ಮುಂದಿನ ಚಿತ್ರ ಘೋಷಿಸಿದ ಆಯುಷ್ಮಾನ್ ಖುರಾನಾ
ಇದೀಗ “ಆ್ಯಕ್ಷನ್ ಹಿರೋ” ಎಂಬ ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ ಆಯುಷ್ಮಾನ್ ಖುರಾನಾ ಹಾಗೂ ಆನಂದ್ ಎಲ್ ರಾಯ್
Team Udayavani, Oct 9, 2021, 5:19 PM IST
ಮುಂಬೈ: ಆಯುಷ್ಮಾನ್ ಖುರಾನಾ ಅವರು ತಮ್ಮ ಮುಂದಿನ ಚಿತ್ರವನ್ನು ಶನಿವಾರ ಘೋಷಿಸಿದ್ದಾರೆ. ಆನಂದ್ ಎಲ್ ರಾಯ್ ಅವರೊಂದಿಗೆ ಮತ್ತೊಂದು ಬಾರಿ ಕೆಲಸ ಮಾಡುವ ಅವಕಾಶ ಲಭಿಸಿದೆ. ಈ ಹಿಂದೆ ಶುಭಮಂಗಲ್ ಹೀರೊ ಸಾವಧಾನ್ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಇದೀಗ “ಆ್ಯಕ್ಷನ್ ಹಿರೋ” ಎಂಬ ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ.
ಟಿ-ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ಚಿತ್ರವನ್ನು ನಿರ್ಮಿಸಲಿದ್ದು, ಅನಿರುದ್ಧ್ ಐಯ್ಯರ್ ನಿರ್ದೇಶಿಸಲಿದ್ದಾರೆ.
ಆಯುಷ್ಮಾನ್ ಖುರಾನಾ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ”ಈ ಚಿತ್ರದಲ್ಲಿ ಫೈಟ್ ಮಾಡುತ್ತಿದ್ದೇನೆ ಆದರೆ ನಿಜವಾಗಿ ಪೈಟ್ ಮಾಡುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
Dikkat Bas Ek Hi Hai, Mujhe Ladne Ki Acting Aati Hai, Ladna Nahin… Super excited for a genre-breaking collab ONCE AGAIN with @aanandlrai and #BhushanKumar! This one’s special! #ActionHero
Directed By – #AnirudhIyer
Written By – @Neerajyadav911 & #AnirudhIyer pic.twitter.com/G5zYRr7jOt— Ayushmann Khurrana (@ayushmannk) October 9, 2021
ಆಯುಷ್ಮಾನ್ ಖುರಾನಾ ಮಾತನಾಡಿ, ನಾನು ಆನಂದ್ ಎಲ್ ರಾಯ್ ಅವರೊಂದಿಗೆ ಮೂರನೇ ಬಾರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಹೀರೊ ಚಿತ್ರ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತದೆ ಎಂದು ಅಂದುಕೊಂಡಿದ್ದೇವೆ. ಭೂಷಣ್ ಜೊತೆ ಮತ್ತೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಕಲರ್ ಎಲ್ಲೋ ಮತ್ತು ಟಿ-ಸೀರಿಸ್ ನನ್ನ ಎರಡನೇ ಮನೆ ಇದ್ದಂತೆ. ಆ್ಯಕ್ಷನ್ ಹಿರೋ ಚಿತ್ರದ ಸ್ಕ್ರಿಪ್ಟ್ ಬಹಳ ಮೆಚ್ಚುಗೆಯಾಗಿದೆ ಅದಕ್ಕಾಗಿಯೇ ಮತ್ತೊಮ್ಮೆ ನಾನು ಈ ತಂಡದ ಜೊತೆ ಕೆಲಸ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರದ ಬಗ್ಗೆ ನಿರ್ಮಾಪಕ ಆನಂದ್ ರಾಯ್ ಮಾತನಾಡಿ, ಈ ಚಿತ್ರವನ್ನು ಇಂದಿನ ತಲೆಮಾರಿಗಾಗಿ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಮೂರನೇ ಬಾರಿ ಆಯುಷ್ಮಾನ್ ಖುರಾನಾ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರೊಂದಿಗೆ ಕೆಲಸ ಮಾಡಲು ಬಹಳ ಖುಷಿಯಾಗುತ್ತಿದೆ. ಈ ಚಿತ್ರ ತೆರೆಯ ಮೇಲೆ ಬರುವುದನ್ನು ಎದುರು ನೋಡುತ್ತಿದ್ದೇನೆ.
ನಿರ್ದೇಶಕ ಅನಿರುದ್ಧ್ ಐಯ್ಯರ್ ಹಾಗೂ ಆನಂದ್ ಎಲ್ ರಾಯ್ ಅವರು ಈ ಹಿಂದೆ ಝೀರೋ ಮತ್ತು ತನು ವೆಡ್ಸ್ ಮನು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ಈ ಚಿತ್ರವನ್ನು ದೊಡ್ಡ ಬಜೆಟ್‍ನಲ್ಲಿ ನಿರ್ಮಾಣ ಮಾಡಲಿದ್ದು, ಬಹುಪಾಲು ಚಿತ್ರೀಕರಣವನ್ನು ಅಮೇರಿಕಾದಲ್ಲಿ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.