ಎಟಿಎಂನಲ್ಲೇ ಬಾಕಿಯಾಗಿದ್ದ ನಗದನ್ನು ಹಿಂತಿರುಗಿಸಿ ಮಾನವಿಯತೆ ಮೆರೆದ ಕಂದಾಯ ಇಲಾಖೆಯ ಅಧಿಕಾರಿ
Team Udayavani, Mar 2, 2023, 3:34 PM IST
ಬಂಟ್ವಾಳ: ಎ.ಟಿ.ಎಂ.ನಲ್ಲಿ ಬಾಕಿಯಾಗಿದ್ದ ಹಣವನ್ನು ಪೊಲೀಸ್ ಇಲಾಖೆಯ ಸಹಕಾರದಿಂದ ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳದಲ್ಲಿನಡೆದಿದೆ.
ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಸೀತಾರಾಮ ಮಾನವೀಯತೆ ಮೆರೆದ ಅಧಿಕಾರಿ.
ಬಂಟ್ವಾಳ ತಾಲೂಕು ಕಚೇರಿಯ ನಿವೃತ್ತ ಸಿಬ್ಬಂದಿ ಮುಕ್ತಬಾಯಿ ಎಂಬವರು ಹಣ ಕಳೆದುಕೊಂಡಿದ್ದರು.
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಂ.ನಲ್ಲಿ ದೊರೆತ ರೂ.9000 ನಗದನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಇಂದು(ಮಾ.2) ವಾರೀಸುದಾರರಿಗೆ ಪೋಲೀಸರ ಸಮಕ್ಷಮದಲ್ಲಿ ನೀಡಲಾಯಿತು.
ಏನಾಗಿತ್ತು?
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎಟಿಎಂನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಬಂಟ್ವಾಳ ಪೊಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಮುಕ್ತಬಾಯಿ ಎಂದು ತಿಳಿದು ಅವರನ್ನು ಠಾಣೆಗೆ ಕರೆದು ಇಂದು ಮಾ. 2 ರಂದು ಹಸ್ತಾಂತರ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.