ಬಂಟ್ವಾಳ: ಪ್ರಪಾತಕ್ಕೆ ಬೈಕ್ ಉರುಳಿ ಸಹ ಸವಾರ ಮೃತ್ಯು
Team Udayavani, Apr 10, 2023, 10:57 AM IST
![3-bantwala](https://www.udayavani.com/wp-content/uploads/2023/04/3-bantwala-620x372.jpg)
![3-bantwala](https://www.udayavani.com/wp-content/uploads/2023/04/3-bantwala-620x372.jpg)
ಬಂಟ್ವಾಳ: ರಾ.ಹೆ.75ರ ಬಿ.ಸಿ.ರೋಡು ಸಮೀಪದ ಪೊನ್ನೋಡಿಯಲ್ಲಿ ಬೈಕೊಂದು ಹೆದ್ದಾರಿ ಬದಿಯ ಪ್ರಪಾತಕ್ಕೆ ಉರುಳಿದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಎ.10ರ ಸೋಮವಾರ ನಸುಕಿನ ವೇಳೆ ನಡೆದಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ಚಿಕ್ಕಮಗಳೂರು ಮೂಲದ ಯುವಕ ಯಶೋಧರ ಮೃತಪಟ್ಟ ಯುವಕ. ಘಟನೆಯಲ್ಲಿ ಬೈಕ್ ಸವಾರ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರಿಬ್ಬರು ಬೆಳ್ತಂಗಡಿಯಲ್ಲಿ ಸ್ನೇಹಿತನ ಮನೆಯಲ್ಲಿ ನೇಮ ನೋಡಿಕೊಂಡು ಹಿಂದಿರುಗುವ ವೇಳೆ ಸೋಮವಾರ ನಸುಕಿನ 4ರ ಸುಮಾರಿಗೆ ಈ ಘಟನೆ ನಡೆದಿದೆ. ನಿದ್ದೆಗಣ್ಣಿನಲ್ಲಿ ಬೈಕ್ ಚಲಾಯಿಸಿರುವ ಪರಿಣಾಮ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.