Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Team Udayavani, Nov 15, 2024, 1:29 AM IST
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮ ದ ನಾಗವಳಚ್ಚಿಲ್‌ನ ವೃದ್ಧ ರೊಬ್ಬರು ನ. 5ರಂದು ಮನೆಯಿಂದ ಹೊರ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದು, ಅದೇ ದಿನ ಉಳ್ಳಾಲದ ರೈಲು ಹಳಿಯಲ್ಲಿ ಪತ್ತೆಯಾದ ಮೃತದೇಹ ಅವರದ್ದೇ ಎಂದು ತಡವಾಗಿ ಪತ್ತೆ ಹಚ್ಚಲಾಗಿದೆ.
ನಾಗವಳಚ್ಚಿಲ್ ನಿವಾಸಿ ಉಗ್ಗಪ್ಪ ಪೂಜಾರಿ (70) ಮೃತಪಟ್ಟವರು. ಅವರು ನ. 5ರಂದು ಪಾಣೆಮಂಗಳೂರಿನ ಬ್ಯಾಂಕ್ ಶಾಖೆಯೊಂದಕ್ಕೆ ಹೋಗಿ ತನ್ನ ವೃದ್ಧಾಪ್ಯ ವೇತನದ ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಬಂದಿದ್ದರು. ಬಳಿಕ ಸೊಸೆಗೆ ಕರೆ ಮಾಡಿ ಏನೋ ಹೇಳಲು ಯತ್ನಿಸಿ ಕರೆ ಕಡಿತ ಮಾಡಿದ್ದು, ಮತ್ತೆ ಕರೆ ಮಾಡಿದರೆ ಸ್ವೀಕರಿಸದೆ ನಾಪತ್ತೆಯಾಗಿದ್ದರು.
ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ಹೋಗಿದ್ದರು. ಎಲ್ಲ ಕಡೆ ಹುಡುಕಿದರೂ ಉಗ್ಗಪ್ಪ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಪುತ್ರ ಅನಿಲ್ ಕುಮಾರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದೇ ದಿನ ಉಳ್ಳಾಲ ರೈಲು ಹಳಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಅದರ ವಾರಸುದಾರರು ಸಿಗದ ಹಿನ್ನೆಲೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಗುರುವಾರ ಅವರ ಮನೆಯವರು ಬಂದು ಮೃತದೇಹವನ್ನು ಅವರದ್ದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್ ಪ್ಲ್ಯಾನ್
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.