Bantwal: ಹಾಡಹಗಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಬಂಗಾರದ ಚೈನ್ ಎಳೆದು ಇಬ್ಬರು ಪರಾರಿ
Team Udayavani, Dec 14, 2023, 7:19 PM IST
ಬಂಟ್ವಾಳ: ಹಗಲು ಹೊತ್ತಿನಲ್ಲಿ ಅಂಗಡಿಯೊಂದರಲ್ಲಿ ಮಹಿಳೆಯೋರ್ವಳ ಕುತ್ತಿಗೆಗೆ ಕೈ ಹಾಕಿ ಅಪರಿಚಿತ ವ್ಯಕ್ತಿಗಳಿಬ್ಬರು ಬಂಗಾರದ ಚೈನ್ ಎಳೆದು ಪರಾರಿಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ಮಧ್ಯಾಹ್ನ ನಡೆದಿದೆ.
ಬಿಸಿರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಇಬ್ಬರು ಕಳ್ಳರು ಬಂಗಾರದ ಚೈನ್ ಎಗರಿಸಿ ಪರಾರಿಯಾಗಿರುವುದು.
ಸುಮಾರು 75 ಸಾವಿರ ಮೌಲ್ಯದ 1.50 ಪವನ್ ನ ಚಿನ್ನದ ಸರ ಕಳವಾಗಿದೆ.
ಮಧ್ಯಾಹ್ನ ಸುಮಾರು 2.45 ಗಂಟೆಗೆ ಕಳ್ಳತನ ನಡೆದಿದ್ದು, ಕಳವು ಮಾಡಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದರು ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರು ಇತ್ತೀಚೆಗೆ ಅಂಗಡಿಯನ್ನು ನವೀನ್ ಕುಲಾಲ್ ಎನ್ನುವವರಿಗೆ ಬಾಡಿಗೆಗೆ ನೀಡಿದ್ದರು.
ನವೀನ್ ಕುಲಾಲ್ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳುವ ಸಂದರ್ಭದಲ್ಲಿ ಅಂಗಡಿಯಲ್ಲಿ ಮಾಲಕಿ ಸರೋಜಿನಿ ಅವರು ಕುಳಿತು ಕೊಂಡು ವ್ಯಾಪಾರವನ್ನು ನೋಡಿಕೊಳ್ಳುತ್ತಾರೆ.
ಅದೇ ರೀತಿ ಇಂದು ಕೂಡ ನವೀನ್ ಊಟಕ್ಕೆ ತೆರಳಿದಾಗ ಸರೋಜಿನಿ ಅಂಗಡಿಯಲ್ಲಿದ್ದರು.
ಅದೇ ಸಮಯದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿ ಗಳು ಹೆಲ್ಮೆಟ್ ಧರಿಸಿಕೊಂಡಿದ್ದರು, ಅದರಲ್ಲಿ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು , 40 ರೂ ನೀಡಿದರು.
ಇವರ ಎರಡು ವಸ್ತುಗಳ ಬೆಲೆ 3 ಆಗಿದ್ದರಿಂದ ಚಿಲ್ಲರೆ ನೀಡುವ ಉದ್ದೇಶದಿಂದ ಕ್ಯಾಸ್ ಕೌಂಟರ್ ಗೆ ಬಗ್ಗಿದಾಗ ನಿಂತುಕೊಂಡಿದ್ದ ಅಪರಿಚಿತ ವ್ಯಕ್ತಿ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಬಂಗಾರ ಚೈನ್ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾರೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಭಯದಿಂದ ವ್ಯಾಪಾರಸ್ಥರು
ಶನಿವಾರ ಮುಂಜಾನೆ ವೇಳೆ ಕೈಕಂಬ ಎಂಬಲ್ಲಿ ಸುಮಾರು 12. ಸರಣಿ ಅಂಗಡಿಗಳಿಗೆ ನುಗ್ಗಿ ಕಳವು ಮಾಡಿದ ಪ್ರಕರಣ ಮರೆಯಾಗುವ ಮೊದಲೇ ಮತ್ತೆ ಹಗಲು ಹೊತ್ತಿನಲ್ಲಿ ಸ್ನ್ಯಾಚಿಂಗ್ ನಡೆದಿದೆ.
ಇದರ ಜೊತೆಗೆ ವಾಹನಗಳ ಕಳವು ಕೂಡ ನಡೆಯುತ್ತಿದ್ದು, ಜನ ಭಯದಿಂದ ವ್ಯಾಪಾರ ನಡೆಸುವ ಕಾಲ ಬಂದಿದೆ.
ಬಿಸಿರೋಡಿನ ಠಾಣೆಯ ಸುತ್ತಮುತ್ತಲಿನ ಅಂದರೆನಗರ ಪ್ರದೇಶದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ವ್ಯಕ್ತವಾಗಿದೆ. ನಿತ್ಯ ಜನರರಿರುವ ಮತ್ತು ಪೋಲೀಸರು ಬೀಟ್ ನಡೆಯುವ ನಗರ ಪ್ರದೇಶಗಳಲ್ಲಿ ಕಳವು ನಡೆಯುವುದು ದುರದೃಷ್ಟಕರ ಎಂದು ಹೇಳಲಾಗುತ್ತಿದೆ.
ಬಿಸಿರೋಡಿನ ಸುತ್ತಮುತ್ತಲಿನ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳಿದ್ದು ಕಳ್ಳರು ತಮ್ಮ ಚಾಕಚಕ್ಯತೆಯನ್ನು ಉಪಯೋಗಿಸಿ ಕಳ್ಳತನಮಾಡುತ್ತಿದ್ದಾರೆ.
ಕೈಕಂಬ ಮತ್ತು ಇಂದು ನಡೆದ ಕಳವಿನಿಂದ ನಗರ ಠಾಣಾ ಪೋಲಿಸರ ನಿದ್ದೆಗೆಡಿಸಿದ್ದು,ಕಳ್ಳರ ಜಾಡನ್ನು ಹಿಡಿಯಲು ಪೋಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.