ಬಂಟ್ವಾಳ: ಮತ್ತಷ್ಟು ಕ್ಷೇತ್ರಗಳ ಕಡಿತ : ಉಳ್ಳಾಲಕ್ಕೆ ಪ್ರತ್ಯೇಕ ಜಿ. ಪಂ., ತಾ.ಪಂ.ಕ್ಷೇತ್ರ


Team Udayavani, Feb 23, 2021, 5:10 AM IST

ಬಂಟ್ವಾಳ: ಮತ್ತಷ್ಟು ಕ್ಷೇತ್ರಗಳ ಕಡಿತ : ಉಳ್ಳಾಲಕ್ಕೆ ಪ್ರತ್ಯೇಕ ಜಿ. ಪಂ., ತಾ.ಪಂ.ಕ್ಷೇತ್ರ

ಬಂಟ್ವಾಳ: ಕೆಲವು ದಿನಗಳ ಹಿಂದೆ ರಾಜ್ಯ ಚುನಾವಣ ಆಯೋಗವು ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಗಳನ್ನು ಪುನರ್‌ ವಿಂಗಡಣೆ ಮಾಡುವ ದೃಷ್ಟಿಯಿಂದ ಸಂಖ್ಯೆಗಳನ್ನು ನೀಡಿದ್ದು, ಇದೀಗ ಉಳ್ಳಾಲ ತಾಲೂಕಿಗೆ ಪ್ರತ್ಯೇಕ ಚುನಾವಣೆಯ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳಲ್ಲಿ ಮತ್ತಷ್ಟು ವ್ಯತ್ಯಯ ಆಗಲಿದೆ.

ಈ ಹಿಂದೆ 34 ಕ್ಷೇತ್ರಗಳನ್ನು ಹೊಂದಿರುವ ಬಂಟ್ವಾಳ ತಾಲೂಕು ಪಂಚಾಯತ್‌ಗೆ ಕಳೆದ ಕೆಲವು ದಿನಗಳ ಹಿಂದೆ ಬಂದ ಆದೇಶದಲ್ಲಿ ಅದು 28ಕ್ಕೆ ಇಳಿಯಲ್ಪಟ್ಟಿತ್ತು. ಆದರೆ ಈ ಬಾರಿ ಉಳ್ಳಾಲ ತಾ.ಪಂ.ಗೆ ಪ್ರತ್ಯೇಕ ಚುನಾವಣೆ ಇಲ್ಲ ಎನ್ನಲಾಗಿತ್ತು. ಆದರೆ ಹೊಸ ಆದೇಶದ ಪ್ರಕಾರ ಈ ಬಾರಿಯೇ ಉಳ್ಳಾಲ ತಾ.ಪಂ.ಗೆ ಪ್ರತ್ಯೇಕ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಹೀಗಾಗಿ ಬಂಟ್ವಾಳ ತಾ.ಪಂ.ನ ಸ್ಥಾನಗಳು ಮತ್ತಷ್ಟು ಇಳಿಕೆಯಾಗಲಿವೆ.

ಈಗಾಗಲೇ ಉಳ್ಳಾಲ ತಾಲೂಕಿಗೆ ತಹಶೀಲ್ದಾರ್‌ ನೇಮಕವಾಗಿದ್ದು, ಅವರ ನೇತೃತ್ವದಲ್ಲೇ ತಾಲೂಕಿನಲ್ಲಿ ಜಿ.ಪಂ., ತಾ.ಪಂ. ಚುನಾವಣೆ ನಡೆಯುವ ಸಾಧ್ಯತೆ ಇದೆ. ವಿರೋಧದ ಮಧ್ಯೆಯೂ ಬಂಟ್ವಾಳದ ಸಜೀಪನಡು ಗ್ರಾ.ಪಂ. ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ.

