ಪ್ರಥಮಗಳ ಸೃಷ್ಠಿಕರ್ತ ಬಾಬುರಾವ್‌ ಪೇಂಟರ್‌


Team Udayavani, Jun 20, 2020, 7:18 PM IST

ಪ್ರಥಮಗಳ ಸೃಷ್ಠಿಕರ್ತ ಬಾಬುರಾವ್‌ ಪೇಂಟರ್‌

ಬಾಬುರಾವ್‌ ಪೇಂಟರ್‌ ಬಹುಶಃ ಇವರ ಹೆಸರು ಹೆಚ್ಚಿನ ಜನಕ್ಕೆ ತಿಳಿದಿರಲಿಕ್ಕಿಲ್ಲ. ಭಾರತೀಯ ಚಿತ್ರರಂಗದ ಪ್ರವರ್ತಕರಲ್ಲಿ ಒಬ್ಬರಾದ ಇವರು ಅಂತರ್ಜಾಲ, ಸಿನೆಮಾ ಕುರಿತಾದ ಯಾವುದೇ ತರಬೇತಿ, ಶಾಲೆಗಳಿಲ್ಲದ ಸಮಯದಲ್ಲೂ ಹೊಸತನ್ನು ಸಾಧಿಸಿದವರು. ಇವರು ತಿಳಿಸಿದ ಕೆಲ ಅಂಶಗಳನ್ನು ಹೊರತಾಗಿ ಸಿನೆಮಾವನ್ನು ಊಹಿಸಿಕೊಳ್ಳಲೂ ಅಸಾಧ್ಯ.

ಸಿನೆಮಾ ಚಿತ್ರೀಕರಣದಲ್ಲಿ ಇಂದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಕೃತಕ ಬೆಳಕನ್ನು ಮೊದಲಿಗೆ ಪರಿಚಯಿಸಿದ್ದು ಬಾಬುರಾವ್‌ ಅವರು. ಕೃತಕ ಬೆಳಕನ್ನು ಬಳಸಿ ರಾತ್ರಿ ದೃಶ್ಯವನ್ನು ಚಿತ್ರೀಕರಣ ಮಾಡಬೇಕು ಎಂದು ಬಾಬುರಾವ್‌ ಹೆಳಿದಾಗ ಅಂದು ಜನರೆಲ್ಲ ನಕ್ಕಿದ್ದರು. ಕೃತಕ ಬೆಳಕು ಇಲ್ಲದೇ ಇಂದು ಸಿನೆಮಾ ಚಿತ್ರೀಕರಣವೇ ಇಲ್ಲ ಎನ್ನುವಂತಾಗಿದೆ. ಬಾಬುರಾವ್‌ ಕೃಷ್ಣರಾವ್‌ ಮೇಸ್ತ್ರಿ ಅವರು 1890ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು. ತಮ್ಮ ಕೋಟೆಯಲ್ಲಿ ಗನ್‌ ಪೌಡರ್‌ನಿಂದ ಕೃತಕ ಬೆಳಕನ್ನು ಸೃಷ್ಠಿಸುತ್ತಿದ್ದ ವಿಧಾನವನ್ನೇ ಮುಂದೆ ಸಿನೆಮಾದಲ್ಲಿಯೂ ಅಳವಡಿಸಿಕೊಂಡರು.

1923 ಆಗಿನ್ನೂ ಚಿತ್ರೀಕರದಲ್ಲಿ ಅತ್ಯಾಧುನಿಕ ಉಪಕರಣಗಳು ಭಾರತಕ್ಕೆ ಕಾಲಿಟ್ಟಿರಲಿಲ್ಲ. ಅಂತಹ ಸಮಯದಲ್ಲೇ “ಸಿಂಹಗಡ್‌’ ಎಂಬ ಮರಾಠಿ ಸಿನೆಮಾದಲ್ಲಿ ಇವರು ಕೃತಕ ಬೆಳಕನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ್ದರು. ಈ ಸಾಧನೆಯನ್ನು ಗುರುತಿಸಿ ಲಂಡನ್‌ನ ವಂಬ್ಲಿ ಪ್ರದರ್ಶನದಲ್ಲಿ ಬಾಬುರಾವ್‌ ಅವರನ್ನು ಗೌರವಿಸಲಾಯಿತು.

