ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ
Team Udayavani, May 14, 2021, 6:00 AM IST
“ಜಾತಿ ಪದ್ಧತಿಯ ಹೋಮ ಕೂಪಕ್ಕೆ
ಬಿದ್ದು, ವೈದಿಕರ ಯಜ್ಞತಾಪಕ್ಕೆ
ಬಲಿಹೋದ ದಲಿತ ಜೀವ ಜೀವರನೆತ್ತಿ, ಮತಿ ವಿಚಾರಕ್ಕೆ
ಕಾಯಕದ ದಿವ್ಯತತ್ವದ ಸುಕ್ಷೇಮ, ಧರ್ಮ ನಾಕಕ್ಕೆ
ನಡೆಸಿದ ಮಹಾತ್ಮನೇ ನಿನಗೆ ನಮೋ – ನಮಃ
ಇದು ರಾಷ್ಟ್ರಕವಿ ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ವಿಶ್ವ ಗುರು ಬಸವೇಶ್ವರರ ಬಗೆಗಿನ ಅಭಿಪ್ರಾಯ.
ವಿಶ್ವೇತಿಹಾಸದಲ್ಲಿ ಸಮಗ್ರ ಕ್ರಾಂತಿಗಳು ಒಂದೊಂದು ಕಾರಣಕ್ಕಾಗಿ ನಡೆದದ್ದು ಸರ್ವವಿದಿತ. ಫ್ರಾನ್ಸ್, ಪೋರ್ಚುಗಲ್, ಲಂಡನ್ ಈಜಿಪ್ಟ್, ಚೀನಾ, ಆಫ್ರಿಕನ್ ರಾಷ್ಟ್ರಗಳು, ಅರಬ್ ರಾಷ್ಟ್ರಗಳು, ಅಮೆರಿಕಾ ಮುಂತಾದ ದೇಶಗಳಲ್ಲಿ ರಾಜಪ್ರಭುತ್ವದ ವಿರುದ್ಧ ನಡೆದ ಕ್ರಾಂತಿಗ ಳಿರಬಹುದು, ದಂಗೆಗಳಿರಬಹುದು, ಧಾರ್ಮಿಕ ಚಳವಳಿಗಳಿರಬಹುದು, ಸಾಮಾಜಿಕ ಅಸಮಾನತೆಯ ಹೋರಾಟ ಗಳಿರಬಹುದು, ಒಂದೊಂದು ಉದ್ದೇಶ ಸಾಧನೆಗಾಗಿ ನಡೆದಂತಹುಗಳು. ಆದರೆ ಭಾರತದ ಕನ್ನಡದ ನೆಲದಲ್ಲಿ 12ನೇ ಶತಮಾನದಲ್ಲಿ ನಡೆದ ಶರಣ ಚಳುವಳಿ ಬಹುಮುಖೀ ಆಯಾಮಗಳನ್ನು ಹೊಂದಿ ದ್ದಂತಹ ಮಾನವೀಯ ನೆಲೆಗಟ್ಟಿನಲ್ಲಿ ನಡೆದಂತಹ ಮಹಾ ಚಳವಳಿಯಾಗಿದ್ದಿತ್ತು. ಇದರ ಮುಂಚೂಣಿ ನಾಯಕರೆ ಕಲ್ಯಾಣದ ಕಲಚೂರಿ ಅರಸರ ಪ್ರಧಾನ ಮಂತ್ರಿ ಯಾದಂತಹ ಬಸವೇಶ್ವರರು.
ಕನ್ನಡ ನಾಡಿನ ಹೆಸರನ್ನು ಜಗದ್ವಿ ಖ್ಯಾತಗೊಳಿಸಿದ ಮಹಿಮಾಪುರುಷ ಬಸವೇಶ್ವರರು. ಸಮಾಜೋಧಾರ್ಮಿಕ ಕ್ರಾಂತಿಯ ಜೊತೆಗೆ ಕನ್ನಡ ನಾಡನ್ನು ಭಕ್ತಿಯ ಹೊಳೆಯಲ್ಲಿ ಮೀಯಿಸಿದ ಮಹಾಪುರುಷರು. ಭಕ್ತಿಯ ರಸವನ್ನು ಮನೆಮನೆಗೆ ಹಂಚಿ ಸಾಮಾನ್ಯರನ್ನು ಅಸಾಮಾನ್ಯ ನನ್ನಾಗಿ ಮಾಡಿದರು. ಜ್ಞಾನಗಂಗೆಯ ಅಮೃತವನ್ನು ಅಂತ್ಯಜರಿಗೆ ದಣಿ ವರಿಯೆ ಉಣಿಸಿದ ವರು. ಇವರು ಆಡಿದ ನುಡಿ “ವಚನ’ ವಾಯಿತು. ಅದು ಎಂದೆಂದಿಗೂ ಸಾರ್ವ ಕಾಲಿಕವಾಗಿ ಸಲ್ಲುವ ಸತ್ಯವಾ ಯಿತು. ಅಮೃತ ಅಮರ ಸಾಹಿತ್ಯ ವಾಯಿತು. ಅನುಭವದ ಚಿಂತನೆಯ ಅನುಭಾವ ಕ್ಕೋಸ್ಕರ ಅನುಭವ ಮಂಟ ಪದ ನಿರ್ಮಾತೃಗಳಾದರು. ಬಿಜ್ಜಳನ ಆಸ್ಥಾನ ದಲ್ಲಿ ಅರ್ಥಭಂಡಾರಿಯಾಗಿ ದ್ದರೂ ಅರ್ಥವನ್ನು ಒಂದರೆಗಣ್ಣಿನಿಂದ ನೋಡದೆ ಕೇವಲ ಭಕ್ತಿಭಂಡಾರಿಯಾ ದರು.
