ಬೆಂಗಳೂರು ರಾಜಕಾರಣದ ಹೃದಯ: 8 ಕ್ಷೇತ್ರಗಳು
Team Udayavani, Feb 7, 2023, 6:30 AM IST
ಬೆಂಗಳೂರು ಹೃದಯ ಭಾಗದಲ್ಲಿರುವ ಈ ಬೆಂಗಳೂರು ದಕ್ಷಿಣ ಕ್ಷೇತ್ರ ಅತ್ಯಂತ ಸುಶಿಕ್ಷಿತರನ್ನು ಹೊಂದಿರುವಂಥದ್ದು. ಇಲ್ಲಿನ ಬಹುತೇಕ ಮತದಾರರು ವಿದ್ಯಾವಂತರೇ. ಹಾಗೆಯೇ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಪ್ರಾತಿನಿಧ್ಯ ತೀರಾ ಕಡಿಮೆ ಇದೆ.
ಬೆಂಗಳೂರು ದಕ್ಷಿಣ
ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಾಣಬಹುದಾದ ಈ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ವಿಶೇಷವೆಂದರೆ ಇಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಗೆದ್ದವರು ಸರಕಾರಗಳಲ್ಲಿ ಸಚಿವರಾಗಿಯೇ ಆಗುತ್ತಾರೆ. ಅಂದರೆ ಅದು ಕಾಂಗ್ರೆಸ್ ಸರಕಾರವಿರಬಹುದು ಅಥವಾ ಬಿಜೆಪಿ ಸರಕಾರವಿರಬಹುದು. ಸದ್ಯ ಇಲ್ಲಿನ ಗೋವಿಂದರಾಜನಗರದ ವಿ.ಸೋಮಣ್ಣ ಮತ್ತು ಪದ್ಮನಾಭನಗರದ ಆರ್.
ಅಶೋಕ್ ಇಬ್ಬರೂ ಹಾಲಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಅತ್ತ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ ಸಚಿವರಾಗಿದ್ದರು. ಇಲ್ಲಿ ಗೋವಿಂದರಾಜನಗರ, ವಿಜಯನಗರ ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಗಳಾಗಿವೆ. ಬಸವನಗುಡಿ ಮತ್ತು ಚಿಕ್ಕಪೇಟೆ ಆರಂಭದ ಕಾಲದಿಂದಲೂ ಇರುವ ಕ್ಷೇತ್ರಗಳು. ಉಳಿದವು ಪುನರ್‌ವಿಂಗಡಣೆಯಾದ ಬಳಿಕ ಹುಟ್ಟಿಕೊಂಡವು.
ಈ ಎಂಟು ಕ್ಷೇತ್ರಗಳನ್ನು ಒಟ್ಟುಗೂಡಿಸಿ ನೋಡಿದರೆ ಇಲ್ಲಿ “ಭಾರತ ದರ್ಶನ’ ಆಗುತ್ತದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮರಾಠಿ, ಗುಜರಾತಿ ಮತ್ತು ಉರ್ದು ಭಾಷಿಕರು ಇಲ್ಲಿ ಸಿಗುತ್ತಾರೆ. ಸುಸಜ್ಜಿತ ಮತ್ತು ಯೋಜನಾಬದ್ಧ ಬಡಾವಣೆಗಳನ್ನು ಹೊಂದಿರುವ ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್ ಪ್ರದೇಶಗಳು ಇಲ್ಲಿ ಕಾಣಬಹುದು.
