ಸಿದ್ದು ಹೊರತುಪಡಿಸಿ ಉಳಿದ ಕಾಂಗ್ರೆಸ್ ನಾಯಕರು ಗೂಂಡಾಗಳು: ಯತ್ನಾಳ್
Team Udayavani, May 9, 2022, 11:25 PM IST
ಕಲಬುರಗಿ: ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದೆಲ್ಲರೂ ಗೂಂಡಾಗಳೇ ಇದ್ದಾರೆ. ಇಂಥವರ ಕೈಯಲ್ಲಿ ಪಕ್ಷವನ್ನು ನೀಡಿ ಸೋನಿಯಾ ನಿದ್ದೆ ಮಾಡುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಬಿ.ಕೆ.ಹರಿಪ್ರಸಾದ್ ದೇಶದ ಆಂತರಿಕ ಭಯೋತ್ಪಾದಕ. ಇಂಥವರಿಂದಾಗಿ ಪಕ್ಷ ಹಳ್ಳ ಹಿಡಿಯು ತ್ತಿದೆ. ಸಿದ್ದರಾಮಯ್ಯ ಇದ್ದಾರೆನ್ನುವ ಕಾರಣಕ್ಕೆ ಜನರು ಇನ್ನೂ ಕಾಂಗ್ರೆಸ್ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಎಂದರು.
ಆರಗ ಜ್ಞಾನೇಂದ್ರ ಅವರೇ ನಿಮಗಿದು ತೂಗೋ ಖಾತೆಯಲ್ಲ, ನೀಗಿಸಿಕೊಂಡು ಹೋಗುವುದಲ್ಲ. ಕಂದಾಯ ಇಲ್ಲವೇ ಅರಣ್ಯ ಖಾತೆ ತಗೋರಿ. ಯಾರಾದ್ರೂ ಗಟ್ಟಿ ಇದ್ದವರಿಗೆ ಇದನ್ನು ಕೊಡಿ ಎಂದು ಸಲಹೆ ಕೊಟ್ಟಿದ್ದೆ. ಈಗ ನೋಡಿದರೆ ಅವರು ಶಕ್ತಿ ಮೀರಿ ಶ್ರಮಿಸಬೇಕಿದೆ. ಈಗಲೂ ಕಾಲ ಮಿಂಚಿಲ್ಲ. ಖಾತೆ ಬದಲಿಸಬಹುದಾಗಿದೆ ಎಂದರು.
ಮಂಗಳವಾರ ಸಿಎಂ ದಿಲ್ಲಿಗೆ ಹೊರಟಿದ್ದಾರೆ. ಸಚಿವ ಸಂಪುಟವೋ ಮತ್ತೊಂದು, ಮೊಗದೊಂದೋ ನನಗೆ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅವರಿಗೆ ವರಿಷ್ಠರು ಬುದ್ಧಿವಾದ ಹೇಳಿ ಖಾತೆ ನಿರ್ವಹಣೆ ಮತ್ತು ಸಾಂದರ್ಭಿಕ ಘಟನೆಗಳ ನಿರ್ವಹಣೆ ಕುರಿತು ತಿಳಿವಳಿಕೆ ನೀಡಿದರೆ ಸಾಕು.
-ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.