ಬಂಟ್ವಾಳ: ಪೊಲೀಸರಿಂದ ಕಾರ್ಯಾಚರಣೆ
Team Udayavani, Apr 26, 2020, 5:41 AM IST
ಬಂಟ್ವಾಳ: ಜನರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅನಗತ್ಯ ಓಡಾಟ ನಿರಂತರವಾಗಿದ್ದು, ಹೀಗಾಗಿ ಬಂಟ್ವಾಳ ಪೊಲೀಸರು ಏಕಕಾಲದಲ್ಲೇ ವಿವಿಧೆಡೆ ವಾಹನಗಳನ್ನು ತಡೆದು ಆದೇಶ ಮೀರಿ ಓಡಾಟ ನಡೆಸುವವರಿಗೆ ಎಚ್ಚರಿಕೆ ನೀಡಿದರು. ಬಿ.ಸಿ. ರೋಡ್ ಜಂಕ್ಷನ್, ನಾರಾಯಣ ಗುರು ವೃತ್ತ, ಮೆಲ್ಕಾರ್ ಜಂಕ್ಷನ್ ಮೊದಲಾದೆಡೆ ತಪಾಸಣೆ ನಡೆಯಿತು.
ಈ ಭಾಗಗಳಲ್ಲಿ ಆಗಮಿಸಿದ ಎಲ್ಲ ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಆವಶ್ಯಕ ಆಗಮಿಸಿದವರಿಗೆ ಮುಂದಕ್ಕೆ ತೆರಳುವುದಕ್ಕೆ ಅವಕಾಶ ಮಾಡಿಕೊಟ್ಟರು. ಉಳಿದಂತೆ ಅನಗತ್ಯ ತಿರುಗಾಟ ನಡೆಸುವವರಿಗೆ ಎಚ್ಚರಿಕೆ ನೀಡಿದರು. ದ್ವಿಚಕ್ರ ವಾಹನಗಳು ಹಾಗೂ ಖಾಸಗಿ ವಾಹನಗಳಲ್ಲಿ ಲಾಕ್‌ಡೌನ್ ಆದೇಶ ಮೀರಿ ಪ್ರಯಾಣಿಸುವವರನ್ನು ತಡೆದು ನಿಲ್ಲಿಸಿದರು.
ಬಿ.ಸಿ. ರೋಡ್‌ನ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆ ದಿದ್ದು, ಮೆಲ್ಕಾರ್ ಭಾಗದಿಂದ ಹಾಗೂ ಪುಂಜಾಲಕಟ್ಟೆ ಹೆದ್ದಾರಿಯಿಂದ ಆಗಮಿಸಿದ ವಾಹನಗಳನ್ನು ತಪಾಸಣೆ ನಡೆಸಲಾಯಿತು.
ಈ ವೇಳೆ ಹೆಚ್ಚಿನ ವಾಹನಗಳು ಕಂಡುಬಂದಿದ್ದು, ಪಿಎಸ್‌ಐ ಅವರ ಜತೆ ಸಿಬಂದಿಯೂ ವಾಹನಗಳ ಸಂಖ್ಯೆ ಹೆಚ್ಚದಂತೆ ನಿಭಾಯಿಸಿದರು.
ಉಳಿದಂತೆ ಬಿ.ಸಿ. ರೋಡ್ ಜಂಕ್ಷನ್‌ನಲ್ಲಿ ಕೈಕಂಬ ಭಾಗದಿಂದ ಆಗಮಿಸಿದ ವಾಹನಗಳನ್ನು ಅಪರಾಧ ವಿಭಾಗದ ಪಿಎಸ್‌ಐ ಸಂತೋಷ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಮೆಲ್ಕಾರ್‌ನಲ್ಲಿ ಸಂಚಾರಿ ಠಾಣಾ ಪಿಎಸ್‌ಐ ಗಳಾದ ರಾಜೇಶ್ ಕೆ.ವಿ. ಹಾಗೂ ರಾಮ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಒಟ್ಟಿನಲ್ಲಿ ಎಲ್ಲ ಕಡೆ ಪೊಲೀಸರು ಈ ರೀತಿಯ ಕಾರ್ಯಾಚರಣೆಯ ಮೂಲಕ ಅನಗತ್ಯ ತಿರುಗಾಟ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.