ಬಸವಣ್ಣನವರನ್ನು ಜಗತ್ತು ಯುಗ ಪುರುಷನೆನ್ನುತ್ತದೆ. ಮಹಾತ್ಮ ಎಂದು ಕರೆಯುತ್ತದೆ. ಮಹಾತ್ಮನಾಗುವುದು ಅಷ್ಟು ಸುಲಭವೆ? ಅದಾಗಲು- ಮೊದಲು ಆತ ಆತ್ಮಶುದ್ಧನಾಗಿರಬೇಕು. ಮೊದಲು ಆತ್ಮೋದ್ಧಾರ ಆನಂತರ ಲೋಕೋದ್ಧಾರ ನಡೆಯಬೇಕು. ಬಸವಣ್ಣನವರಿಗೆ ಇದು ಗೊತ್ತಿದ್ದೇ ಮೊದಲು ಅವರು ತಮ್ಮ ಕಾಯಾ – ವಾಚಾ – ಮನಸಾ ತ್ರಿಕರಣಗಳ ಶುದ್ಧಿಯಡೆಗೆ ಲಕ್ಷ್ಯವಿತ್ತರು….
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯವರ ದುಃಖಕ್ಕೆ ಮೆಚ್ಚ ನಮ್ಮ ಕೂಡಲಸಂಗಮದೇವ
ಆತ್ಮನನ್ನು ಉದ್ಧರಿಸು ಅಂದರೆ ನೀನು ಜಗತ್ತನ್ನು ಉದ್ಧರಿಸುವೆ (Give your personality a lift, then you will lift the whole world..) ಎನ್ನುವಂತೆ ಮೊದಲು ತನ್ನ ಮನದ ಅಂಕು – ಡೊಂಕುಗಳನ್ನು ಸರಿಪಡಿಸಿಕೊಳ್ಳ ಬೇಕು. ಕಾಲೈìಲ್ ಹೇಳುವಂತೆ….. “ನೀನು ನಿನ್ನನ್ನು ಸುಧಾರಿಸು, ಅಂದರೆ ಜಗತ್ತಿನಲ್ಲಿ ಒಬ್ಬ ದುರುಳ ಕಡಿಮೆ ಯಾಗುವುದರಲ್ಲಿ ಸಂದೇಹವೇ ಇಲ್ಲ’. ಅದಕ್ಕಾಗಿ ಬಸವಣ್ಣನವರು…
ಪರಚಿಂತೆ ನಮಗೇಕಯ್ಯ!
ನಮ್ಮ ಚಿಂತೆ ನಮಗೆ ಸಾಲದೆ?
ಕೂಡಲ ಸಂಗಯ್ಯ ಒಲಿದಾನೋ ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು
ಅವರಿಗೆ ದೈವಿಕ ಹಂಬಲ ಅತ್ಯಂತ ಉತ್ಕಟವಾಗಿದ್ದಿತು. ನಾಯಕನಾಗು ವವನು ಹೇಗಿರಬೇಕು? ಎಂಬುದಕ್ಕೆ ಬಸವೇಶ್ವರರ ವ್ಯಕ್ತಿತ್ವ ಉತ್ತಮ ನಿದರ್ಶನ. ಆ ಚಾರಿತ್ರಿಕ ಶುದ್ಧಿಯ ಹಿನ್ನೆಲೆಯಲ್ಲಿ ಅವರು ಕೈಗೊಂಡ ಲೋಕ ಕಲ್ಯಾಣ ಕಾರ್ಯಗಳು ಯಶಸ್ವಿಯಾದವು.
– ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಹಿರೇಮಠ, ಜದೆ ,ಸೊರಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.