ಬಾಬುರಾವ್‌ ಅವರು ಸಿನೆಮಾದ ಸಂಪ್ರದಾಯಿಕ ನಿಯಮಗಳನ್ನು ಅನೇಕಬಾರಿ ಮುರಿದು ತಮ್ಮದೇ ಆದ ಹೊಸ ನಿಯಮಗಳನ್ನು ಸೃಷ್ಠಸುತ್ತಿದ್ದ ಸೃಜನಾತ್ಮಕ ವ್ಯಕ್ತಿ. ದುರಾದೃಷ್ಟವೆಂದರೆ ಇವರು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಕೆಮರಾದ ಹಿಂದೆ ದುಡಿಯುವ ಕೈಗಳನ್ನು ಯಾರೂ ಗಮನಿಸದೇ ಇರುವುದೇ ಇದಕ್ಕೆ ಕಾರಣ. ಬಾಬುರಾವ್‌ ಅವರು ತಮ್ಮ ಜೀವನದುದ್ದಕ್ಕೂ ತಮ್ಮ ಚಿತ್ರಗಳ ಮೂಲಕ ಮನರಂಜನೆ, ಸಾಮಾಜಿಕ ಜಾಗೃತಿ ಮೂಡಿಸಿದ ವ್ಯಕ್ತಿ.

ಬಹುಮುಖ ಪ್ರತಿಭೆ
ಬಾಬುರಾವ್‌ ಅವರು ಸ್ವಂತ ಶಕ್ತಿ, ಪರಿಶ್ರಮದಿಂದ ಬೆಳೆದವರು. ಇವರು ಸಿನೆಮಾ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲೂ ಪರಿಣತರಾಗಿದ್ದರು. ತಮ್ಮ ಸಹೋದರ ಆನಂದ ಪೇಂಟರ್‌ ಅವರೋಂದಿಗೆ ಪೇಂಟರ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಇವರಿಬ್ಬರೂ ಸೇರಿಕೋಂಡು ನಾಟಕ ಮತ್ತು ಗುಜರಾತಿ ಪಾರ್ಸಿ ಸಿನೆಮಾಗಳಿಗೆ ಪರದೆಗಳನ್ನು ವಿನ್ಯಾಸಗೊಳಿಸುವಲ್ಲಿ ತಮ್ಮದೇ ಆದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದರು. ಈ ಕೆಲಸವೇ ಮುಂದೆ ಬಾಬುರಾವ್‌ ಅವರನ್ನು ಸಿನಿರಂಗದತ್ತ ಸೆಳೆಯಿತು. ರಾಜಾ ಹರೀಶ್ಚಂದ್ರ ಚಿತ್ರ ನೋಡಿದ ಅನಂತರ ಸಿನೆಮಾ ಮೇಲಿನ ಇವರ ಆಸಕ್ತಿ ಇಮ್ಮಡಿಯಾಯಿತು. ತಮ್ಮದೇ ಅದ ಸ್ವಂತ ಕೆಮರಾ ಹೊಂದಬೆಕೆಂಬುದು ಬಾಬುರಾವ್‌ ಅವರ ಆಸೆಯಾಗಿತ್ತು. ಅಂದು ಸ್ವಂತ ಕೆಮರಾ ಹೊಂದಿದ್ದ ವ್ಯಕ್ತಿ ಎಂದರೆ ದಾದಾ ಸಾಹೇಬ್‌ ಪಾಲ್ಕೆ. ಬಹಳ ಉತ್ಸುಕತೆಯಿಂದ ಬಾಬುರಾವ್‌ ಅವರು ಪಾಲ್ಕೆ ಅವರನ್ನು ಭೇಟಿಯಾಗುತ್ತಾರೆ. ಆದರೆ ಅಲ್ಲಿ ಅವರಿಗೆ ಯಾವುದೇ ಬೆಂಬಲ ಸಿಗುವುದಿಲ್ಲ.