ಬಿಟಿಎಂ ಲೇಔಟ್
2008ರ ಕ್ಷೇತ್ರ ಪುನರ್‌ವಿಂಗಡಣೆ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದ “ಬೈರಸಂದ್ರ, ತಾವರಕೆರೆ, ಮಡಿವಾಳ’ ಲೇಔಟ್‌ಗಳ ಪೂರ್ಣರೂಪ ಬಿಟಿಎಂ ಲೇಔಟ್ ಕ್ಷೇತ್ರ. ಈ ಕ್ಷೇತ್ರ ಅಸಿತ್ವ¤ಕ್ಕೆ ಬಂದಾಗಿನಿಂದ ಕಾಂಗ್ರೆಸ್‌ನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ಇಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಗಟ್ಟಿ ನೆಲೆ ಹಾಕಿಕೊಂಡಿರುವ ರಾಮಲಿಂಗಾರೆಡ್ಡಿಗೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಪ್ರಬಲ ಎದುರಾಳಿಗಳು ಇಲ್ಲ. ರಾಜಧಾನಿಯ ರಾಜಕಾರಣದ ಮೇಲೆ ಹಿಡಿತ ಹೊಂದಿರುವ ರಾಮಲಿಂಗಾರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಸಲೀಸಾಗಿ ಗೆಲ್ಲುತ್ತಾರೆ ಎಂಬ ಮಾತಿದೆ. ಏಷ್ಯಾದ ಅತೀ ದೊಡ್ಡ ವಿಧಾನಸಭೆ ಕ್ಷೇತ್ರವೆನಿಸಿದ್ದ ಉತ್ತರಹಳ್ಳಿಗೆ ಸೇರಿದ್ದ ಬಿಟಿಎಂ ಲೇಔಟ್, ಜಕ್ಕಸಂದ್ರ, ಈಜಿಪುರ, ಕೋರಮಂಗಲ ಹಾಗೂ ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಲಕ್ಕಸಂದ್ರ, ಸುದ್ದಗುಂಟೆಪಾಳ್ಯ ಮತ್ತು ಮಡಿವಾಳ ಒಳಗೊಂಡ ಬಿಟಿಎಂ ಲೇಔಟ್ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆದರೆ ಬೈರಸಂದ್ರ ಕ್ಷೇತ್ರದಿಂದ ಹೊರಗುಳಿದು, ಜಯನಗರ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಅನ್ಯಭಾಷಿಕರು, ಅನ್ಯರಾಜ್ಯದವರು ಹೆಚ್ಚು ಸಂಖ್ಯೆಯಲ್ಲಿದ್ದು, ತೆಲುಗು ಭಾಷಿಕರ ಪ್ರಮಾಣ ಗಣನೀಯವಾಗಿದೆ. ಮುಸ್ಲಿಂಮರು, ಕ್ರೈಸ್ತರು, ಪರಿಶಿಷ್ಟರು ಸಮ ಪ್ರಮಾಣದಲ್ಲಿ¨ªಾರೆ.
ಜಯನಗರ
ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ಸಹ ಒಂದು. ಪ್ರಜ್ಞಾವಂತರ ಮತ ಕ್ಷೇತ್ರವೆಂಬ ಖ್ಯಾತಿ ಹೊತ್ತಿರುವ ಬೆಂಗಳೂರಿನ ಅತ್ಯಂತ ಯೋಜಿತ ಬಡಾವಣೆಗಳಲ್ಲಿ ಒಂದಾದ ಜಯನಗರ ಕ್ಷೇತ್ರ ಆರಂಭದಲ್ಲಿ ಕಾಂಗ್ರೆಸ್‌ನ ಭದ್ರ ನೆಲೆ ಆಗಿತ್ತು. ಬಿಟಿಎಂ ಕ್ಷೇತ್ರದ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಸತತ ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಲ್ಲಿ ರಾಮಲಿಂಗಾರೆಡ್ಡಿ ಬಿಟಿಎಂ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿತು. 2008ರಿಂದ ಸತತ ಮೂರು ಬಾರಿ ಬಿಜೆಪಿಯ ಬಿ.ಎನ್. ವಿಜಯಕುಮಾರ್ ಗೆಲುವು ಸಾಧಿಸಿದ್ದರು. ಬಿ.ಎನ್. ವಿಜಯಕುಮಾರ್ ಅವರ ಅಕಾಲಿಕ ನಿಧನಿಂದ ಎದುರಾದ ಉಪ ಚುನಾವಣೆಯಲ್ಲಿ 2019ರಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಬಿ.ಎನ್. ವಿಜಯಕುಮಾರ್ ಅವರ ಸಹೋದರ ಬಿ.ಎನ್. ಪ್ರಹ್ಲಾದ್ ಅವರಿಂದ ಕೇವಲ 2,800 ಮತಗಳ ಅಂತರದಿಂದ ಸೌಮ್ಯಾರೆಡ್ಡಿ ಗೆದ್ದಿದ್ದರು.
