![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 19, 2020, 5:19 AM IST
ಬಂಟ್ವಾಳ: ಬಿ.ಸಿ. ರೋಡು-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ರವಿವಾರ ತಡರಾತ್ರಿಯಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆ ಯಿಂದಾಗಿ ಬಹುತೇಕ ಕಡೆ ಚರಂಡಿಯಿಲ್ಲದೆ ನೀರು ಹಾಗೂ ಮಣ್ಣು ಸ್ಥಳೀಯ ಮನೆಗಳಿಗೆ ನುಗ್ಗಿತ್ತು.
ರಸ್ತೆಯನ್ನು ಎತ್ತರಗೊಳಿಸುವ ಉದ್ದೇಶ ದಿಂದ ಮಣ್ಣು ತುಂಬಿಸಲಾಗಿದ್ದು, ಇನ್ನೂ ತಡೆ ಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಮಳೆನೀರು ಹರಿದು ಹೋಗುವುದಕ್ಕೆ ಚರಂಡಿ ಯಿಲ್ಲವಾದ್ದ ರಿಂದ ಬಿ.ಸಿ. ರೋಡು ಸಮೀಪದ ಮಯ್ಯರಬೈಲು ಬಳಿ ಮನೆಯೊಂದರ ಅಂಗಳಕ್ಕೆ ಪೂರ್ತಿ ಕೆಸರು ನುಗ್ಗಿ ತೊಂದರೆಯಾಗಿದೆ. ಅಲ್ಲೇ ಸಮೀಪದ ದೈವಸ್ಥಾನದ ಆವರಣದಲ್ಲೂ ನೀರು ತುಂಬಿದೆ. ಈ ಕುರಿತು ಹೆದ್ದಾರಿ ಇಲಾಖೆಯ ಸಂಬಂಧಪಟ್ಟ ಎಂಜಿನಿ ಯರ್‌ಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ.
ಒಮ್ಮೆಲೆ ಧಾರಾಕಾರ ಮಳೆ ಸುರಿದ ಪರಿಣಾಮ ಹೆಚ್ಚಿನ ಕಡೆಗಳಲ್ಲಿ ತುಂಬಿಸಲಾಗಿದ್ದ ಮಣ್ಣು ಕೊಚ್ಚಿಹೋಗಿದ್ದು, ಕಾಮ ಗಾರಿಗೂ ತೊಂದರೆ ಉಂಟಾಗಿದೆ. ಜಕ್ರಿಬೆಟ್ಟುನಲ್ಲಿ ಪ್ರಸ್ತುತ ತೋಡಿ ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳ ಸಾಗು ತ್ತಿವೆ. ಈ ಹೆದ್ದಾರಿಯು ಪುಂಜಾಲಕಟ್ಟೆವರೆಗೆ ಅಭಿವೃದ್ಧಿ ಗೊಳ್ಳುತ್ತಿದ್ದು, ಅಲ್ಲೂ ಹೆಚ್ಚಿನ ಕಡೆಗಳಲ್ಲಿ ಮಳೆಯಿಂದ ತೊಂದರೆ ಉಂಟಾಗಿದೆ. ಮೂರ್ಜೆಯಲ್ಲಿ ಹೆದ್ದಾರಿ ಯಲ್ಲೇ ಪ್ರವಾಹದ ರೀತಿಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಜೇಸಿಬಿಗಳ ಮೂಲಕ ಚರಂಡಿಗೆ ಅಗೆದು ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಯಿತು.
ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಂಚಾರ ವ್ಯತ್ಯಯ
ಸುಳ್ಯ : ಗಾಳಿ ಮಳೆಗೆ ಪರಿಣಾಮ ನಾರ್ಣಕಜೆ ಬಳಿ ರಸ್ತೆ ಬದಿ ಇದ್ದ ಮರವೊಂದು ರಸ್ತೆ, ವಿದ್ಯುತ್ ಕಂಬಕ್ಕೆ ಬಿದ್ದ ಘಟನೆ ಮೇ 18 ರಂದು ಸಂಭವಿಸಿದೆ. ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬ ಹಾಗೂ ತಂತಿಗೆ ಹಾನಿ ಉಂಟಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮರ ರಸ್ತೆಗೆ ಅಡ್ಡವಾಗಿ ಬಿದ್ದದ್ದರಿಂದ 2 ತಾಸು ಸಂಚಾರಕ್ಕೆ ಅಡ್ಡಿ ಉಂಟಾಯಿತು. ವಾಹನಗಳು ಜಬಳೆ, ಪೈಲಾರು ಮಾರ್ಗವಾಗಿ ಸಂಚರಿಸಿತು. ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಸುಳ್ಳಿ ಮೊದಲಾದವರ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.