ಫಿಲಿಫೈನ್ಸ್‌ನಲ್ಲಿ 2 ಲಕ್ಷ ಶಿಶುಗಳ ಜನನ !
Team Udayavani, Jun 30, 2020, 2:36 PM IST
ಮಣಿಪಾಲ : ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿದ್ದವು. ಈ ವೇಳೆ ಸಾಮಾನ್ಯ ಆರೋಗ್ಯ ಸೇವೆಗಳಿಗೆ ಅಡ್ಡಿಯುಂಟಾಗಿದ್ದು, ನಿಗದಿತ ಸಮಯಕ್ಕೆ ಔಷಧ ಸಿಗದೇ ಮೃತಪಟ್ಟವರು ಇದ್ದಾರೆ. ಸೋಂಕು ತಡೆಗಟ್ಟುವಿಕೆಗೆ ವಿಧಿಸಲಾಗಿದ್ದ ನಿಬಂಧನೆಗಳಿಂದ ಅನಪೇಕ್ಷಿತ ಗರ್ಭಧಾರಣೆ ಸಮಸ್ಯೆಯೂ ಸೃಷ್ಟಿ ಆಗಿದ್ದು, ಸುಮಾರು 70 ಲಕ್ಷ ಮಕ್ಕಳ ಜನನವಾಗಲಿದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಎಚ್ಚರಿಸಿವೆ.
ವಿಶ್ವದಾದ್ಯಂತ 114 ದೇಶಗಳಲ್ಲಿ ಸುಮಾರು 450 ಮಿಲಿಯನ್ ಮಹಿಳೆಯರು ಗರ್ಭ ನಿರೋಧಕಗಳನ್ನು ಬಳಸುತ್ತಾರೆ. ಆದರೆ ಲಾಕ್‌ಡೌನ್ ವೇಳೆ ನಿಯಮಿತ ಪ್ರಮಾಣದಲ್ಲಿ ಗರ್ಭ ನಿರೋಧಕಗಳ ಪೂರೈಕೆ ಆಗದ ಕಾರಣ ಇಷ್ಟವಿಲ್ಲದಿದ್ದರೂ ಲಕ್ಷಾಂತರ ಮಹಿಳೆಯರಿಗೆ ಗರ್ಭ ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಫಿಲಿಪೈನ್ಸ್ ಜನಸಂಖ್ಯಾ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್ಪಿಎ) ಅಧ್ಯಯನ ನಡೆಸಿದ್ದು, ವಿಶ್ವಕ್ಕೆ ಎದುರಾಗಿರುವ ಈ ಸಾಂಕ್ರಾಮಿಕ ರೋಗ ಬಿಕ್ಕಟ್ಟಿನಿಂದ ಫಿಲಿಪೈನ್ಸ್ ದೇಶ ಒಂದರಲ್ಲಿಯೇ ಅನಪೇಕ್ಷಿತ ಗರ್ಭಧಾರಣೆಯಿಂದಾಗಿ ಸುಮಾರು 2,14,000 ಶಿಶುಗಳು ಜನಿಸಲಿವೆ ಎಂದು ವರದಿ ಹೇಳಿದೆ.
ಸಾಲದಕ್ಕೆ, ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರ ಸಂಖ್ಯೆ ಗಗನಕ್ಕೇರಬಹುದು ಎಂಬ ಆತಂಕಕಾರಿ ವಿಷಯವನ್ನು ಅಧ್ಯಯನ ಉಲ್ಲೇಖ ಮಾಡಿದೆ.
ಕೊರೊನಾದಿಂದ ಆರ್ಥಿಕ ಸ್ಥಿತಿ ಕುಸಿಯುತ್ತ ಹೋದರೆ ಮುಂದಿನ ಹತ್ತು ವರ್ಷಗಳಲ್ಲಿ 13 ಲಕ್ಷ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಸಾವಿರಾರು ಗರ್ಭಿಣಿಯರು ಮೃತಪಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಅಮೆರಿಕದ ಸಂಶೋಧಕರ ತಂಡವೊಂದು ಇದೇ ವಿಷಯವಾಗಿ ಅಧ್ಯಯನ ನಡೆಸಿ, ಮುಂದಿನ ಆರು ತಿಂಗಳ ಕಾಲ ಲಾಕ್ ಡೌನ್ ಮುಂದುವರಿದರೆ, ವಿವಿಧ ದೇಶಗಳಲ್ಲಿ ಇರುವ ಸುಮಾರು 47 ಮಿಲಿಯನ್ ಜನರಿಗೆ ಆಧುನಿಕ ಗರ್ಭ ನಿರೋಧಕಗಳು ಲಭಿಸುವುದಿಲ್ಲ. ಪರಿಣಾಮ, ಅಂದಾಜು ಏಳು ಲಕ್ಷ ಮಹಿಳೆಯರು ಅನಪೇಕ್ಷಿತ ಗರ್ಭ ಧರಿಸುತ್ತಾರೆ ಎಂದು ತಿಳಿಸಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.