶುಂಠಿ, ದಾಲ್ಚಿನಿ, ಕರಿಮೆಣಸು ಮಿಶ್ರಿತ ಆಯುಷ್‌ ಕ್ವಾಥ್‌ ಕಷಾಯದ ಸೇವನೆ ಪರಿಣಾಮಕಾರಿಯಾಗಿದೆ ಎಂದರು.

ಕ್ವಾರಂಟೈನ್‌ಗೊಂಡಿದ್ದ ಸುಮಾರು 6,000 ಮಂದಿಗೆ ಈ ಕಷಾಯವನ್ನು ಸೇವಿಸಲು ನೀಡಲಾಗಿದೆ. ಅದರಲ್ಲಿ ಅನೇಕ ಮಂದಿಗೆ ಕೋವಿಡ್‌ 19 ವೈರಾಣು ಇರುವುದು ಪ್ರಾರಂಭಿಕ ಹಂತದಲ್ಲಿ ಪತ್ತೆಯಾಗಿತ್ತು. ಆದರೆ ಈ ಕಷಾಯದ ನಿರ್ದಿಷ್ಟ ಸೇವನೆಯಿಂದ ಹಲವಾರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಎಸ್‌ಡಿಪಿ ಮತ್ತು ಆಯುರ್‌ ವಿವೇಕ್‌ ಈ ಔಷಧವನ್ನು ರಾಜ್ಯ, ಹೊರ ರಾಜ್ಯಗಳಿಗೂ ಪೂರೈಸುವ ಮೂಲಕ ಕೋವಿಡ್‌ 19 ಮಹಾಮಾರಿಯನ್ನು ಹೊಡೆದೋಡಿಸಲು ಈ ಕಷಾಯ ಪೂರಕವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.

ವಿವೇಕ್‌ ಟ್ರೇಡರ್ ಮಾಲಕ ಮಂಗಲ್ಪಾಡಿ ನರೇಶ್‌ ಶೆಣೈ ಉಪಸ್ಥಿತರಿದ್ದರು. ಆರ್‌. ಕಿರಣ್‌ ಶೆಣೈ ನಿರೂಪಿಸಿದರು.

ಟಾಪ್ ನ್ಯೂಸ್

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

Road Mishap; ಅರ್ಕುಳ: ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಸಾವು

Road Mishap; ಅರ್ಕುಳ: ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಸಾವು

Mangaluru: ಹರೇಕಳ ಹಾಜಬ್ಬಗೆ ಪ್ರಶಸ್ತಿ ಪ್ರದಾನ

Mangaluru: ಹರೇಕಳ ಹಾಜಬ್ಬಗೆ ಪ್ರಶಸ್ತಿ ಪ್ರದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.