ನಿಲ್ಲದ ವರುಣಾರ್ಭಟ; ಸುಸ್ತಾದ ಜನ! ಮಳೆಗೆ ಕುಸಿದು ಬಿತ್ತು 723 ಮನೆಗಳು
Team Udayavani, Oct 15, 2020, 2:44 PM IST
ಬಾಗಲಕೋಟೆ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಚಿತ್ತಾ ಮಳೆ ಎಡಬಿಡದೇ ಸುರಿಯುತ್ತಿದ್ದು ರೈತರು, ಸಾಕಪ್ಪಾ ಸಾಕು, ನಿಲ್ಲೋ ಮಳೆರಾಯ ಎಂದು ಕೇಳುವಂತಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 10.6 ಎಂ.ಎಂ ಮಳೆ ಸುರಿದೆ. ಆದರೆ, ನಿರಂತರ ಜಿಟಿಜಿಟಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹೊಲದಿಂದ ದಡಕ್ಕೆ ತರಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗೆ ನುಗ್ಗಿದ ನೀರು: ನಿರಂತರ ಮಳೆಯಿಂದ ಜಿಲ್ಲೆಯ ಹುನಗುಂದ ಪಟ್ಟಣದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಜಮಖಂಡಿ ತಾಲೂಕಿನ ಕುಲಹಳ್ಳಿಯಲ್ಲಿ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ 723 ಮನೆಗಳು ಕಳೆದೊಂದು ವಾರದಿಂದ ಬಿದ್ದಿವೆ.
ಜಿಟಿ ಜಿಟಿ ಮಳೆಯಿಂದ ನೆಲಕ್ಕುರುಳಿದ ಮನೆಗಳು
ಸಾವಳಗಿ: ಸಾವಳಗಿ ಹೋಬಳಿಯಾದ್ಯಂತ ಮಂಗಳವಾರ ಸಾಯಂಕಾಲದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಸಾಕಷ್ಟು
ಮನೆಗಳು ನೆಲಕ್ಕುರುಳಿವೆ. ಸಾವಳಗಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಕೃಷಿ ಚಟುವಟಿಕೆಗೆ ತೊಂದರೆಯನ್ನುಂಟು ಮಾಡಿದೆ. ಕೂಲಿ ಕಾರ್ಮಿಕರು ನಿರಂತರ ಮಳೆಯಿಂದ ಹೊರ ಬರದಂತಾಗಿದೆ. ಬಸ್ ನಿಲ್ದಾಣದ ಆವರಣ ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ವ್ಯಾಪಾರ-ವಹಿವಾಟುಗಳು ಕೂಡ ಅಷ್ಟಕಷ್ಟೇ ಆಗಿವೆ.
ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿವೇಕ್ ಒಬೆರಾಯ್ ಮನೆಗೆ ಸಿಸಿಬಿ ದಾಳಿ
ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಸೇರಿದಂತೆ ಸಾವಳಗಿ ಹೋಬಳಿಯಾದ್ಯಂತ 24 ಮನೆಗಳು ಕುಸಿದಿವೆ. ಈ ಪೈಕಿ 2 ಮನೆಗಳು ಪೂರ್ಣ ಕುಸಿದಿದ್ದರೆ 22 ಭಾಗಶಃ ಕುಸಿದಿವೆ. ಸಾವಳಗಿ ಗ್ರಾಮದ ಸಿದ್ದು ರಾಮಪ್ಪ ಗವಳಿ ಎಂಬವರ ಆಕಳು ಮೇಲೆ ಚಪ್ಪರ ಬಿದ್ದು ಆಕಳು ಮೃತಪಟ್ಟಿದೆ. ಕಾಜಿಬೀಳಗಿ ಗ್ರಾಮದ ಗಂಗವ್ವ ಹೊನವಾಡ ಎಂಬವರ ಮೇಲೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದು ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ತಹಶೀಲ್ದಾರ್ ವೈ.ಎಚ್. ದ್ರಾಕ್ಷಿ
ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.