ವಿಜಯನಗರ
ಬಿನ್ನಿಪೇಟೆ ಕ್ಷೇತ್ರದಿಂದ ಬೇರ್ಪಟ್ಟು ಕ್ಷೇತ್ರ ಪುನರ್‌ವಿಂಗಡಣೆ ಪರಿಣಾಮ 2008ರಲ್ಲಿ ಅಸ್ತಿತ್ವಕ್ಕೆ ಬಂದ ವಿಜಯನಗರ ವಿಧಾನಸಭಾ ಕ್ಷೇತ್ರ ತನ್ನ ಅಸ್ತಿತ್ವದಿಂದಲೂ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕಾಂಗ್ರೆಸ್ ಒಕ್ಕಲಿಗ ನಾಯಕ ಎಂ. ಕೃಷ್ಣಪ್ಪ 2008ರಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಅವರೊಬ್ಬರೇ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಿಂದಿನ ಮೂರು ಚುನಾವಣೆಗಳಲ್ಲೂ ಪೈಪೋಟಿ ನೀಡುತ್ತಿರುವ ಬಿಜೆಪಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಆದರೆ ಕಾಂಗ್ರೆಸ್ ಹಾಲಿ ಶಾಸಕ ಎಂ. ಕೃಷ್ಣಪ್ಪ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಗ್ಗೆ ಇನ್ನೂ ಚಕಾರವೇ ಇಲ್ಲ. ಹೆಚ್ಚು ಅಭಿವೃದ್ಧಿ ಹೊಂದಿರುವ ಮತ್ತು ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳನ್ನು ಈ ಕ್ಷೇತ್ರದಲ್ಲಿ ಕಾಣಬಹುದು.
ಚಿಕ್ಕಪೇಟೆ
ರಾಜಧಾನಿ ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ಮತ್ತು ಅತ್ಯಂತ ಹೆಚ್ಚು ಜನನಿಭಿಡ ಪ್ರದೇಶ ಎಂಬ ಖ್ಯಾತಿ ಹೊತ್ತಿರುವ ಚಿಕ್ಕಪೇಟೆ ರಾಜಕೀಯವಾಗಿಯೂ ಯಾರೊಬ್ಬರಿಗೂ ಭದ್ರವಾದ ನೆಲೆಯೊದಗಿಸಿಲ್ಲ. ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರವಾದ ಹಣಾಹಣಿ ಇದೆ. 1957ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಆಗ ಸ್ವತಂತ್ರ ಅಭ್ಯರ್ಥಿ ಜಿ.ಇ.ಹೂವರ್ ಗೆದ್ದಿದ್ದರು. ಬಳಿಕ 1962ರಲ್ಲಿ ಕಾಂಗ್ರೆಸ್‌ನ ವೈ.ರಾಮಚಂದ್ರ, 1967ರಲ್ಲಿ ಪಕ್ಷೇತರ ವಾಟಾಳ್ ನಾಗರಾಜ್, 1972ರಲ್ಲಿ ಜನತಾ ಪಕ್ಷ ಪಾರ್ಟಿಯ ಕೆ.ಎಂ.