ಹಿಂಜರಿಯದೇ ಬಾಬುರಾವ್‌ ಅವರು ತನ್ನ ಸಹೋದರ ಆನಂದರಾವ್‌ ಮತ್ತು ವಿ.ಜಿ. ಡ್ಯಾಮ್ಲೆ ಅವರೊಂದಿಗೆ ಸೇರಿಕೊಂಡು 1918ರಲ್ಲಿ ಸೆಕೆಂಡ್‌ ಹ್ಯಾಂಡ್‌ ಪ್ರೋಜೆಕ್ಟರ್‌ನೊಂದಿಗೆ ಸ್ವಂತ ಕೆಮರಾ ಖರಿದಿಸುತ್ತಾರೆ. 1919ರಲ್ಲಿ ದೇಶದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿ. ಶಾಂತಾರಾಮ್‌ ಮತ್ತು ಸ್ನೇಹಿತರೊಂದಿಗೆ ಸೇರಿಕೊಂಡು ತಮ್ಮದೇ ಆದ ಮಹಾರಾಷ್ಟ್ರ ಫಿಲ್ಮ್ ಕಂಪನಿಯನ್ನು ಸ್ಥಾಪಿಸುತ್ತಾರೆ. ಆದರೆ ಕೆಲ ಸದಸ್ಯರ ನಿರ್ಗಮನದಿಂದ ಕಂಪೆನಿಯನ್ನು ಮುಚ್ಚಬೇಕಾಯಿತು. ಇದಾದ ಒಂದು ವರ್ಷದ ಅನಂತರ ತಮ್ಮ ಮೊದಲ ಚಿತ್ರ ಸೈರಂಧ್ರಿಯನ್ನು ನಿರ್ದೇಶನ ಮಾಡುತ್ತಾರೆ. ಮಹಾಭಾರತದ ಕುರಿತಾದ ಈ ಕಥೆ ಕಳನಾಯಕ ಕೀಚಕ ಮತ್ತು ಸೈರಂಧ್ರಿಯ ಸುತ್ತ ಹೆಣೆದಿರುವಂತದ್ದು. ಸೈರಂಧ್ರಿಯು 13 ಸಂವತ್ಸರಗಳ ಅಜ್ಞಾತ ವಾಸದಲ್ಲಿ ದ್ರೌಪದಿ ತಲೆಮರೆಸಿಕೊಳ್ಳಲು ಹಾಕಿದ್ದ ವೇಶವಾಗಿದೆ.

ಈ ಸಿನೆಮಾ ಎಷ್ಟು ನೈಜವಾಗಿತ್ತೆಂದರೆ ಭೀಮ ಕೀಚಕನನ್ನು ತೆರೆಯಮೇಲೆ ನಿಜವಾಗಿಯೇ ಕೊಲ್ಲುತ್ತಿದ್ದಾನೆಂದು ಪ್ರೇಕ್ಷಕರು ಭಯದಿಂದ ಕಿರುಚಿದ್ದರಂತೆ. ಈ ವಿಷಯ ಬ್ರಿಟೀಷ್‌ ಸರಕಾರದ ಗಮನಕ್ಕೆ ಬಂದು ಸಿನೆಮಾಕ್ಕೆ ಸೆನ್ಸಾರ್‌ ಮಾಡಲು ಆದೇಶವನ್ನು ಮಾಡಲಾಯಿತು. ಈ ಮೂಲಕ ಸೆನ್ಸಾರ್‌ಗೆ ಒಳಗಾದ ಭಾರತದ ಮೊದಲ ಸಿನೆಮಾ ಇದಾಗಿದೆ. ಈ ಚಿತ್ರಕ್ಕೆ ವಿಮರ್ಶಕರಿಂದ ದೊರೆತ ಮೆಚ್ಚುಗೆ ಮತ್ತು ಪ್ರೇಕ್ಷಕರ ಮೇಲೆ ಬೀರಿದ ಪರಿಣಾಮ ಪೇಂಟರ್‌ ಅವರನ್ನು ಇನ್ನೂ ಹೆಚ್ಚು ಚಿತ್ರ ಮಾಡಲು ಪ್ರೇರೇಪಿಸಿತು. ಬಾಬುರಾವ್‌ ಅವರು ಒಟ್ಟು 18 ಮೂಕಿ ಚಿತ್ರಗಳು ಮತ್ತು 9 ಟಾಕೀ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಇತರ ನಿರ್ದೇಶಕರು ಚಿತ್ರಗಳನ್ನು ನಂಬಿಕೆ ಮತ್ತು ಪುರಾಣಾಧಾರಿತ ಕಥೆಗಳತ್ತ ಕೇಂದ್ರೀಕರಿಸಿದರೆ, ಬಬುರಾವ್‌ ಅವರು ವಾಸ್ತವತೆ, ಸಾಮಾಜಿಕ ಸಮಸ್ಯೆಗಳತ್ತ ಕೇಂದ್ರಿಕರಿಸಿ ವಿಭಿನ್ನವಾಗಿ ಗುರುತಿಸಿಕೊಂಡವರು. 1925 ರಲ್ಲಿ ತಯಾರಾದ “ಸಾವ್ಕಾರಿ ಪಾಶ್‌’ ಬಡ ರೈತರ ಕುರಿತಾದ‌ ಸಿನೆಮಾ. ಆದರೆ ಅಂದು ಫ್ಯಾಂಟಸಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಈ ಚಿತ್ರ ಯಶಸು ಕಾಣಲಿಲ್ಲ. ಏತನ್ಮಧ್ಯೆ ಇವರ “ಸಿಂಹಗಡ್‌’ ಚಿತ್ರಕ್ಕೆ ವ್ಯಾಪಕವಾದ ವೀಕ್ಷಣೆ ಮತ್ತು ಬೆಂಬಲ ವ್ಯಕ್ತವಾಯಿತು. ಇದರಿಂದ ಕಂದಾಯ ಇಲಾಖೆ ಮನರಂಜನಾ ತೆರಗೆ ಪರಿಚಯಿಸಲು ಮುಂದಾಯಿತು. ಇದು ಕೂಡ ಬಾಬುರಾವ್‌ ಅವರಿಂದ ಬಂದ ಮತ್ತೂಂದು ಹೊಸತನ.

