Bengaluru-Mysuru Expressway; 15 ದಿನಗಳಲ್ಲಿ 12 ಸಾವಿರ ವಾಹನಗಳಿಗೆ ದಂಡ!
ಅತಿವೇಗದಲ್ಲಿ ವಾಹನ ಚಾಲನೆ, ಪಥ ಬದಲಾವಣೆಯಲ್ಲಿ ಅಶಿಸ್ತಿಗೆ ದಂಡ ಖಾತ್ರಿ
Team Udayavani, May 18, 2024, 7:35 AM IST
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸದ್ದಿಲ್ಲದೆ ಎಐ ಕೆಮರಾಗಳು ಕಣ್ಗಾವಲು ಇರಿಸಲು ಆರಂಭಿಸಿವೆ. ಕಳೆದ 15 ದಿನಗಳಿಂದಲೇ ಎಎನ್‌ಆರ್‌ಪಿ ಕೆಮರಾ ಮೂಲಕ ವಾಹನಗಳಿಗೆ ದಂಡ ವಿಧಿಸಲು ಆರಂಭಿಸಿದ್ದು, ಇದುವರೆಗೆ ಎಕ್ಸ್‌ಪ್ರೆಸ್ ಹೈವೇಯಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಎಐ ( ಕೃತಕಬುದ್ದಿಮತ್ತೆ) ತಂತ್ರಜ್ಞಾನ ಹೊಂದಿರುವ ಎಎನ್‌ಆರ್‌ಪಿ ಕೆಮರಾಗಳನ್ನು ಅಳವಡಿಸಿದ್ದು, ಇದರೊಂದಿಗೆ ಸ್ಪೀಡ್ ರಾಡಾರ್‌ಗಳನ್ನು ಅಳವಡಿಸಲಾಗಿದೆ. ಕೆಮರಾ ಅಳವಡಿಸಿರುವ ಕಾಮಗಾರಿಯನ್ನು ಮೂರು ದಿನಗಳ ಹಿಂದೆ ರಸ್ತೆ ಸುರಕ್ಷಾ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಭೇಟಿ ಮಾಡಿ ಪರಿಶೀಲಿಸಿದ್ದರು. 15 ದಿನಗಳ ಹಿಂದೆಯೇ ಕೆಮರಾಗಳು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇರಿಸಲು ಆರಂಭಿಸಿವೆ.
ಸಿದ್ಧವಾಗಿವೆ ನೋಟಿಸ್‌ಗಳು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ನಿಯಮ ಉಲ್ಲಂ ಸಿರುವ 12,192 ವಾಹನ ಮಾಲಕರ ವಿರುದ್ಧ ಚಿತ್ರ ಸಮೇತ ನೋಟಿಸ್ ಸಿದ್ಧವಾಗಿದೆ. ಗಣಕೀಕೃತ ಇ-ಚಲನ್ ಅನ್ನು ಎಡಿಜಿಪಿ ಆಲೋಕ್‌ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿಯಮ ಉಲ್ಲಂ ಸಿರುವ ವಾಹನ ಸವಾರರಿಗೆ ಸದ್ಯದಲ್ಲೇ ಮನೆಗೆ ನೋಟಿಸ್ ಕಳುಹಿಸಲಿದ್ದು, ಆನ್‌ಲೈನ್ ಮೂಲಕ ಅಥವಾ ಸಮೀಪದ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಲು ಅವಕಾಶ ಮಾಡಿಕೊಡಲಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಆನ್‌ಲೈನ್‌ನಲ್ಲಿ ಚೆಕ್‌ಮಾಡಿ
ನಿಮ್ಮ ವಾಹನಕ್ಕೆ ದಂಡ ವಿಧಿಸಲಾಗಿದೆಯೇ ಎಂಬುದನ್ನು ತಿಳಿಯಲು ಪೊಲೀಸ್ ಇಲಾಖೆ ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ತೆರೆದಿದೆ. ಈ ವೆಬ್ ಪೇಜ್‌ನಲ್ಲಿ ನಿಮ್ಮ ವಾಹನದ ಸಂಖ್ಯೆ, ಜಿಲ್ಲೆಯನ್ನು ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ದಂಡ ಬಗ್ಗೆ ತಿಳಿಯುತ್ತದೆ.
ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂ ಸಿ ಪೊಲೀಸ್ ಇಲಾಖೆಯ ಕೆಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಹನ ಚಾಲಕರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ದಂಡದಿಂದ ತಪ್ಪಿಸಿಕೊಳ್ಳಿ. ಈ ಕೆಮರಾಗಳು ಹಗಲು -ರಾತ್ರಿ ಕಾರ್ಯನಿರ್ವಹಿಸಲಿವೆ.
– ಆಲೋಕ್‌ಕುಮಾರ್, ಎಡಿಜಿಪಿ, ರಸ್ತೆ ಸುರಕ್ಷಾ ವಿಭಾಗ (ತಮ್ಮ ಎಕ್ಸ್ ಖಾತೆಯಲ್ಲಿ)
– ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.