ನಾಗಣ್ಣ, 1978, 1983, 1985ರಲ್ಲಿ ಜನತಾ ಪಾರ್ಟಿಯ ಎ.ಲಕ್ಷ್ಮೀಸಾಗರ್, 1989ರಲ್ಲಿ ಕಾಂಗ್ರೆಸ್‌ನ ಪೆರಿಕಲ್ ಎಂ.ಮಲ್ಲಪ್ಪ, 1994ರಲ್ಲಿ ಬಿಜೆಪಿಯ ಜೀವರಾಜ್ ಆಳ್ವಾ, 1996ರಲ್ಲಿ ಜನತಾ ದಳದ ಪಿ.ಎಸ್.ಪ್ರಕಾಶ್, 1999 ಮತ್ತು 2004ರಲ್ಲಿ ಬಿಜೆಪಿಯ ಪಿ.ಸಿ.ಮೋಹನ್, 2013ರಲ್ಲಿ ಕಾಂಗ್ರೆಸ್‌ನ ಆರ್.ವಿ.ದೇವರಾಜ್ ಮತ್ತು 2018ರಲ್ಲಿ ಬಿಜೆಪಿಯ ಉದಯ್ ಬಿ. ಗರುಡಾಚಾರ್ ಗೆದ್ದಿದ್ದಾರೆ. ಹೀಗಾಗಿ ಇದೊಂದು ರೀತಿಯಲ್ಲಿ ರಾಜಕೀಯ ಪ್ರಯೋಗಶಾಲೆಯಂತಿತ್ತು ಎಂದು ವಿಶ್ಲೇಷಿಸಬಹುದು.
ಗೋವಿಂದರಾಜನಗರ
ಕ್ಷೇತ್ರ ಪುನರ್‌ವಿಂಗಡಣೆ ಹಿನ್ನೆಯಲ್ಲಿ 2008ರಲ್ಲಿ ಬಿನ್ನಿಪೇಟೆ ಅಸ್ತಿತ್ವ ಕಳೆದುಕೊಂಡ ಅನಂತರ ಹುಟ್ಟಿಕೊಂಡ ಎರಡು ಕ್ಷೇತ್ರಗಳ ಪೈಕಿ ಗೋವಿಂದರಾಜನಗರ ಒಂದು. 1978ರಲ್ಲಿ ಅಸ್ತಿತ್ವಕ್ಕೆ ಬಂದ ಬಿನ್ನಿಪೇಟೆಯಿಂದ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಪೌರಕಾರ್ಮಿಕರ ಪಾಲಿನ ವಿಮೋಚಕ ಎಂದು ಕರೆಯಬಹುದಾದ ಐಪಿಡಿ ಸಾಲಪ್ಪ ಗೆದ್ದಿದ್ದರು. ಬಳಿಕ ಜನತಾ ಪಾರ್ಟಿಯಿಂದ ಕನ್ನಡ ಚಳುವಳಿಗಾರ ಜಿ. ನಾರಾಯಣಕುಮಾರ್ ಎರಡು ಬಾರಿ ಗೆದ್ದಿದ್ದು ಇತಿಹಾಸ. 1989ರಲ್ಲಿ ಕಾಂಗ್ರೆಸ್‌ನ ನಸೀರ್ ಅಹ್ಮದ್ ಜಯಗಳಿಸಿದ್ದರು. 1994ರಲ್ಲಿ ಜನತಾ ದಳ, 1999ರಲ್ಲಿ ಸ್ವತಂತ್ರ, 2004ರಲ್ಲಿ ಕಾಂಗ್ರೆಸ್‌ನಿಂದ ವಿ.ಸೋಮಣ್ಣ ಅವರು ಸತತ ಮೂರು ಬಾರಿಗೆ ಇದೇ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. 2008ರಲ್ಲಿ ಬಿನ್ನಿಪೇಟೆ ಗೋವಿಂದರಾಜ ನಗರವಾಗಿ ಬದಲಾಯಿತು. ಆಗ ವಿ. ಸೋಮಣ್ಣ ಅವರೇ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಗೆದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿದ್ದರಿಂದ 2009ರಲ್ಲಿ ಉಪಚುನಾವಣೆ ನಡೆದು ಕಾಂಗ್ರೆಸ್‌ನ ಪ್ರಿಯಾಕೃಷ್ಣ ಗೆದ್ದಿದ್ದರು. 