ಬಾಬುರಾವ್‌ ಕೇವಲ ನಿದೇಶಕರಾಗಿರದೇ ಸೆಟ್‌ನ ವಿನ್ಯಾಸ, ಚಿತ್ರಕಥೆ ಬರೆಯುವದು, ವೇಷಭೂಷಣ ವಿನ್ಯಾಸ, ಪೇಂಟಿಂಗ್‌ ಮುಂತಾದ ವಿಷಯಗಳಲ್ಲೂ ಪರಿಣತರಾಗಿದ್ದರು. ಅಲ್ಲದೇ ಕೃತಕ ಬೆಳಕು, ಪ್ರತಿಫ‌ಲಕಗಳ ಬಳಕೆ, ಬಹು ಆಯಾಮಗಳ ಮೂಲಕ ಚಿತ್ರಕರಿಸುವದು ಇನ್ನಿತರ ಹೊಸತನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ ಅದ್ವಿತೀಯ ವ್ಯಕ್ತಿ ಈತ. ಭಾರತದಲ್ಲಿ ಸಿನೆಮಾದ ಪ್ರಚಾರವನ್ನು ಮೋದಲು ಅರಿತುಕೋಂಡ ವ್ಯಕ್ತಿ ಈತ. ಅಲ್ಲದೇ ಚಿತ್ರದ ಪ್ರಚಾರಕ್ಕೆ ಕರಪತ್ರ ಮತ್ತು ಕಿರುಹೊತ್ತಿಗೆಗಳನ್ನು ಬಳಸಿದ ಮೋದಲಿಗರು.

ಅಂತರ್ಜಾಲ, ಮಾರ್ಗದರ್ಶನ, ಯಾವುದೇ ಔಪಚಾರಿಕ ಶಿಕ್ಷಣವಿಲ್ಲದ ಸಮಯದಲ್ಲೂ ಬಬುರಾವ್‌ ಅವರ ಸಾಧನೆ ಅಪಾರ. ಚಲಚಿತ್ರಗಳಿಗೆ ವಾಣಿಜ್ಯ ರೂಪ ನೀಡುವಲ್ಲಿ ಇವರ ಪಾತ್ರ ಬಹಳಷ್ಟಿದೆ. 1954ರಲ್ಲಿ ನಿಧನಹೊಂದಿದ ಬಾಬುರಾವ್‌ ಅವರು ಹಲವು ಹೊಸತನಗಳನ್ನು ಸೃಷ್ಠಿಸಿದ ದೂರದೃಷ್ಠಿಯ ನಿದೇರ್ಶಕ.

-ಶಿವಾನಂದ ಎಚ್‌.

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.