ಮಳೆಯಿಂದ ಉರುಳಿದ್ದ ಮರಕ್ಕೆ ಪುನರ್ಜನ್ಮ
ತೆಲಂಗಾಣದ ಸುದ್ದಲಾ ಗ್ರಾಮದಲ್ಲಿರುವ 70 ವರ್ಷದ ಮರ; ಪರಿಸರ ಪ್ರೇಮಿ ದೊಬ್ಟಾಲ ಪ್ರಕಾಶ್‌ರ ಯತ್ನದಿಂದ ಮರದ ಮರುನೆಡುವಿಕೆ
Team Udayavani, Feb 16, 2022, 6:50 AM IST
ಹೈದರಾಬಾದ್: ಸಾಮಾನ್ಯವಾಗಿ ಮಳೆ-ಗಾಳಿಯಿಂದ ಧರೆಗುರುಳುವ ಮರಗಳನ್ನು ಕತ್ತರಿಸಿ, ಒಂದೇ ದಿನದಲ್ಲಿ ಅಲ್ಲಿ ಮರವೊಂದಿತ್ತು ಎಂಬ ಗುರುತೂ ಇಲ್ಲದಂತೆ ಮಾಡುತ್ತಾರೆ. ಆದರೆ, ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಮಳೆಯಿಂದ ನೆಲಕ್ಕುರುಳಿದ್ದ 70 ವರ್ಷದ ಹಳೆಯ ಆಲದ ಮರವನ್ನು ಪುನಃ ನೆಡುವ ಮೂಲಕ ಆ ಮರಕ್ಕೆ ಮರು ಜೀವ ಕೊಡಲಾಗಿದೆ.
ರಾಜಣ್ಣ ಸಿರ್ಸಿಲಾದ ಸುದ್ದಲಾ ಗ್ರಾಮದಲ್ಲಿದ್ದ ಸುಮಾರು 70 ವರ್ಷದ ಆಲದ ಮರವು, ನಾಲ್ಕು ತಿಂಗಳ ಹಿಂದೆ ಸುರಿದ ಗಾಳಿ-ಮಳೆಯಿಂದಾಗಿ ನೆಲಕ್ಕುರುಳಿತ್ತು. ಬುರ್ರಾ ಭೂಮೈಯ್ನಾ ಮತ್ತು ಬುರ್ರಾ ರಮೇಶ್ ಹೆಸರಿನವರಿಗೆ ಸೇರಿದ್ದ ಜಾಗದಲ್ಲಿದ್ದ ಮರವು ನೆಲಕ್ಕುರುಳಿ ಕೆಲ ದಿನಗಳಲ್ಲೇ ನೀರಿಲ್ಲದ ಹಿನ್ನೆಲೆ ಒಣಗಲಾರಂಭಿಸಿತ್ತು.
ಅದನ್ನು ಕಂಡ ಪರಿಸರ ಪ್ರೇಮಿ ಡಾ.ದೊಬ್ಟಾಲ ಪ್ರಕಾಶ್ ಆ ಮರಕ್ಕೆ ಹೇಗಾದರೂ ಮಾಡಿ ಮರುಜೀವ ಕೊಡಬೇಕೆಂದು ನಿರ್ಧರಿಸಿದ್ದಾರೆ. ಪ್ರತಿದಿನ ಅದಕ್ಕೆ ತಾವೇ ನೀರೆರೆದಿದ್ದಾರೆ. ಭೂ ಮಾಲೀಕರ ಅನುಮತಿ ಪಡೆದು, ಆ ಮರವನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲೆಂದು, ಹಲವರಲ್ಲಿ ಸಹಾಯ ಕೇಳಿದ್ದಾರೆ. ರಾಜ್ಯಸಭಾ ಸಂಸದ ಜೆ. ಸಂತೋಷ್ ಕುಮಾರ್ ಮರವನ್ನು ಸ್ಥಳಾಂತರಿಸಲು ಆರ್ಥಿಕ ಬೆಂಬಲ ಕೊಟ್ಟಿದ್ದು, ಇದೀಗ ಮರ ಮತ್ತೆ ತಲೆ ಎತ್ತಿ ನಿಂತಿದೆ.
ಇದನ್ನೂ ಓದಿ:ಯುದ್ಧದಿಂದ ಹಿಂದೆ ಸರಿದ ರಷ್ಯಾ?: ಉಕ್ರೇನ್ ಗಡಿಯಿಂದ ರಷ್ಯಾದ ಕೆಲವು ಸೇನಾ ತುಕಡಿ ವಾಪಸ್
ಮರ ಬಿದ್ದ ಸ್ಥಳದಿಂದ 6 ಕಿ.ಮೀ. ದೂರದಲ್ಲಿ ಅದನ್ನು ಮತ್ತೆ ನೆಡಲಾಗಿದೆ. ಅದನ್ನು ಸ್ಥಳಾಂತರಿಸಲೆಂದು 100 ಟನ್ ತೂಕ ಹೊರಬಲ್ಲ ಲಾರಿಯನ್ನು ತರಿಸಿಕೊಳ್ಳಲಾಗಿತ್ತು. 70 ಟನ್ ಎತ್ತಬಲ್ಲ ಸಾಮರ್ಥ್ಯವಿರುವ 2 ಕ್ರೇನ್‌ನಿಂದ ಮರವನ್ನು ಎತ್ತಲು ಸಾಧ್ಯವಿಲ್ಲವೆಂದು ಅದೇ ಸಾಮರ್ಥ್ಯದ 2 ಕ್ರೇನ್‌ಗಳನ್ನು ತರಿಸಲಾಗಿತ್ತು. ಪ್ರಕಾಶ್, ಸಂತೋಷ್ ಕುಮಾರ್ ಜೊತೆ ಕೆಲವು ಎನ್‌ಜಿಒಗಳೂ ಈ ಕೆಲಸಕ್ಕೆ ಕೈ ಜೋಡಿಸಿದ್ದು, ಮರವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
One of the most satisfying moments in my life. A 70-year old huge banyan #Tree that had been uprooted due to heavy rains in sircilla was translocated with the help of @KTRTRS garu. When I brought this issue to his notice, he immediately instructed concerned officials.
1/2 pic.twitter.com/fmpfh4NZiO
— Santosh Kumar J (@MPsantoshtrs) February 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.