Bantwala: ನಿವೃತ್ತ ಸೈನಿಕರ 1.30 ಲಕ್ಷ ರೂ. ನಗದಿದ್ದ ಬ್ಯಾಗ್ ಕಳವು
Team Udayavani, Sep 14, 2024, 12:18 AM IST
ಬಂಟ್ವಾಳ: ರಾಷ್ಟ್ರೀಕೃತ ಬ್ಯಾಂಕೊಂದರ ಬಿ.ಸಿ. ರೋಡು ಶಾಖೆ ಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಡ್ಯಾರ್ ರೈಮಂಡ್ ಲೋಬೋ ನಗರ ನಿವಾಸಿ ಅಂಬ್ರೋಸ್ ಡಿ’ಸೋಜಾ ಹಣ ಕಳೆದುಕೊಂಡ ವರು. ಅವರು ಸೆ. 4ರಂದು ಬ್ಯಾಂಕ್ ಶಾಖೆಗೆ ಆಗಮಿಸಿ ತಮ್ಮ ಖಾತೆಯಿಂದ ಪೆನ್ಶನ್‌ನ 80 ಸಾ.ರೂ. ಡ್ರಾ ಮಾಡಿದ್ದಾರೆ. ಬರುವಾಗ ಅವರಲ್ಲಿ 50 ಸಾವಿರ ರೂ. ಇತ್ತು. ಹೀಗೆ ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗ್ ಅನ್ನು ಬ್ಯಾಂಕಿನ ಟೇಬಲ್ ಮೇಲಿಟ್ಟು ಪಾಸ್‌ಬುಕ್ ಎಂಟ್ರಿ ಮಾಡಿಸಿ ಬಂದು ನೋಡಿದಾಗ ಬ್ಯಾಗ್ ಅಲ್ಲಿರಲಿಲ್ಲ.
ಘಟನೆಯ ಕುರಿತು ಅವರು ಶುಕ್ರವಾರ ದೂರು ನೀಡಿದ್ದಾರೆ. ಅವರ ಬ್ಯಾಗ್ ಹಾಗೂ ಪಾಸ್‌ಪುಸ್ತಕ ಬಿ.ಸಿ. ರೋಡಿನ ಕೈಕುಂಜೆಯಲ್ಲಿ ಪತ್ತೆಯಾಗಿದ್ದು, ಆದರೆ ಅದರಲ್ಲಿ ಹಣವಿರಲಿಲ್ಲ. ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.