ಢಾಕಾ: ವೇತನಕ್ಕೆ ರಸ್ತೆಗಿಳಿದ ಜವುಳಿ ಕಾರ್ಮಿಕರು
Team Udayavani, Apr 27, 2020, 2:23 PM IST
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಮಂದಿ ಜವುಳಿ ಉದ್ಯಮದ ಕಾರ್ಮಿಕರು ಕೋವಿಡ್ ಸಂದರ್ಭದ ವೇತನಕ್ಕಾಗಿ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.
ರಾಯಿಟರ್ನ ವರದಿಯಂತೆ, ಚೀನದ ಬಳಿಕ ಅತಿ ಹೆಚ್ಚು ಸಿದ್ಧ ಉಡುಪುಗಳನ್ನು ಜಗತ್ತಿನ ವಿವಿಧ ಬ್ರ್ಯಾಂಡ್ ಕಂಪೆನಿಗಳಿಗೆ ಪೂರೈಸುತ್ತಿರುವ ಎರಡನೇ ದೊಡ ರಾಷ್ಟ್ರ ಬಾಂಗ್ಲಾದೇಶವಾಗಿದೆ. ನೂರಾರು ಸಿದ್ಧ ಉಡುಪು ಕಾರ್ಖಾನೆಗಳಿವೆ. ಒಟ್ಟು ಆರು ಬಿಲಿಯನ್ ಡಾಲರ್ ರಫ್ತು ವಹಿವಾಟು ಇಲ್ಲಿಯ ಜವುಳಿ ವಲಯ ಮಾಡುತ್ತಿದೆ. ಆದರೆ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಜಗತ್ತಿನ ವಿವಿಧ ಬ್ರ್ಯಾಂಡ್‌ಗಳು ತಮ್ಮ ಕಾರ್ಯಾದೇಶವನ್ನು ರದ್ದುಗೊಳಿಸಿವೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡದ ಸ್ಥಿತಿಯಲ್ಲಿವೆ.
ಹಲವು ದಿನಗಳಿಂದ ಸಣ್ಣ ಪುಟ್ಟ ಪ್ರತಿಭಟನೆಯಲ್ಲಿ ತೊಡಗಿದ್ದ ಕಾರ್ಮಿಕರು, ಇಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದವು. ಈ ಮಧ್ಯೆ ಸರಕಾರವು ಕಳೆದ ತಿಂಗಳು ಜವುಳಿ ಉದ್ಯಮ-ಕಾರ್ಮಿಕರ ಸಹಾಯಕ್ಕಾಗಿ 588 ಮಿಲಿಯನ್ ಪ್ಯಾಕೇಜ್‌ನ್ನು ಘೋಷಿಸಿತ್ತು. ಆದರೆ ಕಂಪೆನಿಗಳು ಅದು ಸಾಕಾಗದು ಎಂದಿದ್ದವು.
ಪ್ರಸ್ತುತ ಬಾಂಗ್ಲಾದೇಶದಲ್ಲಿ 418 ಹೊಸ ಪ್ರಕರಣ ಪತ್ತೆಯಾಗಿದ್ದು, 5, 416 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 145 ಮಂದಿ ಸತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.