ಟೆಸ್ಟ್ ಚಾಂಪಿಯನ್‌ಶಿಪ್ ಅವಧಿ ವಿಸ್ತರಿಸಲು ಬಾಂಗ್ಲಾ ಮನವಿ
Team Udayavani, Jun 30, 2020, 6:57 AM IST
ಢಾಕಾ: ಕೋವಿಡ್-19 ಸಂಕಟದ ಕಾಲದಲ್ಲಿ ತನ್ನ 8 ಟೆಸ್ಟ್ ಪಂದ್ಯಗಳು ರದ್ದುಗೊಂಡ ಕಾರಣ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಾ ವಳಿಯ ಅವಧಿಯನ್ನು ವಿಸ್ತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಗೆ ಮನವಿ ಮಾಡಿದೆ.
“ಟೆಸ್ಟ್ ಚಾಂಪಿಯನ್‌ಶಿಪ್ ಅವಧಿ ಯನ್ನು ವಿಸ್ತರಿಸದೇ ಹೋದರೆ ನಮಗೆ ಆ 8 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಸಿಗದು. ಇದರಿಂದ ಭಾರೀ ನಷ್ಟವಾಗಲಿದೆ’ ಎಂಬುದಾಗಿ ಬಿಸಿಬಿ ಕ್ರಿಕೆಟ್ ಆಪರೇಶನ್ಸ್ ಚೇರ್ಮನ್ ಅಕ್ರಂ ಖಾನ್ ಹೇಳಿದ್ದಾರೆ.
8 ಟೆಸ್ಟ್ ಪಂದ್ಯ ನಷ್ಟ
2 ವರ್ಷಗಳಲ್ಲಿ ಮುಗಿಯಬೇಕಿ ರುವ ಟೆಸ್ಟ್ ಚಾಂಪಿಯನ್‌ಶಿಪ್ 2019ರ ಜುಲೈನಲ್ಲಿ ಆರಂಭವಾಗಿತ್ತು. ಆದರೆ ಕೋವಿಡ್-19ದಿಂದಾಗಿ ಅಂತಾರಾ ಷ್ಟ್ರೀಯ ಕ್ರಿಕೆಟಿನ ವೇಳಾಪಟ್ಟಿಯೇ ಅಸ್ತವ್ಯಸ್ತವಾಗಿದೆ. ಇದರಿಂದ ಬಾಂಗ್ಲಾ ದೇಶಕ್ಕೆ 8 ಟೆಸ್ಟ್ ನಷ್ಟವಾಗಿದೆ. ಇದರಲ್ಲಿ ಒಂದು ಪಂದ್ಯವನ್ನು ಪಾಕಿಸ್ಥಾನದಲ್ಲಿ ಆಡಬೇಕಿತ್ತು. ಉಳಿದಂತೆ ಆಸ್ಟ್ರೇಲಿಯ ವಿರುದ್ಧ 2, ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ 2 ಟೆಸ್ಟ್ ಹಾಗೂ ಶ್ರೀಲಂಕಾ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡುವ ಕಾರ್ಯಕ್ರಮವಿತ್ತು.
ಆರು ಟೆಸ್ಟ್‌ಗಳ ಸರಣಿ
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮದಂತೆ ತಂಡವೊಂದು 6 ಟೆಸ್ಟ್ ಸರಣಿಗಳಲ್ಲಿ ಪಾಲ್ಗೊಳ್ಳಬೇಕಿದೆ. ಇದರಲ್ಲಿ 3 ಸರಣಿ ತವರಿನಲ್ಲಿ, 3 ಸರಣಿ ವಿದೇಶದಲ್ಲಿ ನಡೆಯಲಿದೆ. 2021ರ ಮಾರ್ಚ್ 31ಕ್ಕೆ ಸರಣಿ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ಒಟ್ಟು 72 ಟೆಸ್ಟ್ ಪಂದ್ಯಗಳನ್ನು ನಡೆಸುವುದು ಐಸಿಸಿ ಯೋಜನೆಯಾಗಿತ್ತು. ಸದ್ಯ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.