ರೊಳ್ಳಿ ಜನರ ಕಿಚ್ಚು; ಬಾಡಗಂಡಿಗಿಲ್ಲ ಅಧಿಕಾರ ಭಾಗ್ಯ; ಐದು ವರ್ಷದಿಂದ ಗೆದ್ದವರಿಗಿಲ್ಲ ಅಧಿಕಾರ
Team Udayavani, Dec 29, 2020, 11:01 AM IST
ಬಾಗಲಕೋಟೆ: ಗ್ರಾಮ ಪಂಚಾಯತ್ ಕೇಂದ್ರ ಸ್ಥಾನಕ್ಕಾಗಿ ನಡೆದ ಹೋರಾಟ ಐದು ವರ್ಷಗಳಿಂದಲೂ ಮುಂದುವರಿದಿದೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲರ ಹುಟ್ಟೂರು ಬಾಡಗಂಡಿಯಲ್ಲಿ ಪಂಚಾಯತ್ ಸದಸ್ಯರಾಗಿ
ಗೆದ್ದವರಿಗೆ ಅಧಿಕಾರ ಭಾಗ್ಯ ಸಿಗುತ್ತಿಲ್ಲ.
ಹೌದು, ಬೀಳಗಿ ತಾಲೂಕಿನ ಬಾಡಗಂಡಿ, ಬಾದಾಮಿ ತಾಲೂಕಿನ ಕೆಂದೂರ ಗ್ರಾಪಂಗಳು 2015ರ ಗ್ರಾಪಂ ಪುನರ್ ವಿಂಗಡಣೆಯಲ್ಲಿ ಹೊಸ ಗ್ರಾಪಂ ಕೇಂದ್ರ ಸ್ಥಾನಮಾನ ಹೊಂದಿದ ಸಂಭ್ರಮದಲ್ಲಿದ್ದರೂ ಅವುಗಳಿಗೆ ಅಧಿಕಾರ ಭಾಗ್ಯ ದೊರೆಯುತ್ತಿಲ್ಲ. ಕಾರಣ, ಈ ಗ್ರಾಪಂನಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಬೇಕಾದ ಕೋರಂ ಅಭಾವ.
ನಾಯಕರ ಊರಿದು: ಬೀಳಗಿ ತಾಲೂಕಿನ ಬಾಡಗಂಡಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲರ ಹುಟ್ಟೂರು. ರಾಜ್ಯದಲ್ಲೇ ತಮ್ಮೂರು ಮಾದರಿ ಗ್ರಾಮ ಮಾಡಲು ಪಾಟೀಲರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರು ಐಟಿ-ಬಿಟಿ ಸಚಿವರಾಗಿದ್ದಾಗ ಇಡೀ ಗ್ರಾಮವನ್ನು ಸೌರ ಬೆಳಕು ಯೋಜನೆಯಡಿ ಆಯ್ಕೆ ಮಾಡಿದ್ದರು. ಜತೆಗೆ ಡಿಜಿಟಲ್ ಗ್ರಾಮಕ್ಕಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಪುನರ್ ವಿಂಗಡಣೆಯ ವೇಳೆ ತಮ್ಮೂರಿಗೆ ಗ್ರಾಪಂ ಕೇಂದ್ರ ಸ್ಥಾನಮಾನ ಕಲ್ಪಿಸುವಲ್ಲಿಯೂ ಅವರ ಶ್ರಮ ಮರೆಯುವಂತಿಲ್ಲ.
ಆದರೆ, ಬಾಡಗಂಡಿ ಗ್ರಾಪಂ ವ್ಯಾಪ್ತಿಗೆ ಬರುವ ರೊಳ್ಳಿ ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಈ ಬಾರಿಯೂ ಗ್ರಾಪಂ ಚುನಾವಣೆ ಬಹಿಷ್ಕರಿಸಲಾಗಿದೆ. ಹೀಗಾಗಿ ಬಾಡಗಂಡಿಗೆ ಆಯ್ಕೆಯಾದ ಸದಸ್ಯರು ಗೆದ್ದ ಖುಷಿಯಲ್ಲಿದ್ದರೂ ಅವರಿಗೆ ಅಧಿಕಾರ ವಹಿಸಿಕೊಳ್ಳುವ ಅವಕಾಶ ದೊರೆಯಲ್ಲ.
ಇದನ್ನೂ ಓದಿ:ಬೆಂಗಳೂರಿಗೆ ಬಂದ ಮೂರವರಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಸ್ ಪತ್ತೆ!
ಕಳೆದ ಐದು ವರ್ಷಗಳ ಅವಧಿಯಲ್ಲೂ ಬಾಡಗಂಡಿ ಗ್ರಾಪಂನ ಬಾಡಗಂಡಿಯ 11 ಹಾಗೂ ರೊಳ್ಳಿ ಪುನರ್ ವಸತಿ ಕೇಂದ್ರದ 7 ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದರೂ ಬಾಡಗಂಡಿ 11 ಸ್ಥಾನಕ್ಕೆ ಮಾತ್ರ ಆಯ್ಕೆ ನಡೆದಿತ್ತು. ರೊಳ್ಳಿಯ ಜನರು, ತಮ್ಮೂರಿಗೆ ಗ್ರಾಪಂ ಕೇಂದ್ರ ಸ್ಥಾನ ನೀಡುವಂತೆ ಆಗಲೂ ಚುನಾವಣೆ ಬಹಿಷ್ಕರಿಸಿದ್ದರು. ಈ ಬಾರಿಯೂ ಬಹಿಷ್ಕಾರ ಮುಂದುವರಿದಿದ್ದು, ರೊಳ್ಳಿಯ 7 ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.
ಗೆದ್ದವರಿಗಿಲ್ಲ ಅಧಿಕಾರ ಭಾಗ್ಯ: ಪಂಚಾಯತ್ ರಾಜ್ ಕಾಯ್ದೆ ಪ್ರಕಾರ, ಒಂದು ಗ್ರಾ.ಪಂ.ನ ಒಟ್ಟು ಸ್ಥಾನಗಳಲ್ಲಿ ಒಂದರ 3ನೇ ಭಾಗದಷ್ಟು ಸದಸ್ಯರಿರಬೇಕು. ಆಗ ಕೋರಂ ಪೂರ್ಣಗೊಂಡು ಆಡಳಿತ ಮಂಡಳಿ ರಚನೆ ಮಾಡಬಹುದು. ಬಾಡಗಂಡಿ, ಗ್ರಾಪಂನ
ಒಟ್ಟು 18 ಸ್ಥಾನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಬೇಕಾದರೆ ಕನಿಷ್ಠ 13 ಸದಸ್ಯರ ಬಲ ಇರಬೇಕು.
– ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.