2013ರ ಚುನಾವಣೆಯಲ್ಲಿಯೂ ಪ್ರಿಯಾಕೃಷ್ಣ ಅವರೇ ಗೆದ್ದರು. ಈ ಎರಡೂ ಚುನಾವಣೆಯಲ್ಲಿ ಸೋತಿದ್ದ ಸೋಮಣ್ಣ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಒಟ್ಟಾರೆಯಾಗಿ ಜನತಾದಳದಿಂದ ಒಮ್ಮೆ, ಸ್ವತಂತ್ರ ಅಭ್ಯರ್ಥಿಯಾಗಿ ಒಮ್ಮೆ, ಕಾಂಗ್ರೆಸ್‌ನಿಂದ ಎರಡು ಬಾರಿ, ಬಿಜೆಪಿಯಿಂದ ಒಂದು ಬಾರಿ ಸೋಮಣ್ಣ ಇದೇ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ಪದ್ಮನಾಭನಗರ
ಏಷ್ಯಾದ ಅತೀದೊಡ್ಡ ವಿಧಾನಸಭಾ ಕ್ಷೇತ್ರವೆನಿಸಿಕೊಂಡಿದ್ದ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬೇರ್ಪಟ್ಟು 2008ರ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ರಾಜಕಾರಣದ ದಿಗ್ಗಜರಾದ ಎಂ.ವಿ. ರಾಜಶೇಖರನ್, ಬಿ. ಬಸವಲಿಂಗಪ್ಪ ಗೆದ್ದಿದ್ದರು. ಹಿಂದಿನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಇದ್ದಾಗ 1998ರಲ್ಲಿ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ದಿದ್ದ ಆರ್. ಅಶೋಕ್ 2008ರಿಂದ ಪದ್ಮನಾಭನಗರದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ರಾಜಧಾನಿಯ ರಾಜಕಾರಣದ ಮೇಲೆ ತನ್ನದೇ ಆದ ಹಿಡಿತ ಇಟ್ಟುಕೊಂಡಿರುವ ಆರ್. ಅಶೋಕ್ ರಾಜ್ಯ ಬಿಜೆಪಿಯಲ್ಲಿ ಸದ್ಯ ಪ್ರಭಾವಿ ಒಕ್ಕಲಿಗ ನಾಯಕ ಕೂಡ ಹೌದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವಾಸ ಇರುವುದು ಇದೇ ಪದ್ಮನಾಭನಗರದಲ್ಲಿ. ಜೆಡಿಎಸ್ ಇಲ್ಲಿನ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಕಾಂಗ್ರೆಸ್ ಪಕ್ಷಕ್ಕೂ ಪ್ರಬಲ ನೆಲೆಗಟ್ಟು ಇಲ್ಲಿದೆ. ಆದಾಗ್ಯೂ ಆರ್. ಅಶೋಕ್ ಇಲ್ಲಿ ಸಲೀಸಲಾಗಿ ಗೆಲ್ಲುತ್ತಾರೆ.
