ಬೈಕಂಪಾಡಿ: ಚುರುಕುಗೊಂಡ ತರಕಾರಿ, ಹಣ್ಣುಹಂಪಲು ಸಗಟು ವ್ಯಾಪಾರ
Team Udayavani, Apr 15, 2020, 1:03 PM IST
ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್‌ನ ತರಕಾರಿ ಹಾಗೂ ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಕಳೆದ ಒಂದು ವಾರದಿಂದ ಇಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಲಾಕ್‌ಡೌನ್ ಜಾರಿಗೆ ಬಂದ ಬಳಿಕ ಅಲ್ಲಿ ಗ್ರಾಹಕರ ದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಸಗಟು ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಲಾಗಿತ್ತು. ಜತೆಗೆ ಮಾರ್ಕೆಟ್ ಅನ್ನು ಮುಚ್ಚಿ ರಿಟೇಲ್ ವ್ಯಾಪಾರವನ್ನೂ ರದ್ದು ಪಡಿಸಲಾಗಿತ್ತು.
ಮೊದಲು ಬೈಕಂಪಾಡಿಗೆ ತೆರಳಲು ನಿರಾಕರಿಸಿದ್ದು, ರಸ್ತೆ ಬದಿ ಎಲ್ಲೆಂದರಲ್ಲಿ ಸರಕು ಇಳಿಸಿ ರಿಟೇಲ್ ವ್ಯಾಪಾರಿಗಳಿಗೆ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎ.7ರಂದು ಜಿಲ್ಲಾಡಳಿತವು ಸಭೆ ನಡೆಸಿ ವ್ಯಾಪಾರ ವಹಿವಾಟು ಸ್ಥಳಾಂತರದ ಆವಶ್ಯಕತೆಯನ್ನು ಮನದಟ್ಟು ಮಾಡಿದ್ದಲ್ಲದೆ, ರಸ್ತೆ ಬದಿ ಸರಕು ಇಳಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಬಳಿಕ ಸಗಟು ವ್ಯಾಪಾರ ಬೈಕಂಪಾಡಿಗೆ ಸ್ಥಳಾಂತರವಾಗಿದೆ. ಆದರೆ, ರಿಟೇಲ್ ವ್ಯಾಪಾರಿಗಳಿಗೆ ಇನ್ನೂ ಪರ್ಯಾಯ ಜಾಗ ಸಿಕ್ಕಿಲ್ಲ.
ಈ ನಡುವೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ಇರುವ ಎರಡೂ ಕಟ್ಟಡ ಗಳನ್ನು ಕೆಡವಿ ಅಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ, ಸುಸಜ್ಜಿತ ಮಾರ್ಕೆಟ್ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ರಿಟೇಲ್ ವ್ಯಾಪಾರಿಗಳಿಗೆ ತಾತ್ಕಾಲಿಕ ಮಾರ್ಕೆಟ್ ಕಟ್ಟಡವನ್ನು ನಿರ್ಮಿಸಿ ಕೊಡುವ ಉದ್ದೇಶವಿದ್ದು, ಮೂರು ತಿಂಗಳಲ್ಲಿ ಇದರ ಕಾಮಗಾರಿ ಪೂರ್ತಿ ಯಾಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.