ನೀರಿನ ಮಟ್ಟ ವೀಕ್ಷಿಸಿದ ಶಾಸಕ ಕೆ. ರಘುಪತಿ ಭಟ್
Team Udayavani, Apr 22, 2020, 4:57 PM IST
ಉಡುಪಿ: ನಗರ ಸಭೆ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾ.ಪಂ. ವ್ಯಾಪ್ತಿಗಳ ಪ್ರದೇಶಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರು ಒದಗಿಸುತ್ತಿರುವ ನೀರು ಸಂಗ್ರಹ ಡ್ಯಾಮ್‌ಗಳಿರುವ ಬೊಮ್ಮರಬೆಟ್ಟು ಪ್ರದೇಶಕ್ಕೆ ಶಾಸಕ ರಘುಪತಿ ಭಟ್ ಮಂಗಳವಾರ ತೆರಳಿ ನೀರಿನ ಮಟ್ಟ ಪರಿಶೀಲಿಸಿದರು.
ಹಿರಿಯಡ್ಕದ ಪಂಚಾಯತ್ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಸಾಣೆಕಲ್ಲು ವಿನಿಂದ 12 ದಿನಗಳವರೆಗೆ ನಿರಂತರ ಮೂರು ಪಂಪುಗಳ ಮೂಲಕ ಕುಯಾÉಡಿ ಗುಂಡಿಗೆ ನೀರನ್ನು ಹಾಯಿಸಲಾಗುತ್ತಿದೆ. ಅಲ್ಲಿಂದ ಸಂಗ್ರಹವಾದ ನೀರನ್ನು ಶಿರೂರು ಡ್ಯಾಮಿಗೆ ಹರಿಸಿ ನೀರು ಶೇಖರಣೆಗೊಳಿಸಲಾಗುತ್ತಿದೆ. ಇದನ್ನು ಶಾಸಕರು ವೀಕ್ಷಿಸಿದರು.
ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಅವರು ನಗರಸಭೆ ಅಧಿಕಾರಿಗಳ ಜತೆ ಅವಲೋಕಿಸಿದರು. ನದಿಯಲ್ಲಿ ನೀರಿನ ಮೂಲಗಳಿರುವ ಕಡೆಗಳಲ್ಲಿ ನೀರು ಸಂಗ್ರಹಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ನಗರಸಭೆ ಕಾರ್ಯಪಾಲ ಅಭಿಯಂತರ ಹಾಗೂ ನಗರಸಭೆಯ ಸಿಬಂದಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.