ಬಸವನಗುಡಿ
ಮೂಲ ಹಾಗೂ ಪಾರಂಪರಿಕ ಬೆಂಗಳೂರಿನ ಛಾಯೆ ಹೊಂದಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ ಹಾಗೂ ಜಾಗೃತ ಮತದಾರರ ಕ್ಷೇತ್ರವೂ ಎನಿಸಿಕೊಂಡಿದೆ. 80ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರು ಅನ್ನುವುದು ಈ ಕ್ಷೇತ್ರದ ವಿಶೇಷ. 1957ರಿಂದ 94ರವರೆಗೆ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ತೆಕ್ಕೆಯಲ್ಲಿದ್ದ ಈ ಕ್ಷೇತ್ರ 94ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಎಚ್.ಎನ್ ನಂಜೇಗೌಡ ಗೆದ್ದಿದ್ದರು. 99ರಲ್ಲಿ ಕೆ.ಎನ್. ಸುಬ್ಟಾರೆಡ್ಡಿ ಬಿಜೆಪಿಯಿಂದ ಶಾಸಕರಾಗಿದ್ದರು. ನಡುವೆ 2004ರಲ್ಲಿ ಕಾಂಗ್ರೆಸ್‌ನ ಚಂದ್ರಶೇಖರ್ ಪಾಲಾಗಿತ್ತು. ಅದಾದ ಅನಂತರ 2008ರಿಂದ ಇಲ್ಲಿವರೆಗೆ ಬಿಜೆಪಿಯ ಎಲ್. ರವಿಸುಬ್ರಹ್ಮಣ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಾ ಇದ್ದು, ಕಾಂಗ್ರೆಸ್‌ನಿಂದಲೂ ಪ್ರಬಲ ಪೈಪೋಟಿ ಇದೆ. ಆಮ್ ಆದ್ಮಿ ಪಕ್ಷಕ್ಕೆ ಬಸವನಗುಡಿ ಕ್ಷೇತ್ರ ಕರ್ನಾಟಕದ ಪ್ರಯೋಗ ಶಾಲೆಯಂತಿದೆ. ಕಳೆದ ಚುನಾವಣೆಯಿಂದ ಆಮ್ ಆದ್ಮಿ ಇಲ್ಲಿ ಹೆಚ್ಚು ಸಕ್ರಿಯವಾಗಿದೆ.
ಬೊಮ್ಮನಹಳ್ಳಿ
ಕ್ಷೇತ್ರ ಪುನರ್‌ವಿಂಗಡಣೆ ಪರಿಣಾಮ 2008ರಲ್ಲಿ ಅಸ್ತಿತ್ವಕ್ಕೆ ಬಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೊರ ವಲಯದ ಐಟಿ ಪ್ರದೇಶಗಳನ್ನು ಒಳಗೊಂಡಿದೆ. ಐಟಿ ಉದ್ಯೋಗಿಗಳು, ಅಪಾರ್ಟ್‌ಮೆಂಟ್ ವಾಸಿಗಳು ಇಲ್ಲಿ ಹೆಚ್ಚಾಗಿ ಕಂಡು ಬಂದರೂ ಆಂಧ್ರ, ತಮಿಳುನಾಡು ಮತ್ತಿತರ ಅನ್ಯರಾಜ್ಯಗಳಿಂದ ವಲಸೆ ಬಂದವರು, ಉತ್ತರ ಕರ್ನಾಟಕದಿಂದ ಉದ್ಯೋಗ ಅರಿಸಿ ಬಂದವರು, ಸೇವಾ ಮತ್ತು ಕಾರ್ಮಿಕ ವಲಯದಲ್ಲಿ ದುಡಿಯಲು ಬಂದ ಉತ್ತರ ಭಾರತೀಯರೂ ಇಲ್ಲಿ ಹೆಚ್ಚಾಗಿ ಇದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಇಲ್ಲಿ ದೈತ್ಯವಾಗಿ ಬೆಳೆದಿದ್ದು, ಆಂಧ್ರದ ರೆಡ್ಡಿಗಳು ಇದರ ಮೇಲೆ ಪ್ರಾಬಲ್ಯ ಹೊಂದಿದ್ದಾರೆ. ಈವರೆಗೆ ಮೂರು ಚುನಾವಣೆಗಳನ್ನು ಈ ಕ್ಷೇತ್ರ ಎದುರಿಸಿದ್ದು, ಮೂರು ಚುನಾವಣೆಗಳಲ್ಲೂ ಬಿಜೆಪಿಯ ಸತೀಶ್ ರೆಡ್ಡಿ ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.