ಈ ಹಿಂದಿನ ಆದೇಶದ ಪ್ರಕಾರ 30ರ ಬದಲು ಬಂಟ್ವಾಳ ತಾಲೂಕಿನಲ್ಲಿ 28 ತಾ.ಪಂ. ಕ್ಷೇತ್ರಗಳನ್ನು ನಿಗದಿ ಮಾಡ ಲಾಗಿತ್ತು. ಆದರೆ ಫೆ. 18ರಂದು ಹೊಸ ಆದೇಶ ಬಂದಿದ್ದು, 28ರ ಬದಲು 24 ತಾ.ಪಂ. ಕ್ಷೇತ್ರಗಳು ಬಂಟ್ವಾಳದಲ್ಲಿ ಉಳಿಯಲಿವೆ. ಸದ್ಯಕ್ಕೆ ಬಂಟ್ವಾಳ ತಾ.ಪಂ. ವ್ಯಾಪ್ತಿಯಲ್ಲಿರುವ ನರಿಂಗಾನ, ಸಜೀಪಪಡು, ಕುರ್ನಾಡು, ಬಾಳೆಪುಣಿ ಕ್ಷೇತ್ರ ಪ್ರತ್ಯೇಕಗೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ಆಡಳಿತದಲ್ಲಿರುವ ಕ್ಷೇತ್ರಕ್ಕಿಂತ ಒಟ್ಟು 10 ಕ್ಷೇತ್ರಗಳು ಬಂಟ್ವಾಳದಲ್ಲಿ ಕಡಿಮೆಯಾಗಲಿವೆ. ತಾಲೂಕಿನಲ್ಲಿರುವ ಜಿ.ಪಂ. ಕ್ಷೇತ್ರದಲ್ಲೂ ವ್ಯತ್ಯಾಸವಾಗಿದ್ದು, ಹಿಂದಿನ ಆದೇಶದಲ್ಲಿ 9 ಜಿ.ಪಂ.ಕ್ಷೇತ್ರಗಳ ಬದಲು 10 ಆಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಹೊಸ ಆದೇಶದಲ್ಲಿ ಮತ್ತೆ ಅದನ್ನು 9ಕ್ಕೆ ಇಳಿಸಲಾಗಿದೆ. ಹೀಗಾಗಿ ಜಿ.ಪಂ. ಕ್ಷೇತ್ರ ಪುನರ್‌ ವಿಂಗಡಣೆಯಾಗಲಿದ್ದರೂ ಸಂಖ್ಯೆ ಮಾತ್ರ ಸದ್ಯಕ್ಕೆ ಇರುವ 9 ಕ್ಷೇತ್ರ ಮುಂದುವರಿಯಲಿದೆ. ಬಂಟ್ವಾಳದ ಕುರ್ನಾಡು ಜಿ.ಪಂ. ಕ್ಷೇತ್ರ ಸಂಪೂರ್ಣ ವಾಗಿ ಉಳ್ಳಾಲ ಭಾಗಕ್ಕೆ ಹೋಗಲಿದೆ.

7 ಗ್ರಾ.ಪಂ.ಗಳು ಕಡಿತ
ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿರುವ ಬಾಳೆಪುಣಿ, ಇರಾ, ಕುರ್ನಾಡು, ನರಿಂಗಾನ, ಫಜೀರು, ಸಜೀಪನಡು, ಸಜೀಪಪಡು ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರ್ಪಡೆಯಾಗಲಿವೆ. ಈ ಹಿಂದೆ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರ್ಪಡೆಯ ಮಾತುಗಳು ಕೇಳಿಬಂದರೂ ವಿರೋಧದ ಪರಿಣಾಮ ಪುದು, ತುಂಬೆ ಹಾಗೂ ಮೇರಮಜಲು ಗ್ರಾ.ಪಂ.ಗಳು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲೇ ಉಳಿಯಲಿವೆ. ಆದರೆ ಅವರ ವಿಧಾನಸಭಾ ಕ್ಷೇತ್ರ ಮಂಗಳೂರು ಆಗಿರುತ್ತದೆ.

ಹೊಸ ಆದೇಶ ಬಂದಿದೆ
ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬರುವ ಉಳ್ಳಾಲ ಭಾಗದ ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳನ್ನು ಪ್ರತ್ಯೇಕ ಮಾಡುವಂತೆ ಆದೇಶ ಬಂದಿದೆ. ಹೀಗಾಗಿ ಕಳೆದ ಆದೇಶದಲ್ಲಿದ್ದ ತಾ.ಪಂ.ನ 28ರ ಬದಲು 24 ಹಾಗೂ ಜಿ.ಪಂ.ನ 10ರ ಬದಲು 9 ಕ್ಷೇತ್ರಗಳು ಬಂಟ್ವಾಳ ತಾಲೂಕಿನಲ್ಲಿ ಉಳಿಯಲಿವೆ.
-ರಶ್ಮಿ ಎಸ್‌.ಆರ್‌., ತಹಶೀಲ್ದಾರ್‌, ಬಂಟ್ವಾಳ

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.